ವಿಚ್ಛೇಧನ ಪಡೆದ ಮಹಿಳೆಯನ್ನು ಮದುವೆಯಾಗುವುದರಿಂದ ನಿಮಗಾಗುವ ಲಾಭಗಳೇನು ಗೊತ್ತಾ..?

By Infoflick Correspondent

Updated:Monday, July 26, 2021, 15:42[IST]

ವಿಚ್ಛೇಧನ ಪಡೆದ ಮಹಿಳೆಯನ್ನು ಮದುವೆಯಾಗುವುದರಿಂದ ನಿಮಗಾಗುವ ಲಾಭಗಳೇನು ಗೊತ್ತಾ..?

ಸಮಾಜದಲ್ಲಿ ಪುರುಷ ಎರಡೆರಡು ಮದುವೆಯಾದರೆ ತಪ್ಪಿಲ್ಲ. ಆದರೆ, ಹೆಣ್ಣು ಒಮ್ಮೆ ಮದುವೆಯಾದ ಮೇಲೆ ಮುಗೀತು. ಆಕೆಗೆ ಅದೆಷ್ಟೇ ಕಷ್ಟವಾದರೂ, ಎಂತಹ ಸಮಸ್ಯೆ ಎದುರಾದರು ತನ್ನ ಪತಿಯೊಂದಿಗೆ ಜೀವ ನಡೆಸಬೇಕು. ಆಕೆ ಆತನಿಂದ ವಿಚ್ಛೇಧನ ಪಡೆದರೆ, ಸಮಾಜ ಆ ಮಹಿಳೆಯನ್ನು ಧೂಷಿಸುತ್ತಲೇ ಇರುತ್ತದೆ. ಇನ್ನು ಪುರುಷರು ಎಷ್ಟು ಮದುವೆಯಾದರೂ, ನಮ್ಮ ಸಮಾಜ ಅದನ್ನು ಸರಿ ಎನ್ನುತ್ತದೆ. ಇನ್ನು ಈಗೀಗ ಮಹಿಳೆಯರು ಕೂಡ ವಿಚ್ಛೇಧನ ಪಡೆದು ಎರಡನೇ ಮದುವೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಈ ಲೇಖನದಲ್ಲಿ ಎರಡನೇ ಮದುವೆಯಿಂದಾಗುವ ಲಾಭದ ಬಗ್ಗೆ ತಿಳಿಯೋಣ ಬನ್ನಿ.. 

ಮಹಿಳೆಗೆ ಈಗಾಗಲೇ ಮದುವೆಯಾಗಿ ವಿಚ್ಛೇಧನ ಪಡೆದಿದ್ದರೆ, ಆ ಮಹಿಳೆಯನ್ನು ಮದುವೆಯಾಗುವುದರಿಂದ ಅಂತಹ ಪುರುಷನಿಗೆ ತುಂಬಾ ಲಾಭವಿದೆ. ಕನ್ಯೆಯನ್ನು  ಮದುವೆಯಾಗುವುದಕ್ಕಿಂತ ಎರಡನೇ ಮದುವೆಗೆ ಸಿದ್ಧವಿರುವ ಮಹಿಳೆಯನ್ನು ವುವಾಹವಾಗುದು ಒಳ್ಳೆಯದು. ಯಾಕೆಂದರೆ, ಆಕೆಗೆ ಮನೆಯನ್ನು ನಿಭಾಯಿಸುವ ಸಾಮರ್ಥ್ಯವಿರುತ್ತದೆ. ದಾಂಪತ್ಯದಲ್ಲಿ ಬಿರುಕು ಮೂಡಿದರೆ, ಅದನ್ನು ಸರಿಪಡಿಸುವ ಗುಣವಂತೆಯಾಗಿರುತ್ತಾಳೆ. ಮನೆಯಲ್ಲಿ ಎಲ್ಲವನ್ನೂ ಸರಿದೂಗುಸುವ ಶಕ್ತಿ ತಾಳ್ಮೆ ವಿಚ್ಚೇಧನ ಪಡೆದು ಎರಡನೇ ಮದುವೆಯಾದ ಮಹಿಳೆಗೆ ಇರುತ್ತದೆ. ಇನ್ನು ಆಕೆ ನಿಮಗೆ ನಿಷ್ಠಾವಂತಳಾಗಿರುತ್ತಾಳೆ. ಎಂದಿಗೂ ನಿಮಗೆ ಮೋಸ ಮಾಡುವ ಆಲೋಚನೆ ಆಕೆ ಬರುವುದಿಲ್ಲ. ಯಾಕೆಂದರೆ, ಮೋಸ ಹೋಗುವುದರಿಂದ ಏನೆಲ್ಲಾ ಆಗುತ್ತದೆ ಎಂಬ ಪರಿಜ್ಙಾನ ಆಕೆಗಿರುತ್ತದೆ. ಹಾಗಾಗಿ ಆಕೆ ತನ್ನ ಎರಡನೇ ಪತಿಗೆ ಮೋಸ ಮಾಡಲು ಮುಂದಾಗುವುದಿಲ್ಲ. 

ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾದರೆ, ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸುವಲ್ಲಿ ಆಕೆ ಉತ್ತಮ ಪಾತ್ರವನ್ನು ವಹಿಸುತ್ತಾಳೆ. ಮಕ್ಕಳ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾಳೆ. ಮನೆಯಲ್ಲಿ ದೊಡ್ಡವರಿದ್ದರೆ, ಅವರನ್ನು ಗೌರವಿಸುತ್ತಾಳೆ. ಪತಿ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಅವಳೇ ಬಗೆಹರಿಸುತ್ತಾಳೆ. ಈ ಮುಂಚೆಯೇ ಮದುವೆಯಾಗಿ ಅನುಭವವಿರುವ ಆಕೆಗೆ ಸಣ್ಣ ಸಣ್ಣ ಸಮಸ್ಯೆಗಳನ್ನು ನಿಭಾಯಿಸುವ ಚಾಕಚಕ್ಯತೆ ಇರುತ್ತದೆ. ಎಲ್ಲರನ್ನು ಒಟ್ಟುಗೂಡಿಸಿ ಎಲ್ಲರೊಂದಿಗೆ ಬೆರೆಯುತ್ತಾಳೆ. 

ಇಷ್ಟೆಲ್ಲಾ ಒಳ್ಳೆಯ ಗುಣಗಳು ಹಾಗೂ ತಾಳ್ಮೆ ಎರಡನೇ ಮದುವೆಯಾದವಳಿಗೆ ಇರುತ್ತದೆ. ಆಕೆ ಸಂಸಾರ ನಡೆಸುವಲ್ಲಿ ಎಲ್ಲೂ ಎಡವುದಿಲ್ಲ. ಯಾಕೆದರೆ, ಈ ಹಿಂದೆಯೇ ಎಡವಿರುವ ಆಕೆ ಮತ್ತೆ ತನ್ನ ಜೀವನವನ್ನು ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ಒಂಟಿತನ, ಸಮಾಜದಿಂದ ತಿರಸ್ಕೃತಗೊಂಡ ಆಕೆಗೆ ಸಂಬAಧಗಳ ಬೆಲೆ ಎಷ್ಟು ದೊಡ್ಡದು ಎಂಬುದು ತಿಳಿದಿರುತ್ತದೆ.