ರಾಜ ರಾಣಿಯರ ಈ ಶೃಂಗಾರ ಬಾವಿ ಬಗ್ಗೆ ನಿಮಗೆಷ್ಟು ಗೊತ್ತು..! ಅಲ್ಲಿಯ ವಿಡಿಯೋ ನೋಡಿ

ರಾಜ ರಾಣಿಯರ ಈ ಶೃಂಗಾರ ಬಾವಿ ಬಗ್ಗೆ ನಿಮಗೆಷ್ಟು ಗೊತ್ತು..! ಅಲ್ಲಿಯ ವಿಡಿಯೋ ನೋಡಿ

ಪುರಾತನ ಕಾಲದಿಂದಲೂ ಬಾವಿಗಳಿಗೆ ವಿಶಿಷ್ಟತೆ ಹೆಚ್ಚು. ಹೌದು ಆ ಬಾವಿಗಳ ವೈಶಿಷ್ಟತೆಯ ಪ್ರಾಮುಖ್ಯತೆ, ಮತ್ತು ಆಶ್ಚರ್ಯಕರ ವಿಷಯಗಳು ಕೂಡ ತುಂಬಾನೇ ಇವೆ.  ಇಂದಿಗೂ ಕೂಡ ಹಳ್ಳಿಗಳಲ್ಲಿ ಪುರಾತನ ಕಾಲದಲ್ಲಿಯೇ ನಿರ್ಮಾಣ ಆದಂತಹ ಭಾವಿಗಳು ಕೂಡ ಅದಕ್ಕೆ ಸಾಕ್ಷಿ ಎನ್ನಬಹುದು ಗೆಳೆಯರೇ. ಬಾವಿಗಳನ್ನು ಹಿಂದೂ ದೇವರುಗಳ ದೈವ ಎಂದು ಕರೆಯಲಾಗುತ್ತಿತ್ತು. ಬಾವಿ ಗಂಗೆಯನ್ನು ಪೂಜೆ ಮಾಡುತ್ತಿದ್ದರು.  ಸಾಮಾನ್ಯವಾಗಿ ಬಾವಿಗಳನ್ನು ನೀವು ನೋಡಿರುತ್ತೀರಿ. ಆದರೆ ಸಾವಿರ ಸ್ತಂಭಗಳ ಗುಡಿಗೆ ಸುರಂಗ ಮಾರ್ಗವಿರುವ ಈ ಶೃಂಗಾರ ಬಾವಿ ಬಗ್ಗೆ ನಿಮಗೆ ಸಾಕಷ್ಟು ವಿಚಾರ ಗೊತ್ತಿಲ್ಲ ಅನ್ಸುತ್ತೆ .ಇದು ರಾಜ ರಾಣಿಯರ ಶೃಂಗಾರ ಬಾವಿ. ಇದು ಇರುವುದು ತೆಲಂಗಾಣದ ರಾಜಧಾನಿ ಹೈದರಾಬಾದ್ ನ ವರಂಗಲ್ ನಲ್ಲಿ ಈ ಶೃಂಗಾರ ಬಾವಿ ಇದೆ.

ಈ ಶೃಂಗಾರ ಬಾವಿಯನ್ನ ಹಿಂದಿನ ಪುರಾತನ ಕಾಲದಲ್ಲಿ ರಾಜರುಗಳ ಸ್ತ್ರೀಯರು ಸ್ನಾನಕ್ಕೆ ಉಪಯೋಗ ಮಾಡುತ್ತಿದ್ದರು..ಜೊತೆಗೆ ರಾಣಿಯರು ಈ ಬಾವಿಯಲ್ಲಿ ಸ್ನಾನ ಮಾಡುವಾಗ, ಆ ಸ್ಥಳಕ್ಕೆ ಯಾರೇ ಬಂದರೂ ನೀರಿನಲ್ಲಿ ಅವರ ಪ್ರತಿಬಿಂಬ ಕಾಣುವಂತೆ ಕಟ್ಟಿಸಿದ್ದು ಹೆಚ್ಚು ವಿಶೇಷ. ಈ ಸುರಂಗ ಮಾರ್ಗದ ಶೃಂಗಾರ ಬಾವಿಯಲ್ಲಿ ಹೋಗುತ್ತಾ ಇದ್ದರೆ ಟೈಮ್ ಮೆಷಿನ್ ಜೊತೆ ಹೋದಂತೆ ಅನುಭವ ಆಗುತ್ತದೆ...ಈ ಶೃಂಗಾರ ಬಾವಿಗಳನ್ನು ಅಂದಿನ ಕಾಕತಿಯ ಮಹಾರಾಜರು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಈ ಬಾವಿಗಳ ನಿರ್ಮಾಣದ ಮೂಲಕ ಕೆಲವು ರಹಸ್ಯವನ್ನ ಅಡಗಿಸಿಡುವ ಬಾವಿಗಳು ಇವಾಗಿದ್ದವಂತೆ.  

ಈ ಶೃಂಗಾರ ಬಾವಿಯನ್ನು ಮೂರು ಅಂತಸ್ತಿನಲ್ಲಿ ಕಟ್ಟಿಸಲಾಗಿದೆ..ಕಾಕತೀಯ ಮನೆತನದ ರುದ್ರಮ್ಮದೇವಿ ಈ ಶೃಂಗಾರ ಬಾವಿಯಲ್ಲಿ ಸ್ನಾನ ಮಾಡುವಂತಹ ರಾಣಿ..ಜೊತೆಗೆ ಹಲವಾರು ರಾಣಿಯರು ಮತ್ತು ರಾಜರು ಸ್ನಾನ ಮಾಡಿದ್ದಾರೆ ಎನ್ನುವ ಪ್ರತಿತಿ ಇದೆ.ಈ ಶೃಂಗಾರ ಬಾವಿ ಸೀದಾ ಸಾವಿರ ಸ್ತಂಭಗಳ ದೇವಸ್ಥಾನಕ್ಕೆ ಮಾರ್ಗ ಕಲ್ಪಿಸಿತ್ತು. ಇಲ್ಲಿ ಸ್ನಾನ ಮಾಡಿ ರಾಜಾರಾಣಿಯರು ಸಾವಿರ ಸ್ತಂಭಗಳ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಕೆಲವು ಶೃಂಗಾರ ಬಾವಿಯ ನೀರನ್ನು ಪರಮಶಿವ ಪೂಜೆಗೆ ಮಾತ್ರ ಉಪಯೋಗ ಮಾಡುತ್ತಿದ್ದರು.. ಈ ಸ್ಥಳಕ್ಕೆ ಯಾರೇ ಬಂದರೂ ಹಾಗೆ ಸೂಕ್ಷ್ಮವಾಗಿ ಅಲ್ಲಿಯ ರಾಣಿಯರ  ಸ್ನಾನದ ಚಟುವಟಿಕೆ ನೋಡಲು ಬಂದರೂ ಕೂಡ ತಕ್ಷಣ ಆ ಬಾವಿಯ ನೀರಿನಲ್ಲಿಯೇ ಅವರಿಗೆ ಗೊತ್ತಾಗುತ್ತಿತ್ತಂತೆ...ಕಾಕತಾಳಿಯ ಮಹಾರಾಜರು ಸುಮಾರು 260 ಬಾವಿಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿ ಬಂದಿದೆ.

ರಾಣಿಯರ ಸ್ನಾನಕ್ಕೆಂದು ಶೃಂಗಾರ ಬಾವಿಯನ್ನು ಒಂದೇ ಒಂದು ಕಟ್ಟಿಸಲಾಗಿತ್ತು..ಹೌದು ಈ ಶೃಂಗಾರ ಬಾವಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ ಸ್ನೇಹಿತರೆ. ನಿಜಕ್ಕೂ ಅಲ್ಲಿಯ ಈ ಸ್ಥಳವನ್ನು ನೋಡಿದರೆ ನೀವು ಕೂಡ ಒಂದು ಕ್ಷಣ ಬೆರಗಾಗುತ್ತೀರಿ.. ಅಷ್ಟು ಅದ್ಬುತವಾಗಿ ಶೃಂಗಾರ ಬಾವಿ ನಿರ್ಮಿಸಿದ್ದಾರೆ. ಈ ವಿಡಿಯೋ ನೋಡಿ, ಮಾಹಿತಿ ಉಪಯುಕ್ತ ಆಯ್ತು ಎಂದೆನಿಸಿದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು ( video credit :Focus )...