ಕೊರೊನಾ ಮೂರನೆ ಅಲೆ ಬರೋದಕ್ಕೆ ಸಾಧ್ಯವೇ ಇಲ್ಲ ಎಂದ ವೈದ್ಯರು: ಇದು ಎಷ್ಟು ಸತ್ಯ ಅಂತ ನೀವೇ ನೋಡಿ..

Updated: Friday, June 11, 2021, 20:48 [IST]

ಕೊರೊನಾ ಮಹಾಮಾರಿಗೆ ನಡುಗುತ್ತಿರುವ ಜನ ಮುಂದೆ ಮೂರನೆ ಅಲೆ ಬರುತ್ತದೆ, ಅದು ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ ಎಂಬ ಭಯದಲ್ಲಿದ್ದಾರೆ. ಹೇಗೆ ಮಕ್ಕಳನ್ನು ಮೂರನೇ ಅಲೆಯಿಂದ ಕಾಪಾಡಬೇಕು ಎಂಬ ಬಗ್ಗೆ ಮಾಹಿತಿಕಲೆ ಹಾಕುತ್ತಿದ್ದಾರೆ. ಇನ್ನು ಚೀನಾದಲ್ಲಿ ಈಗಾಗಲೇ ನಾಲ್ಕನೇ ಅಲೆ ಬಂದಿದೆ ಎಂದು ಹೇಳಲಾಗುತ್ತಿದೆ. 

ಆದರೆ, ಇದೆಲ್ಲದರ ನಡುವೆ ಮೂರನೇ ಅಲೆ ಬರೋದಕ್ಕೆ ಸಾಧ್ಯವೇ ಇಲ್ಲ ಅಂತಾರೆ ಇಲ್ಲೊಬ್ಬರು ವೈದ್ಯರು. ಅದು ಎಷ್ಟು ನಿಜ. ಯಾರು ಆ ವೈದ್ಯರು. ಅವರು ಹೇಳುತ್ತಿರುವುದಾದರೂ ಏನು ಅಂತ ನೋಡೋಣ ಬನ್ನಿ. 

ಡಾ.ರಾಜು ಕೃಷ್ಣಮೂರ್ತಿ ನಿತ್ಯ ಸಾಮಾಜಿ ಜಾಲತಾಣದ ಮೂಲಕ ವಿಡಿಯೋಗಳನ್ನು ಮಾಡಿ ಜನರಿಗೆ ಧೈರ್ಯ ತುಂಬುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮೂರನೇ ಅಲೆ ಬರೋದಕ್ಕೆ ಸಾಧ್ಯವೆ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ ಈ ಎರನೇ ಅಲೆಯಲ್ಲಿ ನವಜಾತ ಶಿಶುವಿನಿಂದ ಹಿಡಿದು ಪ್ರತಿಯೊಬ್ಬರು ಸೋಂಕಿಗೆ ತುತ್ತಾಗಿರುವುದು ಎಂದಿದ್ದಾರೆ ವೈದ್ಯರು.  

ಹೌದು.. ಈ ಕೊರೊನಾ ಎರಡನೇ ಅಲೆಯಲ್ಲಿ ಭಾರತದ ಪತ್ರಿಯೊಬ್ಬ ವ್ಯಕ್ತಿಗೂ ಸೋಂಕು ತಗುಲಿದೆ. ಇದರಿಂದ ಪ್ರತಿಯೊಬ್ಬರಲ್ಲು ಆಂಟಿಬಾಡಿಸ್ ಉತ್ಪತ್ತಿಯಾಗಿವೆ. ಈ ಕಾರಣದಿಂದ ಮೂರನೇ ಅಲೆ ಬರಲು ಸಾಧ್ಯವಿಲ್ಲ. ಮೊದಲ ಅಲೆ ಬಂದಾಗ ನಾವು ಯಾರೂ ಸರಿಯಾಗಿ ನಿರ್ವಹಸಿರಲಿಲ್ಲ. ಆಗ ಕೆಲವರಿಗೆ ಸೋಂಕು ತಗುಲಿರಲಿಲ್ಲ. ಇಂದರಿಂದ ಮ್ಯೂಟೆಂಟ್ ಆಗಿರುವ ವೈರಸ್ ಎರಡನೇ ಅಲೆ ಬರುವಂತೆ ಮಾಡಿದೆ. ಆದರೀಗ ಮೂರನೇ ಅಲೆಗೆ ದೇಶದಲ್ಲಿ ಜಾಗವಿಲ್ಲ ಎಂದಿದ್ದಾರೆ. 
ಇನ್ನು ಕೊರೊನಾ ವೈರಸ್ ಬಂದವರು ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸುಖಾಸುಮ್ಮನೆ ಆಸ್ಪತ್ರೆಗೆ ಹೋಗುವ ಬದಲು, ವೈರಸ್ ಉಲ್ಬಣಗೊಂಡಾಗ ಮಾತ್ರ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ.