8 ವರ್ಷ ಪ್ರೀತಿ ಮಾಡಿದ ಪ್ರೇಯಸಿ ಮಾಡಿದ ಆ ಕೆಲಸಕ್ಕೆ ಮನನೊಂದು ಪ್ರಿಯಕರ ಆತ್ಮಹತ್ಯೆ..? ಕಾರಣ ಇಲ್ಲಿದೆ
Updated:Saturday, October 23, 2021, 10:33[IST]

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಯಮುಡಿ ಸಮೀಪದಲ್ಲಿ ಬರುವ ಸುಳುಗೋಡು ಎಂಬ ಗ್ರಾಮದ ನಿವಾಸಿ ದರ್ಶನ್ ಕಳೆದ ಎಂಟು ವರ್ಷಗಳಿಂದ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹೌದು ಈ ದರ್ಶನ್ ಮಧ್ಯಪ್ರದೇಶದ ಸಿಂಗ್ರೌಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ 8 ವರ್ಷಗಳಿಂದ ಸುಳುಗೋಡು ಊರಿನ ಒಬ್ಬ ಹುಡುಗಿಯನ್ನೇ ಪ್ರೀತಿ ಮಾಡುತ್ತಿದ್ದ. ಹಾಗೆ ಮನೆಯವರ ಒಪ್ಪಿಗೆ ಪಡೆದು ಯುವತಿಯನ್ನು ಸಹ ಮದುವೆಗೆ ಒಪ್ಪಿಸಿದ್ದ. ಆದರೆ ಯುವತಿ ಮಾಡಿದ ಕೆಲಸದಿಂದ ನಿನ್ನೆ ಯುವಕ ಮಧ್ಯಪ್ರದೇಶದ ತನ್ನ ರೂಮಿನಲ್ಲಿ ನೇಣು ಹಾಕಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಜೊತೆಗೆ ದರ್ಶನ್ ಒಂದು ಡೆತ್ನೋಟ್ ಸಹ ಬರೆದಿದ್ದು, ಡೆತ್ ನೋಟ್ ನಲ್ಲಿ ಬರೆದ ಹಾಗೆ ನನ್ನ ಸಾವಿಗೆ ಯುವತಿ ಹಾಗೂ ಯುವತಿಯರ ಮನೆಯವರೆ ಕಾರಣ ಎಂದು ಬರೆದಿದ್ದಾನೆ. ಅಷ್ಟಕ್ಕೂ ದರ್ಶನ್ ಸಾವಿಗೆ ಕಾರಣವಾದ ಈ ಯುವತಿ ಮಾಡಿದ ಕೆಲಸ ಎಂತಹದ್ದು ಗೊತ್ತಾ.? 8 ವರ್ಷದಿಂದ ಪ್ರೀತಿ ಮಾಡುತ್ತಿದ್ದ ದರ್ಶನ್ ನ ಪ್ರೇಯಸಿ ಇತ್ತೀಚಿಗೆ ನಾಲ್ಕು ತಿಂಗಳಿಂದ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತೀಫ್ದ ಪೊಲೀಸ್ ಯುವಕನ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಈ ಮೋಸದ ವಿಷಯ ತಿಳಿದು ದರ್ಶನ್ ಬಾರಿ ಮನನೊಂದು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಹೌದು ಮಗನ ಉಜ್ವಲ ಭವಿಷ್ಯ ಹೀಗೇರುತ್ತೆ ಹಾಗಿರುತ್ತೆ ಎಂದು ಕನಸು ಕಂಡಿದ್ದ ದರ್ಶನ್ ಕುಟುಂಬ ಇದೀಗ ಕಣ್ಣೀರು ಹಾಕುತ್ತಿದೆ, ಮತ್ತು ಭಾರವಾದ ಮನಸ್ಸಿನಿಂದ ಸುಳುಗೋಡು ಗ್ರಾಮದಲ್ಲಿಯೇ ಮಗನ ಅಂತ್ಯಕ್ರಿಯೆ ಮುಗಿಸಿದ್ದಾರೆ. ಹೌದು ಕೊಡಗು ಎಸ್ ಪಿ ಗೆ ಬಹಿರಂಗ ಪತ್ರ ಬರೆದಿರುವ ದರ್ಶನ್, ನನ್ನ ಸಾವಿಗೆ ಆ ಯುವತಿ ಮತ್ತು ಯುವತಿ ಅವರ ಮನೆಯವರೆ ಕಾರಣ ಎಂದು ತಿಳಿಸಿದ್ದಾನೆ ಎಂದು ಕೇಳಿ ಬಂದಿದೆ. ಪ್ರೀತಿಮಾಡಿ ಆದರೆ ಪ್ರೀತಿ ಮಾಡಿದ ಬಳಿಕ ಮೋಸ ಮಾಡಬೇಡಿ. ಒಂದು ವೇಳೆ ಮೋಸ ಮಾಡಿದರೂ ಅವರು ನಿಮ್ಮನ್ನು ಬಿಟ್ಟು ಬದುಕುತ್ತಾರೆಯೆ ಎಂದು ಮೊದಲು ಅರ್ಥೈಸಿಕೊಳ್ಳಿ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಕಮೆಂಟ್ ಮಾಡಿ ಧನ್ಯವಾದಗಳು..