ಯಾರು ಯಾವ ಸಂದರ್ಭದಲ್ಲಿ ಯಾಕೆ ಸರ್ಪ ಸಂಸ್ಕಾರ ಮಾಡಬೇಕು

By Infoflick Correspondent

Updated:Monday, August 1, 2022, 09:52[IST]

ಯಾರು ಯಾವ ಸಂದರ್ಭದಲ್ಲಿ  ಯಾಕೆ ಸರ್ಪ ಸಂಸ್ಕಾರ ಮಾಡಬೇಕು

ಕೆಲ ಜ್ಯೋತಿಷ್ಯರು ಜಾತಕ ನೋಡಿ ಸಾಮಾನ್ಯವಾಗಿ ದುಸ್ಥಾನ ಗಳಲ್ಲಿ (೬,೮,೧೨)ರಲ್ಲಿ ರಾಹು ಇದ್ದಾಗ ನಿಮಗೆ ಸರ್ಪ ದೋಷವಿದೆ.ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುವುದು ವಾಡಿಕೆ ಯಾಗಿದೆ. ಇಂತಹ ಸಲಹೆಗಳು ಬರುತ್ತದೆ. ಆದರೆ ಒಂದು ವೇಳೆ ಸರ್ಪ ಸಾಯದೇ ಇದ್ದಲ್ಲಿ ಸರ್ಪ ಸಂಸ್ಕಾರ ಮಾಡುವುದು ಉಚಿತವೇ ಎಂಬುದು ಪ್ರಶ್ನೆಯಾಗುತ್ತದೆ. ಸಾಯದ ಜಂತುವಿಗೆ ಮರಣೋತ್ತರ ಕ್ರಿಯೆ ಮಾಡಿ ಅದನ್ನು ಎಲ್ಲಿಗೆ ಕಳುಹಿಸುತ್ತಾರೆ.? ಒಬ್ಬ ವ್ಯಕ್ತಿ ಸಾಯದೆ ಇದ್ದಾಗ ಉತ್ತರ ಕ್ರಿಯೆ ಮಾಡು ವುದು ಸರಿಯೇ?

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡ ಬೇಕು?
1.ಸರ್ಪನ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೆ ಇರಬೇಕು.
2. ಸ್ಥಳ ಭಾದಿತ ಸರ್ಪ ದೋಷಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.
3. ಹೊಸದಾಗಿ ನಾಗಬನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗ ಶಿಲಾ ಪ್ರತಿಷ್ಟೆಯಾಗಬೇಕು. ಭೂಮಿ ಎಂದ ಮೇಲೆ ಜೀವಿಗಳು ಪ್ರತೀ ಇಂಚು ಇಂಚಿಗೂ ಸತ್ತಿರುತ್ತದೆ.ಭೂಮಿಯು ಸ್ಮಶಾನವೆ ಆಗಿರುತ್ತದೆ. ಅದಕ್ಕಾಗಿ ಮರ್ತ್ಯಲೋಕ ಎಂದು ಕರೆದರು.ಇಂತಹ ಉದ್ಧಿಶ್ಯದಲ್ಲಿ ಸರ್ಪಸಂಸ್ಕಾರ ಮಾಡಿ ಭೂಮಿಯಲ್ಲಿ ನಿಧಿಸ್ಥಾಪಿಸಿ ನಾಗ ಪ್ರತಿಷ್ಟೆ ಮಾಡಬಹುದು.
4. ವಾಹನಗಳ ಗಾಲಿಗಳಿಗೆ ನಾಗನು ಬಿದ್ದು ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಲೇ ಬೇಕು.
5.ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ.ಆಗ ಇದರ ಉದ್ದಿಶ್ಯವಾಗಿ ಸಂಸ್ಕಾರ ಮಾಡಬಹುದು.
6. ನಾಗ ವನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿ ಅಗೋಚರವಾಗಿ ಸರ್ಪ ಸಂತತಿ ನಾಶವಾ ಗಿರಬಹುದು.ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.  

ಯಾವ ದಿನಗಳಲ್ಲಿ ಸಂಸ್ಕಾರ ಮಾಡಬೇಕು-
ಮಾಡಿಸುವವರ ತಾರಾಬಲ ಮುಖ್ಯವಲ್ಲ.ಈ ಸರ್ಪಸಂಸ್ಕಾರದ ಪ್ರತಿಕೃತಿ ದಹನ ಕಾಲಕದಕ್ಕೆ ಧನಿಷ್ಟಾ ಪಂಚಕ ದೋಷಗಳಿರ ಬಾರದು.
ಧನಿಷ್ಟಾ ಪಂಚಕವೆಂದರೆ- ಧನಿಷ್ಟಾ ನಕ್ಷತ್ರದ ಮೂರನೆ ಮತ್ತು ನಾಲ್ಕನೇ ಪಾದ, ಶತಭಿಷ,ಪೂರ್ವಾಭಾದ್ರ,ಉತ್ತರಾಭಾಧ್ರ,ರೇವತಿ ನಕ್ಷತ್ರಗಳು ಸರ್ಪ ಸಂಸ್ಕಾರಕ್ಕೆ ಯೋಗ್ಯವಲ್ಲ. ತಂದೆ ತಾಯಿ ಇರುವವರು ಇದಕ್ಕೆ ಅರ್ಹರಲ್ಲ.ಅಂದರೆ ಪಿತೃಕಾರ್ಯ ಮಾಡುವ ಅರ್ಹತೆ ಇರುವವರು ಮಾತ್ರ ಮಾಡಬಹುದು. ಬ್ರಾಹ್ಮಣರ ಮೂಲಕ ಮಾಡಿಸಬೇಕು. ಸಂಸ್ಕಾರದ ನಂತರ ಗೋಪೂಜನ ಆಗಲೇ ಬೇಕು.

ಸಂಸ್ಕಾರಗಳನ್ನು ಅಂದರೆ ನಾಗ ಪ್ರತಿಕೃತಿ ದಹನವನ್ನು ನದೀ ತೀರ,ಕೆರೆ ಬಾವಿಗಳ ಬಳಿ ಮಾಡಬೇಕು.ಕೆಲ ದೇವಸ್ಥಾನ, ಮಠಗಳಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆಗ ಳಿವೆ. ಸಂಸ್ಕಾರವು ನಾಲ್ಕು ದಿನಗಳದ್ದಾಗಿರುತ್ತದೆ.ಮೊದಲ ದಿನ ಪ್ರತಿಕೃತಿ ದಹನ, ಮತ್ತೆ ಎರಡು ದಿನ ತರ್ಪಣ, ಕೊನೆಯ ದಿನ ಇದಕ್ಕೆ ಸಂಬಂಧಿಸಿ ಕಾರ್ಯಗಳು ಇನ್ನು ಕೆಲವೊಮ್ಮೆ ಕೇವಲ ಸರ್ಪಬಲಿ ಮಾತ್ರ ಮಾಡಿ ಸರ್ಪದೋಷದ ನಿವಾರಣಾ ಕ್ರಮವೂ ಇದೆ.ಇದು ದೋಷಗಳ ಆಧಾರದಲ್ಲಿ ಮಾಡು ವಂತದ್ದು. ಸಂಸ್ಕಾರಕ್ಕೆ ಶುರುಮಾಡಿದ ಮೇಲೆ ಸಂಸ್ಕಾರ ದೀಕ್ಷೆಯಲ್ಲಿರ ಬೇಕು. ಅಂದರೆ ಒಪ್ಪೊತ್ತು ಊಟ, ಸಾತ್ವಿಕ ಆಹಾರ. ( ಈರುಳ್ಳಿ ಬೆಳ್ಳುಳ್ಳಿ, ಮಾಂಸಾಹಾರ, ಮತ್ತು ಬರುವ ಕುಡಿತ ( ಶರಾಬು) , ಸ್ತ್ರೀ ಸಂಪರ್ಕ, ಹೋಟೇಲಿನ ಊಟ ಇತ್ಯಾದಿ ಮಾಡಬಾರದು.) 
ಸಂಸ್ಕಾರ ಆರಂಭಿಸಿ ಮುಗಿಯುವ ತನಕ ಯಾವುದೇ ದೇವತಾ ಕಾರ್ಯವನ್ನು ಆ ಯಜಮಾನನ ಕುಟುಂಬಸ್ಥರು ಮಾಡ ಬಾರದು.ದೇವಸ್ಥಾನಕ್ಕೂ ಹೋಗಬಾರದು.ಮನೆ ದೇವರಿಗೂ ಪೂಜೆ ಮಾಡಬಾರದು.ಯಾವುದೇ ಮಂತ್ರ ಪಠಣವನ್ನೂ ಮಾಡಬಾರದು.ಒಂದು ವೇಳೆ ನಿತ್ಯ ಓದುವ ಸಹಸ್ರನಾಮಾದಿ ಸ್ತುತಿ ಶ್ಲೋಕಗಳಿದ್ದರೆ ಮನಸ್ಸಿನಲ್ಲೇ ಓದಬಹುದು.ಇದು ಸೂತಿಕಾಚ ರಣೆ ಯಂತೆಯೇ ಆಗಿರುವುದರಿಂದ ಈ ನಿಯಮ ಪಾಲನೆ ಮಾಡಬೇಕು.
ಇಷ್ಟೆಲ್ಲ ಸಂಸ್ಕಾರ ನಿಯಮಗಳಾದ ಮೇಲೆ ದೇವತಾದರ್ಶನ, ಪೂಜಾದಿಗಳನ್ನು ಮಾಡಬಹುದು.


ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮನುಷ್ಯನಿಗೆ ಮೋಹವು ಅತಿಯಾದಾಗಲೇ ಅನಾಹುತವಾಗುವುದು. ಇದು ನಿಯಂತ್ರಣದಲ್ಲಿದ್ದರೆ ಕ್ಷೇಮ.ಇದೆಲ್ಲ ಹೇಳಿಕೊಟ್ಟು ಬರುವಂತದ್ದಲ್ಲ.ಇದು ಹೃದಯದಿಂದಲೇ ಮನೋಪೂರ್ವಕವಾಗಿ ಬರುವಂತದ್ದಾಗಿದೆ.ಅದಕ್ಕಾಗಿ ನಾಗದೇವರ ಮೂಲ ಮಂತ್ರವನ್ನು ದಿನದಲ್ಲಿ ಕನಿಷ್ಟ ಹನ್ನೆರಡು ಬಾರಿ ಹೇಳಿಕೊಂಡರೆ ಮೋಹೋತ್ಪತ್ತಿಯ ಹಾರ್ಮೋನುಗಳ ನಿಯಂತ್ರಣ ಆಗುತ್ತದೆ.
‘ ಓಂ ನಮೋ ಭಗವತೇ ಕಾಮರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ಸ್ವಾಹಾ’ ಎಂಬುದು ಮಂತ್ರ.