45 ರ ಹರೆಯದ ವ್ಯಕ್ತಿಯನ್ನು 25ರ ಮೇಘನಾ ಮದುವೆಯಾಗಲು ಇದೇ ನಿಜವಾದ ಕಾರಣ.. 

By Infoflick Correspondent

Updated:Thursday, October 28, 2021, 11:22[IST]

45 ರ ಹರೆಯದ ವ್ಯಕ್ತಿಯನ್ನು 25ರ ಮೇಘನಾ ಮದುವೆಯಾಗಲು ಇದೇ ನಿಜವಾದ ಕಾರಣ.. 

ಇತ್ತೀಚೆಗಷ್ಟೇ 25ರ ಹರೆಯದ ಯುವತಿ ಮೇಘನಾ 45 ರ ಹರೆಯದ ವ್ಯಕ್ತಿ ಶಂಕರಣ್ಣ ಎಂಬುವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆಯ ಫೋಟೋ ಹಾಗೂ ವೀಡಿಯೋ ಟ್ರೋಲ್‌ ಪೇಜ್‌ ಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿವೆ. ಇನ್ನು ಇವರ ಮದುವೆ ಬಗ್ಗೆ ನೂರೆಂಟು ಕಥೆಗಳು ಹುಟ್ಟಿಕೊಂಡಿವೆ. 

ಕೆಲ ಟ್ರೋಲ್‌ ಪೇಜ್‌ ಗಳಲ್ಲಿ ಶಂಕರಣ್ಣ ಬಳಿ ಕೋಟಿ ಕೋಟಿ ಹಣವಿದೆ. ಶಂಕರಣ್ಣನನ್ನು ಮದುವೆಯಾದರೆ ಆ ಹಣವೆಲ್ಲಾ ತನ್ನದಾಗುತ್ತೆ ಅನ್ನೋ ಆಸೆಯಲ್ಲಿ ಮೇಘನಾ ಮದುವೆಯಾಗಿದ್ದಾಳೆ ಎಂದೆಲ್ಲಾ ಹೇಳುತ್ತಿದ್ದರು. ಅಂದಹಾಗೆ, ಈ ಮದುವೆ ನಡೆದಿರುವುದು ತುಮಕೂರಿನಲ್ಲಿ. ಕುಣಿಗಲ್‌ ತಾಲೂಕಿನ ಚೌಡನಕುಪ್ಪೆ ಗ್ರಾಮದ 45 ರ ಹರೆಯದ ಶಂಕರಣ್ಣ ಹಾಗೂ ಸಂತೆಮಾವೊತ್ತೂರು ಗ್ರಾಮದ 25 ವರ್ಷದ ಯುವತಿ ಮೇಘನಾ ಮದುವೆಯಾಗಿದ್ದಾರೆ. 

ಮೇಘನಾ ಗೆ ಈಗಾಗಲೇ ಮದುವೆಯಾಗಿದ್ದು, ಆಕೆಯ ಪತಿ ಒಂದೇ ವರ್ಷಕ್ಕೆ ಓಡಿ ಹೋಗಿದ್ದ.  ಇಷ್ಟು ದಿನ ಮೇಘನಾ ಕಾದರೂ ಬಂದಿಲ್ಲ. ಅಲ್ಲಿ-ಇಲ್ಲಿ ಬಂದ ಸುದ್ದಿ ಪ್ರಕಾರ ಮೇಘನಾ ಪತಿಗೆ ಈಗಾಗಲೇ ಒಂದು ಸಂಬಂಧವಿದ್ದು, ಬೇರೊಂದು ಮದುವೆಯಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಮೇಘನಾ ಮತ್ತೊಂದು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. 

ಇತ್ತ ಮದುವೆಯಾಗಲು ಹುಡುಗಿಯನ್ನು ಹುಡುಕಿ ಹುಡುಕಿ ಶಂಕರಣ್ಣ ಸೋತು ಸುಮ್ಮನಾಗಿದ್ದರು. ಆದರೆ ದೇವಸ್ಥಾನವೊಂದರಲ್ಲಿ ಮೇಘನಾ ರನ್ನು ನೋಡಿ ಮಾತನಾಡಿ, ಮದುವೆ ಪ್ರಸ್ತಾಪ ಮಾಡಿದ್ದರು. ಮೇಘನಾ ಒಪ್ಪಿದರು. ಹಾಗಾಗಿ ಮದುವೆಯಾಯಿತು. ಈ ವಿಚಾರ ತಿಳಿಯದೇ ಟ್ರೋಲ್‌ ಪೇಜ್‌ ಗಳು ಹೇಗೆಂದರೆ ಹಾಗೆ ಇವರಿಬ್ಬರ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಇವರಿಬ್ಬರ ಮದುವೆಯ ಫೋಟೋಗಳು ಟ್ರೋಲ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

(ವಿಡಿಯೋ ಕೃಪೆ : ಸ್ಯಾಂಡಲ್ವುಡ್ ಕನ್ನಡ )