ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ ಅವರ ಮದುವೆ ನಡೆದಿದ್ದು ಹೇಗೆ ಗೊತ್ತಾ..?

By Infoflick Correspondent

Updated:Sunday, January 2, 2022, 12:30[IST]

ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ  ಅವರ ಮದುವೆ ನಡೆದಿದ್ದು ಹೇಗೆ ಗೊತ್ತಾ..?

ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಸಾಧನೆಯಲ್ಲಿ ಜೊತೆಯಾಗಿ, ಅವರ ಬೆನ್ನೆಲುಬಾಗಿ ನಿಂತಿರುವ ಸರಳ ವ್ಯಕ್ತಿತ್ವದ ವ್ಯಕ್ತಿ ಎಂದರೆ ಅದು ಸುಧಾಮೂರ್ತಿ. ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ  ಪರಿಶುದ್ಧ ಶ್ರೀಮಂತಿಕೆಯಲ್ಲಿ.ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ.

1950 ರ ಆಗಸ್ಟ್‌ 19 ರಂದು ಧಾರವಾಡ ಜಿಲ್ಲೆಯ 'ಶಿಗ್ಗಾಂವ್'ನ ಹಾವೇರಿ ಜಿಲ್ಲೆಯಲ್ಲಿ ಕುಲಕರ್ಣಿ ಕುಟುಂಬದಲ್ಲಿ ಜನಿಸಿದರು. ಬಳಿಕ ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ. ಹಾಗೂ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಧಾ ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ ಪದವಿ ಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಪುಣೆಯಲ್ಲಿ TELCOದಲ್ಲಿ ಉದ್ಯೋಗದಲ್ಲಿದ್ದಾಗ ಎನ್. ಆರ್. ನಾರಾಯಣ ಮೂರ್ತಿಯವರ ಪರಿಚಯವಾಯಿತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು.  

ಆದರೆ ಮದುವೆಯಾಗಿದ್ದು ಮನೆಯಲ್ಲಿ. ಅದೂ ಕೇವಲ ಅರ್ಧ ಗಂಟೆಯಲ್ಲಿ ಮದುವೆಯ ಶಾಸ್ತ್ರಗಳು ಮುಗಿದಿದ್ದವು. ಮದುವೆಯ ಖರ್ಚನ್ನು ಸುಧಾ ಮೂರ್ತಿ ಹಾಗೂ ನಾರಾಯಮ ಮೂರ್ತಿ ಇಬ್ಬರು ಸಮವಾಗಿ ಹಂಚಿಕೊಂಡಿದ್ದರು. ಅಲ್ಲದೇ, ನಾರಾಯಾಮ ಮೂರ್ತಿ ಅವರು ಕಂಡಿಷನ್ ಒಂದನ್ನು ಹಾಕಿದ್ದರು. ಅದೇನೆಂದರೆ, ಮದುವೆಯಲ್ಲಿ ಸುಧಾ ಮೂರ್ತಿ ಅವರು ತಾಯಿ ಮನೆಯ ಯಾವುದೇ ಒಡವೆಯನ್ನು ಧರಿಸಿ ಅಲಂಕಾರ ಮಾಡಿಕೊಳ್ಳಬಾರದು. ಸರಳವಾಗಿ ಇರಬೇಕೆಂದು ಕಂಡೀಷನ್ ಹಾಕಿದ್ದರು. ಇದಕ್ಕೆ ಒಪ್ಪಿದ್ದ ಸುಧಾಮೂರ್ತಿ ಅವರು ಸರಳವಾಗೇ ಸಿದ್ಧವಾಗಿದ್ದರು. ಇನ್ನು ಮದುವೆಗೆ ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದಿರಲಿಲ್ಲ. ಈ ದಂಪತಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.