ಮನೆಯಲ್ಲಿ ಈ ವಸ್ತುಗಳು ಇದ್ದರೆ ಸುಖ-ಸಂಪತ್ತು ಅದೃಷ್ಟ ಬರಲಿದೆ..!

By Infoflick Correspondent

Updated:Tuesday, August 16, 2022, 13:52[IST]

ಮನೆಯಲ್ಲಿ ಈ ವಸ್ತುಗಳು ಇದ್ದರೆ ಸುಖ-ಸಂಪತ್ತು ಅದೃಷ್ಟ ಬರಲಿದೆ..!

ಮನೆಯಲ್ಲಿರುವ ವಸ್ತುಗಳು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿರುವುದು ಮನೆಯ ಸದಸ್ಯರ ಖುಷಿ ಮತ್ತು ನೆಮ್ಮದಿಗೆ ಕಾರಣವಾಗಿರುತ್ತದೆ. ಮನೆಯಲ್ಲಿ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಸುಖ-ಸಂಪತ್ತು ನೆಲೆಸುತ್ತದೆ. ಕೆಲವು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅವು ನಮಗೆ ಖುಷಿಯನ್ನು ತಂದುಕೊಡುತ್ತದೆ, ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳುತ್ತದೆ. ಧನ ಲಾಭವನ್ನುಂಟು ಮಾಡಿ ಆರ್ಥಿಕ ಪ್ರಗತಿ ಸಾಧಿಸುವಂತೆ ಮಾಡುತ್ತದೆ.  ಹೀಗಾಗಿ ನಿಮ್ಮ ಮನೆಯಲ್ಲಿ ಈ ವಸ್ತುಗಳು ಇವೆಯೇ ಎಂಬುದನ್ನು ನೋಡಿಕೊಳ್ಳಿ. 

ಅಥವಾ ನೀಲಿ ಹೂವಿನ ಹೂದಾನಿ,  ನೈಋತ್ಯ ಮೂಲೆಯಲ್ಲಿ ಹಳದಿ ಹೂವಿನ ಹೂದಾನಿ ಇರಿಸುವುದು ಉತ್ತಮ. ಸಸ್ಯಗಳು ಮತ್ತು ಹೂವುಗಳು ನಿಮ್ಮ ಮನೆಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ತರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬಿದಿರು, ತುಳಸಿ, ತಾವರೆ, ಮಲ್ಲಿಗೆ ಮತ್ತು ಇತರ ಅನೇಕ ಸಸ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

ನಿಮ್ಮ ವ್ಯಾಪಾರ ವೃದ್ಧಿ ಆಗಲು ನೀವು ಬಯಸಿದರೆ ಖಂಡಿತವಾಗಿಯೂ ನಿಮ್ಮ ಕಚೇರಿ ಮತ್ತು ನಿಮ್ಮ ಮನೆಯಲ್ಲಿ ಕನ್ನಡಿಯನ್ನು ಇರಿಸಿ.  ಅದನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು.

ಉಪ್ಪು ಒಂದು ವೈದ್ಯ. ಮನೆಯ ಮೂಲೆಗಳಲ್ಲಿ ಉಪ್ಪಿನ ಬಟ್ಟಲನ್ನು ಇರಿಸುವುದು ಎಲ್ಲಾ ನಕಾರಾತ್ಮಕತೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಅದೃಷ್ಟ ನಿಮ್ಮ ಮನೆಯ ಬಾಗಿಲಿಗೆ ಬರಲು ಇದು ಸಹಕಾರಿಯಾಗಿದೆ.

ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೆ ಅಥವಾ ಮೀನಿನ ಪ್ರತಿಮೆಯನ್ನು ಇಡುವುದರಿಂದ ಮನೆಯ ಸದಸ್ಯರಿಗೆ  ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಇವುಗಳು ಪಾಸಿಟಿವ್ ಎನರ್ಜಿಯನ್ನೂ ಕೊಡುತ್ತವೆ.