ಕೊರೊನಾ ವೈರಸ್ ಯಾರನ್ನು ಹೆಚ್ಚು ಕಾಡುತ್ತೆ: ವೈರಸ್ ಯಾರಿಗೆ ಅಪಾಯಕಾರಿ..?

Updated: Tuesday, May 4, 2021, 22:06 [IST]

ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದ್ದು, ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಭಾರತದಲ್ಲಂತೂ ಕ್ಷಣ ಕ್ಷಣಕ್ಕೂ ಮಹಾಮಾರಿ ಮರಣಮರದಂಗ ಬಾರಿಸುತ್ತಿದೆ. ಹೀಗಿರುವಾಗ ಕೊರೊನಾ ವೈರಸ್ ಯಾರನ್ನು ಹೆಚ್ಚು ಕಾಡುತ್ತೆ ಎಂಬುದನ್ನು ನೋಡೋಣ ಬನ್ನಿ..

ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ಕೊರೊನಾ ವೈರಸ್ ತಗಲಿದರೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ. ಹಿರಿಯ ನಾಗರಿಕರಿಗೆ ಡಯಾಬಿಟಿಸ್ ಇದ್ದರೆ, ಅಂತಃವರು ತುಂಬಾ ಎಚ್ಚರಿಕೆಯಿಂದ ಬೇಕಾಗಿದೆ. ಶುಗರ್ ಪೇಶಂಟ್ ಗಳು ಕೊರೊನಾಗೆ ತುತ್ತಾದರೆ, ವೈರಸ್ ಕಣ್ಣು, ಕಿಡ್ನಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ.

ತೂಕ ಹೆಚ್ಚಾಗಿರುವವರಲ್ಲೂ ವೈರಸ್ ಹೆಚ್ಚಾಗಿ ಹರಡುತ್ತಿದೆ. ಕೇವಲ ಬೊಜ್ಜು ದೇಹಿಗಳಲ್ಲಿ ಮಾತ್ರ ಸಾಂಕ್ರಾಮಿಕದ ತೀವ್ರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಕಲ್ಪನೆಯನ್ನು ಹೋಗಲಾಡಿಸಿರುವ ಸಂದರ್ಭದಲ್ಲೇ ಹೊಸ ಅಧ್ಯಯನ ಹೊರಬಿದ್ದಿದೆ.    

ಗರ್ಭಿಣಿಯರು ಆರೋಗ್ಯವಂತ ವಯಸ್ಕರಿಗಿಂತ ಹೆಚ್ಚು ಅಪಾಯಕಾರಿ. ಹೆಚ್ಚಾಗಿ, ಗರ್ಭಿಣಿಯರು ಫ್ಲೂ ತರಹದ ರೋಗಲಕ್ಷಣಗಳನ್ನು ಮಾತ್ರ ಅನುಭವಿಸುತ್ತಾರೆ. ಗರ್ಭಿಣಿಯರಿಗೆ ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಬೇಕು.  ಮಹಿಳೆಯರಲ್ಲಿ, ಗರ್ಭಧಾರಣೆಯ ಸಂದರ್ಭ ದೇಹವು ಹಲವು ವೈರಲ್ ಸೋಂಕುಗಳೊಂದಿಗೆ ಹೋರಾಡುತ್ತದೆ. ಹೀಗಾಗಿ ಎಂದಿನಂತೆ ಹೆಚ್ಚಿಗೆ ಜಾಗರೂಕರಾಗಿರಬೇಕು. 

ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್ ರೋಗಿಗಳಿಗೆ ವಯರಸ್ ತಗುಲಿತ್ತು. ಇವರಲ್ಲಿ ವೈರಸ್ ತುಂಬಾ ದೊಡ್ಡ ಪರಿಣಾಮವನ್ನು ಬೀರಿತ್ತು. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು.ಕ್ಯಾನ್ಸರ್ ನಂತಹ ಗಂಭೀರವಾದ ಕಾಯಿಲೆ ಇದ್ದಲ್ಲಿ ಕೊರೋನಾದಿಂದ ತೊಂದರೆಗಳು ಕಂಡುಬಂದಿವೆ. 

ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು 2ನೇ ಅಲೆ ಹಿರಿಯರು, ವಯಸ್ಕರು ಮಾತ್ರವಲ್ಲದೇ ಮಕ್ಕಳಿಗೂ ಅತ್ಯಂತ ಅಪಾಯಖಾರಿಯಾಗಿದೆ. ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸೋಂಕಿಗೆ ತುತ್ತಾದ ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ಗಮನಿಸಿದ್ದಾರೆ. ಇಂತಹ ಲಕ್ಷಣಗಳನ್ನು ಈ ಹಿಂದೆ ಅಂದರೆ ಮೊದಲ ಅಲೆಯಲ್ಲಿ ನೋಡಿರಲಿಲ್ಲ. ಆದರೆ 2ನೇ ಅಲೆ ವೇಳೆ ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಮಕ್ಕಳಲ್ಲಿ ವೈರಸ್ ಅತಿ ಹೆಚ್ಚಾಗಿ ಹರಡುತ್ತಿದೆ.