ಕೆಲವರು ನಾಲ್ಕು ಹೆಜ್ಜೆ ಅಡ್ಡಾಡಲೂ ಬೇಸರಿಸಿಕೊಳ್ಳುತ್ತಾರೆ, ಅಂಥವರು ಓದಿ : ನೀವು ಪ್ರತಿದಿನ ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ?

By Infoflick Correspondent

Updated:Wednesday, October 27, 2021, 08:30[IST]

ಕೆಲವರು ನಾಲ್ಕು ಹೆಜ್ಜೆ ಅಡ್ಡಾಡಲೂ ಬೇಸರಿಸಿಕೊಳ್ಳುತ್ತಾರೆ, ಅಂಥವರು ಓದಿ : ನೀವು ಪ್ರತಿದಿನ ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ?

ಪ್ರತಿಯೊಬ್ಬ ಮನುಷ್ಯನು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸುದ್ದಿಯನ್ನು ಓದಲೇಬೇಕು. ಆಗಿನ ಕಾಲದಲ್ಲಿ ಓಡಾಡಲು ಗಾಡಿಗಳಿರಲಿಲ್ಲ. ಹತ್ತಿದರೆ ಎತ್ತಿನ ಗಾಡಿ ಬಿಟ್ಟರೆ ಕಾಲು ದಾರಿ ಎರಡೇ ಅವಕಾಶ ವಿದ್ದದ್ದು. ಆದರೆ ಈಗ ಹಾಗಲ್ಲ. ಮನೆಯಲ್ಲಿರುವ ಜನರಿಗಿಂತ ಗಾಡಿಗಳ ಸಂಖ್ಯೆಯೇ ಹೆಚ್ಚಂತೆ. ಅಧ್ಯಾಯನ ಒಂದರ ಪ್ರಕಾರ ನಗರ ಒಂದರಲ್ಲಿ ಜನಸಂಖ್ಯೆಗಿಂತಲೂ ಡಬಲ್ ಸಂಖ್ಯೆಯಲ್ಲಿ ವಾಹನಗಳಿವೆಯಂತೆ. 

ಜನರೂ ಅಷ್ಟೇ, ಪಕ್ಕದ ಬೀದಿಗೆ ಹೋಬೇಕೆಂದರೂ ಗಾಡಿ ಮೇಲೆ ಕೂತು ಬಿಡುತ್ತಾರೆ. ವಾಕಿಂಗ್ ಮಾಡಿ ಎಂದು ಡಾಕ್ಟರ್ ಹೇಳಿದರೆ ಮೂಗು ಮುರಿಯುತ್ತಾರೆ. ಆದರೆ ನಿಮಗೊಂದು ವಿಷಯ ಗೊತ್ತಾ.? ಒಬ್ಬ ಮನುಷ್ಯ ಆರೋಗ್ಯವಾಗಿರಲು ದಿನ ಒಂದಕ್ಕೆ 10,000 ಹೆಜ್ಜೆಯನ್ನು ನಡೆಯಬೇಕಂತೆ. ಹತ್ತು ಸಾವಿರ ಹೆಜ್ಜೆ ಇಟ್ಟರೆ ಅಂತಹವರ ಆರೋಗ್ಯ ತುಂಬಾ ಚೆನ್ನಾಗಿರುತ್ತಂತೆ. ಅಧ್ಯಾಯವನ್ನು ನಡೆಸಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ಈ ಸತ್ಯವನ್ನು ಹೊರ ಹಾಕಿದೆ. 

ಈ ವಿವಿಯ ಅಧ್ಯಾಯನದ ಪ್ರಕಾರ, ಒಬ್ಬ ಮನುಷ್ಯನ ಆರೋಗ್ಯ, ಹೃದಯ ಚೆನ್ನಾಗಿ ಕೆಲಸ ಮಾಡಬೇಕೆಂದರೆ, ಆತ ನಡೆದಾಡಬೇಕಂತೆ. 2011ರ ಅಧ್ಯಾಯನದ ಪ್ರಕಾರ ಒಬ್ಬ ಮನುಷ್ಯ ದಿನಕ್ಕೆ 4000 ದಿಂದ 18000 ಹೆಜ್ಜೆ ಇಡಬೇಕಂತೆ. ಅಟ್ಲೀಸ್ಟ್ 10,000 ಹೆಜ್ಜೆ ಇಟ್ಟರೆ ತುಂಬಾ ಒಳ್ಳೆಯದಂತೆ. ಇದರಿಂದ ನಿಮ್ಮ ದೇಹದ ತೂಕವೂ ಸಮತೋಲನ ಕಾಪಾಡಿಕೊಳ್ಳುತ್ತದೆ. ಆಗ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ನೋಡಿ ಓದುಗರೇ.. ನಿಮ್ಮ ಆಋೋಗ್ಯ ನಿಮ್ಮ ಕೈಯಲ್ಲಿ. ಮಿಸ್ ಮಾಡದೇ ನಿತ್ಯ ವಾಕ್ ಮಾಡುವುದನ್ನು ರೂಢಿಸಿಕೊಳ್ಳಿ..