ನಿಮ್ಮ ದಾಂಪತ್ಯ ಜೀವನ ಸುಖಕರವಾಗಿಲ್ಲವಾ..? ಹಾಗಿದ್ದರೆ ಚಾಣಕ್ಯನ ಈ ಸಲಹೆಗಳು ನಿಮಗಾಗಿ..!

By Infoflick Correspondent

Updated:Saturday, September 10, 2022, 10:09[IST]

ನಿಮ್ಮ ದಾಂಪತ್ಯ ಜೀವನ ಸುಖಕರವಾಗಿಲ್ಲವಾ..? ಹಾಗಿದ್ದರೆ ಚಾಣಕ್ಯನ ಈ ಸಲಹೆಗಳು ನಿಮಗಾಗಿ..!

ಪತಿ ಪತ್ನಿಯರ ವಿಷಯದ ಕುರಿತು ಈಗಾಗಲೇ ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಂಡಿರುತ್ತೀರಿ. ಹೌದು ಜೀವನದಲ್ಲಿ ಮದುವೆ ಎನ್ನುವುದು ಒಂದು ವಿಶೇಷವಾದ ಹಂತ. ಆ ಮದುವೆಯ ಹಂತದಲ್ಲಿ ಪ್ರತಿಯೊಬ್ಬರೂ ಕೂಡ ಮದುವೆಯ ಖುಷಿಯಲ್ಲಿ ಸಂಭ್ರಮದಲ್ಲಿ ತೇಲಾಡುತ್ತಾರೆ. ಮದುವೆಯಾದ ಬಳಿಕ ಸತಿಪತಿಗಳಲ್ಲಿ ಇರಬೇಕಾದ ಕೆಲವು ಅಂಶಗಳು ಅವರನ್ನು ಸಾಕಷ್ಟು ವರ್ಷಗಳವರೆಗೆ ದಾಂಪತ್ಯ ಜೀವನವನ್ನ ಗಟ್ಟಿಯಾಗಿ ಇರುವಂತೆ ಮಾಡುತ್ತದೆ. ಆದರೆ ದಾಂಪತ್ಯ ಜೀವನ ಎನ್ನುವುದು ಕೆಲವರನ್ನು ಅವರು ತೆಗೆದುಕೊಳ್ಳುವ ನಿರ್ಧಾರಗಳಿಂದ ಅವರು ಮಾಡುವ ಕೆಲಸಗಳಿಂದ ಹೆಚ್ಚು ನಷ್ಟಕ್ಕೆ ಒಳಗಾಗುತ್ತಾರೆ. ಹೆಚ್ಚು ಕಷ್ಟಗಳನ್ನು ನೋವುಗಳನ್ನು ನೆಮ್ಮದಿ ಇಲ್ಲದ ಜೀವನವನ್ನು ಅವರೇ ಅನುಭವಿಸಬೇಕಾಗುತ್ತದೆ.

ಅಂತಹವರ ವಿಚಾರವಾಗಿ ಇದೀಗ ಚಾಣಕ್ಯನ ನೀತಿ ಶಾಸ್ತ್ರದಲ್ಲಿ ದಾಂಪತ್ಯ ಜೀವನ ಸುಖದಿಂದ ಇರಲು ಹಾಗೆ ಸಂತಸದಿಂದ ಜೀವನ ಸಂಗಾತಿ ಜೊತೆ ಜೀವನ ಕಳೆಯಲು ಕೆಲವೊಂದಿಷ್ಟು ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಹಾಗೆ ಕೆಲವೊಂದು ವಿಚಾರಗಳನ್ನು ಬಿಡಬೇಕು ಎಂಬುದಾಗಿಯೂ ಹೇಳಿದ್ದಾರೆ. ಹೌದು ಅದೇ ಚಾಣಕ್ಯನ ನೀತಿಯಲ್ಲಿ ಹೇಳುವ ಹಾಗೆ ದಾಂಪತ್ಯ ಜೀವನವೂ ಹೆಚ್ಚು ಸುಖಮಯದಿಂದ ಇರಬೇಕು ಎಂದರೆ ಮೊದಲಿಗೆ ಪತಿ ಆಗಲಿ, ಪತ್ನಿ ಆಗಲಿ ಇಬ್ಬರೂ ಸಹ ಕೋಪದಿಂದ ಇರಲೇ ಬಾರದು. ಹೆಚ್ಚು ಕೋಪವನ್ನು ಮೊದಲು ತ್ಯಜಿಸಬೇಕು ಹೆಚ್ಚು ಕೋಪಗೊಳ್ಳುವುದಕ್ಕೆ ದಾಂಪತ್ಯ ಜೀವನ ಬಹುಬೇಗ ಬಲಿಯಾಗುತ್ತದೆ ಎಂದು ಹೇಳಿದ್ದಾರೆ. 

ಹಾಗೆ ಎರಡನೆಯದ್ದು ತಾಳ್ಮೆ ಇಬ್ಬರಲ್ಲಿ ತಾಳ್ಮೆ ಹೆಚ್ಚು ಇರಬೇಕು ಅಂದಾಗ ಮಾತ್ರ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆ ಇರುತ್ತದೆ, ಎಂತಹ ಸಮಸ್ಯೆ ಬಂದರೂ ಕೂಡ ಇಬ್ಬರು ಒಟ್ಟಿಗೆ ಸೇರಿ ಅದನ್ನು ಎದುರಿಸುವ ಶಕ್ತಿಯನ್ನ ನಿಜ ಹೊಂದುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಮೂರನೆಯದ್ದು ಗೌಪ್ಯತೆ ಹೌದು, ಗಂಡ ಹೆಂಡತಿ ಎಂದಾಗ ಜಗಳಗಳು ಕಾಮನ್, ಅವರಿಬ್ಬರ ನಡುವಿನ ಯಾವುದೇ ವಿಷಯ ಇದ್ದರೂ ಸಹ ಮೂರನೆಯ ವ್ಯಕ್ತಿಯ ಬಳಿ ಹಂಚಿಕೊಳ್ಳಲು ಹೋಗಬಾರದು. ಅದರಿಂದ ದಾಂಪತ್ಯ ಜೀವನ ಒಡೆಯುವ ಸಾಧ್ಯತೆ ಹೆಚ್ಚಿರುತ್ತದೇ ಎಂದಿದ್ದಾರೆ. ಹಾಗೆ ಪರಸ್ಪರ ಗೌರವ. ಗಂಡ ಹೆಂಡತಿಗೆ ಗೌರವ ಕೊಡಬೇಕು. ಹೆಂಡತಿ ತನ್ನ ಗಂಡ ಹೇಗೆ ಇದ್ದರೂ ಗೌರವ ನೀಡಬೇಕು. ಆಗ ಮಾತ್ರ ಇಬ್ಬರೂ ಹೆಚ್ಚು ವರ್ಷಗಳ ಕಾಲ ಸದಾ ನೆಮ್ಮದಿ ದಾಂಪತ್ಯ ಜೀವನ ನಡೆಸುತ್ತಾರೆ. ಈ ನಾಲ್ಕು ಗುಣ ಇದ್ದಲ್ಲಿ ಹೆಚ್ಚು ದಾಂಪತ್ಯ ಜೀವನ ಯಾವ ಸಮಸ್ಯೆ ಇಲ್ಲದೆ ನಡೆಯುತ್ತದೇ ಎಂದು ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು.