ವರ್ಷ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ: ಗಣಪತಿ ವಿಗ್ರಹದ ಮಹತ್ವ ಏನು ಗೊತ್ತಾ..?

By Infoflick Correspondent

Updated:Thursday, January 6, 2022, 11:30[IST]

ವರ್ಷ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ: ಗಣಪತಿ ವಿಗ್ರಹದ ಮಹತ್ವ ಏನು ಗೊತ್ತಾ..?

ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ವರ್ಷ ಭವಿಷ್ಯ ನುಡಿದಿದ್ದು, ಯಾವ ರಾಶಿಗೆ ಲಾಭ, ಅಶುಭ, ಪರಿಹಾರವೇಣು ಎಂಬುದನ್ನು ತಿಳಿಸಿದ್ದಾರೆ. ಇನ್ನು ಕೆಲ ತಿಂಗಳ ಹಿಂದೆ ಕೊರೊನಾ ಕುರಿತು ಭವಿಷ್ಯ ನುಡಿದಿದ್ದ ಗುರೂಜಿ, ಕಲಿಯುಗ ಅಂತ್ಯದ ಬಗ್ಗೆ ಮಾತನಾಡಿದ್ದರು. ಆ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದ್ದರು. 2021ರ ಡಿಸೆಂಬರ್ ತಿಂಗಳಾಂತ್ಯದಿಂದ ಆರಂಭವಾಗಿ ಕೇವಲ ಆರು ವರ್ಷಗಳಲ್ಲಿ ಕಲಿಯುಗ ಕೊನೆಯಾಗುತ್ತದೆ. ವಿಷ್ಣುವಿನ ಬದಲು ಜನರು ನರಸಿಂಹನನ್ನು ಪೂಜಿಸುತ್ತಾರೆ ಎಂದು ಹೇಳಿದ್ದರು.

ಇನ್ನು ಇದೀಗ ಮಕರ ರಾಶಿ ಅವರಿಗೆ ಆರೋಗ್ಯ ಸಮಸ್ಯೆ ಇರುತ್ತದೆ. ಈ ರಾಶಿಯವರು ಕೆಮ್ಮು, ಜ್ವರ, ನೆಗಡಿ ಬಂದ ಕೂಡಲೇ ಕೆಂಪು, ನೀಲಿ ಹಾಗೂ ಕಪ್ಪು ಬಣ್ಣದ ವಾಹನಗಳನ್ನು ಬಳಸುತ್ತಿದ್ದರೆ, ಅದಕ್ಕೆ ತಪ್ಪದೇ ಪೂಜೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಿ ಎಂತಹದ್ದೇ ಸಂದರ್ಭ ಬಂದರೂ ರಾತ್ರಿ ವೇಳೆ ಪ್ರಯಾಣಿಸಬೇಡಿ. ಅದರಿಂದ ಅನಾಹುತ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ಮಕರ ರಾಶಿಯವರು ತಪ್ಪದೇ ಗಣಪತಿ ದೇವರಿಗೆ ಪೂಜೆ ಮಾಡಬೇಕು. ಇದರಿಂದ ತೊಂದರೆಗಳು ಬಗೆಹರಿಯುತ್ತವೆ ಎಂದು ಹೇಳಿದ್ದಾರೆ.    

ಇನ್ನು ಕುಂಭ ರಾಶಿಯವರಿಗೆ ಮುಂದಿನ ದಿನಗಳಲ್ಲಿ ಹಣಕಾಸಿನ ಬಿಕ್ಕಟ್ಟು ಉಂಟಾಗುತ್ತದೆ. ಕುಂಭ ರಾಶಿಯವರ ಬಳಿ ಎಷ್ಟೇ ಆಸ್ತಿ ಇದ್ದರೂ ಕೂಡ ಹಣಕಾಸಿನ ತೊಂದರೆ ಎದುರಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಇದರಿಂದ ಹಲವು ಬಗೆಯ ತೊಂದರೆಗಳನ್ನು ಅನುಭವಿಸಬೇಖಾಗುತ್ತದೆ. ಹಾಗಾಗಿ ಕುಂಭ ರಾಶಿಯವರು ಆದಷ್ಟು ಹಣ ಕಾಸಿನ ವ್ಯವಹಾರದಲ್ಲಿ ಎಚ್ಚರವಾಗಿರಬೇಕು. ಖರ್ಚಿನ ಬಗ್ಗೆ ಸ್ವಲ್ಪ ಗಮನ ಹರಿಸುವುದು ಸೂಕ್ತ ಎಂದು ಬ್ರಹ್ಮಾಂಡ ಗುರೂಜಿಗಳು ತಿಳಿಸಿದ್ದಾರೆ.