12 ರಾಶಿಯವರು ನಿಮ್ಮ ರಾಶಿಯ ಅನುಸಾರ ಯಾವ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು..

Updated: Thursday, November 25, 2021, 19:06 [IST]

12 ರಾಶಿಯವರು ನಿಮ್ಮ ರಾಶಿಯ ಅನುಸಾರ ಯಾವ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು..

12 ರಾಶಿಯವರು ನಿಮ್ಮ ರಾಶಿಯ ಅನುಸಾರ ಯಾವ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು..

ನಾವು ಜನಿಸಿದ ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ನಮ್ಮ ಸ್ವಭಾವವು ರೂಪಿತವಾಗಿರುತ್ತದೆ. ಕೆಲವು ರಾಶಿಯು ಕೋಪದ ಸಂಕೇತವಾದರೆ ಆ ರಾಶಿಯಲ್ಲಿ ಜನಿಸಿದವರು ಕೂಡ ಕೋಪಿಷ್ಟರಾಗಿರುತ್ತಾರೆ. 

ಆಯಾ ರಾಶಿಗಳ ಪ್ರಕಾರ ಆಯಾ ದೇವರನ್ನು ಪೂಜಿಸಿದರೆ ಸಕಲ ಸಂತೃಪ್ತಿ,ಸುಖ,ಶಾಂತಿ ಪಡೆಯಬಹುದು.ಹಿಂದೂ ಧರ್ಮಗಳಲ್ಲಿ ಒಂದಾದ ಅತೀ ಪ್ರಾಚೀನ ಪುರಾಣಗಳಲ್ಲಿ ಒಂದಾದ ಅಗ್ನಿ ಪುರಾಣದ ಪ್ರಕಾರ ಒಂದೆಡೆ ಹೀಗೆ ಬರೆಯಲಾಗಿದೆ. ಜ್ಯೋತಿಶ್ಶಾಸ್ತ್ರ ಅಥವಾ ಜ್ಯೋತಿಷ್ಯ ಎಂಬುದು ಒಂದು ನಂಬಿಕೆ ಮಾತ್ರವಲ್ಲ. ಇದೊಂದು ಸುಸ್ಪಷ್ಟವಾದ ವಿಜ್ಞಾನವಾಗಿದೆ. ಓರ್ವ ವ್ಯಕ್ತಿಯ ಹುಟ್ಟಿದ  ದಿನಾಂಕ ರಾಶಿಗಳನ್ನು ಪರಿಗಣಿಸಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬಹುದು.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಭಾರತದಲ್ಲಿ ಹಿಂದೂ ಧರ್ಮವು  ಅತೀ  ಪುರಾತನವಾಗಿದ್ದು ಜ್ಯೋತಿಶ್ಶಾಸ್ತ್ರವನ್ನು  ಬಲವಾಗಿ ಪ್ರತಿಪಾದಿಸಿಸುವ  ಒಂದು ಪ್ರಮುಖ ಕೆಲಸವನ್ನು ಜ್ಯೋತಿಶ್ಶಾಸ್ತ್ರಾದ ಪ್ರಕಾರವೇ  ಪರಿಗಣಿಸಿ, ಪ್ರಾರಂಭಿಸುವ ಮತ್ತು ಕೊನೆಗೊಳಿಸುವ ವಿಧಿಯನ್ನು ಅನುಸರಿಸುತ್ತದೆ.ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ಮೂರು ಪಂಥಗಳಿವೆ. 

ಶ್ರೀ ವಿಷ್ಣುವನ್ನು ಆರಾಧಿಸುವವರನ್ನು ವೈಷ್ಣವರು

ಶಿವನನ್ನು  ಆರಾಧಿಸುವವರು ಶೈವರು

ಶಕ್ತಿಯನ್ನು ಆರಾಧಿಸುವವರು  ಶಾಂತರು ಎಂದು ಕರೆಯಲಾಗಿದೆ.

ಹಿಂದೂ ಪುರಾಣಗಳ  ಪ್ರಕಾರ  ಒಟ್ಟು 33  ಕೋಟಿ ದೇವರಿದ್ದಾರೆ. ಇವರೆಲ್ಲರೂ ವಿಷ್ಣು,ಶಿವ,ಶಕ್ತಿಯ  ಅವತಾರಗಳೆಂದು ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ಹಲವಾರು ಒಳ ಪಂಗಡಗಳಿದ್ದು ಆಯಾ ಪಂಗಡಗಳು ವಿವಿಧ ದೇವರನ್ನು ಪೂಜಿಸುತ್ತಾರೆ. ಆದರೆ ಒಂದೇ  ದೇವರನ್ನು ಪೂಜಿಸಬೇಕು ಎಂಬ ಕಾನೂನು, ಕಡ್ಡಾಯವೇನು  ಇಲ್ಲ.ಮನೆತನದ ದೇವರುಗಳನ್ನು ಮನೆ ದೇವರೆಂದು, ತಮಗೆ ಇಷ್ಟವಾದ ದೇವರನ್ನು ಇಷ್ಟದೇವರೆಂದು ಕರೆಯುವ ವಾಡಿಕೆ.

ಆಗ್ನಿ ಪುರಾಣದ ಪ್ರಕಾರ  ಮತ್ತು ನಿಮ್ಮ ರಾಶಿ ಚಕ್ರದ ಪ್ರಕಾರ ಯಾವ ದೇವರು ಆ ರಾಶಿಯಲ್ಲಿ ಪ್ರಾಬಲ್ಯವನ್ನು ಪಡೆದಿರುತ್ತಾರೋ ಆ ದೇವರನ್ನು ಪೂಜಿಸುವುದರಿಂದ ಹೆಚ್ಚಿನ ಹೆಚ್ಚಿನ ಫಲ ದೊರೆಯುತ್ತದೆ. ರಾಶಿ ಫಲವನ್ನು ಕಂಡುಕೊಳ್ಳಲು ಹಿಂದೂ ಪುರಾಣದಲ್ಲಿ ಹುಟ್ಟಿದ ಸಮಯ ಮತ್ತು ದಿನಾಂಕವನ್ನು ಪರಿಗಣಿಸಲಾಗುತ್ತದೆ.

ಈ ಎರಡು ವಿಷಯಗಳು ಸರಿಯಾಗಿ ಗೊತ್ತಾದರೆ ರಾಶಿ ಫಲದ ಪ್ರಕಾರ ಯಾವ ದೇವರು ಪ್ರಾಭಲ್ಯವನ್ನು ಹೊಂದಿರುತ್ತಾರೆ ಎಂದು ಗೊತ್ತಾಗುತ್ತದೆ. ಒಂದು ವೇಳೆ ನಿಮ್ಮ ರಾಶಿ ಯಾವುದೆಂದು ನಿಮಗೆ ಗೊತ್ತಿದ್ದೂ, ಯಾವ ದೇವರನ್ನು ಪೂಜಿಸಬೇಕು ಎಂದು ನಿಮಗೆ ಗೊತ್ತಿಲದೇ ಹೋದರೆ ಈ ಕೆಳಗಿನ ವಿವರಣೆಯನ್ನು ನೀವು ನೋಡಿ ತಿಳಿಯಬಹುದು.

1.ಮೇಷ ರಾಶಿ-   ಮೇಷ ರಾಶಿಯನ್ನು   ಮಂಗಳನು ಅಧಿಪತ್ಯವನ್ನು ವಹಿಸಿತ್ತಿರುತ್ತಾನೆ. ಆದ್ದರಿಂದ ಮಂಗಳನ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

2.ವೃಷಭ –  ವೃಷಭ ರಾಶಿಗೆ ಅಧಿಪತಿ ಶುಕ್ರ.ಆದ್ದರಿಂದ ಶುಕ್ರ ಗ್ರಹದ ಅಧಿಪತಿಯಾಗಿರುವ ಲಕ್ಷ್ಮೀಯನ್ನು ಪೂಜಿಸುವುದರ ಮೂಲಕ ಧನಾತ್ಮಕ ಶಕ್ತಿಯು ಹೆಚ್ಚಾಗಿ, ಸಂಪತ್ತು, ಸಮೃದ್ಧಿ ಅದೃಷ್ಟವನ್ನು ಪಡೆಯಬಹುದು.

3.ಮಿಥುನ -ಮಿಥುನ ರಾಶಿಯ ಅಧಿಪತಿ ಬುಧ.ಆದ್ದರಿಂದ ಬುಧನ ಅಧಿಪತ್ಯವನ್ನು ಹೊಂದಿರುವ ಶ್ರೀಮನ್ನಾರಾಯಣನನ್ನು ಆರಾಧಿಸುವ ಮೂಲಕ ಬಹಳಷ್ಟು ಒಳ್ಳೆಯದಾಗುವುದು.

4.ಕಟಕ-ಕಟಕ ರಾಶಿಯನ್ನು ಕರ್ಕಾಟಕ ರಾಶಿ ಎಂದು ಸಹ ಕರೆಯುತ್ತಾರೆ. ಈ ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಅಧಿಪತಿಯಾದ ದೇವತೆ ಗೌರಿ. ಗೌರಿ ಎಂದರೆ ಶಾಂತಿ,ಸಹಾನುಭೂತಿ, ಕರುಣೆಯ ಸಾಕಾರ ರೂಪವಾಗಿರುವ ಗೌರಿಯನ್ನು ಪೂಜಿಸುವುದರಿಂದ ಈ ಗುಣಗಳನ್ನು ಪಡೆಯಬಹುದು.

5.ಸಿಂಹ-ಸಿಂಹ ರಾಶಿಗೆ ಅಧಿಪತಿ ಸೂರ್ಯ.ಸೂರ್ಯನ ಅಧಿಪತ್ಯವನ್ನು ಹೊಂದಿರುವ ಆ ಶಿವನೇ ಲೋಕಾಧಿಪತಿಯಾಗಿದ್ದು, ಶಿವನನ್ನು ಆರಾಧಿಸುವುದು ಸುಲಭ. ಶಿವ ಸುಲಭವಾಗಿ ಒಲಿಯುವವನಾಗಿದ್ದು. ಆದ್ದರಿಂದ ಈ ರಾಶಿಯವರು ಶಿವನನ್ನು ಆರಾಧಿಸಿದರೆ ಸಕಲ ಇಷ್ಟಾರ್ಥವು ಸಿದ್ಧಿಸುತ್ತವೆ.

6.ಕನ್ಯಾ- ಕನ್ಯಾ ರಾಶಿಗೆ ಅಧಿಪತಿ ಬುಧ,ಆದ್ದರಿಂದ ಬುಧನ  ಅಧಿಪತಿಯಾಗಿರುವ ವಿಷ್ಣುವನ್ನು ,ವಿಷ್ಣುವಿನ ಇನ್ನೊಂದು  ಅವತಾರವೇ ಆಗಿರುವ ಶ್ರೀಮನ್ನಾರಾಯಣನನ್ನು ಪೂಜಿಸಿದರೆ ಆದಾಯ ಹೆಚ್ಚುವುದು.

7.ತುಲಾ-ತುಲಾ ರಾಶಿಯನ್ನು ಶುಕ್ರ ಗ್ರಹ ಆಳುತ್ತಾನೆ.ಶುಕ್ರ ಗ್ರಹದ ಅಧಿಪತ್ಯವನ್ನು ಹೊಂದಿರುವ ಲಕ್ಷ್ಮೀಯನ್ನು ಆರಾಧಿಸಿದರೆ ಸಕಲ ಸಮೃದ್ಧಿ, ಧನ ಸಂಪತ್ತು ಹೆಚ್ಚುತ್ತದೆ.

8 ವೃಶ್ಚಿಕ- ವೃಶ್ಚಿಕ ರಾಶಿಯನ್ನು ಮಂಗಳ ಗ್ರಹ ಆಳುತ್ತಾನೆ.ಮಂಗಳ ಗ್ರಹದ ಅಧಿಪತಿ ಶಿವ ಆದ್ದರಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ.

9.ಧನಸ್ಸು- ಧನಸ್ಸು ರಾಶಿಯ ಅಧಿಪತಿ ಗುರು ಗ್ರಹ,ಗುರು ಗ್ರಹದ ಅಧಿಪತ್ಯವನ್ನು ಹೊಂದಿರುವ ದಕ್ಷಿಣಾಮೂರ್ತಿಯನ್ನು ಆರಾಧಿಸಿದರೆ ಜ್ಞಾನ, ಬುದ್ದಿ ಮತ್ತು ತಿಳುವಳಿಕೆ ಹೆಚ್ಚುತ್ತದೆ.ದಕ್ಷಿಣಾ ಮೂರ್ತಿಯೂ ಸಹ ಶಿವನ ಅವತರಾಗಳಲ್ಲಿ ಒಂದು ಅವತಾರವೇ ಆಗಿರುವುದು.

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

10.ಮಕರ-ಮಕರ ರಾಶಿಯನ್ನು ಆಳುವುದು ಶನಿ ಗ್ರಹ.ಆದ್ದರಿಂದ ಪರಮೇಶ್ವರನಾದ ಶಿವನನ್ನು ಪೂಜಿಸಿದರೆ ಒಳ್ಳೆಯದು.

11.ಕುಂಭ-ಕುಂಭ ರಾಶಿಯ ಅಧಿಪತಿಯೂ ಸಹ  ಶನಿ. ಆದ್ದರಿಂದ ಶಿವನನ್ನೇ ಆರಾಧನೆ ಮಾಡಿದರೆ ಸಕಲವನ್ನು ಕರುಣಿಸುವನು.

12.ಮೀನ-ಮೀನ ರಾಶಿಯ  ಅಧಿಪತಿ  ಗುರು ಗ್ರಹ .ಗುರು ಗ್ರಹದ ಅಧಿಪತಿಯಾಗಿರುವ ದಕ್ಷಿಣಾಮೂರ್ತಿಯನ್ನು ಆರಾಧಿಸಿದರೆ ಒಳ್ಳೆಯದು,ಉತ್ತಮ ಫಲವನ್ನು ಪಡೆಯಬಹುದು.