ಹಲೋ ಟ್ರೋಲ್ ಪೇಜ್ ಗಳೇ.. ಈ ಸುದ್ದಿ ನಿಮಗಾಗಿಯೇ.. ಯಾವ ವಿಚಾರವನ್ನೇ ಆಗಲಿ ಟ್ರೋಲ್ ಮಾಡುವ ಮುನ್ನ ಈ ಸುದ್ದಿಯನ್ನು ತಪ್ಪದೇ ನೋಡಿ..
Updated:Friday, October 22, 2021, 13:15[IST]

ಕೆಲ ದಿನಗಳ ಹಿಂದಷ್ಟೇ ತುಮುಕೂರಿನಲ್ಲಿ ಜೋಡಿಯೊಂದು ಮದುವೆಯಾಗಿ ಕಳೆದ ವಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಟ್ರೋಲ್ಪೇಜ್ಗಳಿಗೆ ಆಹಾರವಾಗಿದ್ದ ಆ ಜೋಡಿ ಈಗ ಮಾಧ್ಯಮದ ಮುಂದೆ ಬಂದಿದ್ದಾರೆ. ಅವರ ನಿಜವಾದ ಕಥೆ ಕೇಳಿ ನಂತರ ಟ್ರೋಲ್ಮಾಡಬೇಕಾ ಬೇಡವಾ ಅಂತ ಯೋಚಿಸಿ..
25ರ ಹರೆಯದ ಯುವತಿ ಮೇಘನಾ 45 ರ ಹರೆಯದ ಶಂಕರಣ್ಣ ಎಂಬುವರನ್ನು ಮದುವೆಯಾಗಿದ್ದರು. ಇವರಿಬ್ಬರ ಮದುವೆಯ ಫೋಟೋ ಹಾಗೂ ವೀಡಿಯೋ ಟ್ರೋಲ್ಪೇಜ್ಗಳಲ್ಲಿ ಸಿಕ್ಕಾಪಟ್ಟೆ ವೈರಲ್ಆಗಿವೆ. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಇವರಿಬ್ಬರ ಫೋಟೋ ವೈರಲ್ಆಗಿವೆ. ಅಂದಹಾಗೆ, ಈ ಮದುವೆ ನಡೆದಿರುವುದು ತುಮಕೂರಿನ ಕುಣಿಗಲ್ತಾಲೂಕಿನ ಚೌಡನಕುಪ್ಪೆ ಗ್ರಾಮದ ಶಂಕರಣ್ಣ ಹಾಗೂ ಸಂತೆಮಾವೊತ್ತೂರು ಗ್ರಾಮದ ಮೇಘನಾ ಮದುವೆಯಾಗಿದ್ದಾರೆ.
ಮೇಘನಾ ಗೆ ಈಗಾಗಲೇ ಮದುವೆಯಾಗಿದ್ದು, ಆಕೆಯ ಪತ್ನಿಯೊಂದಿಗಿನ ಜೀವನ ಸರಿ ಹೋಗಿಲ್ಲ. ಅಳೆದು-ತೂಗಿ ಹೇಗೋ ಒದ್ದಾಡಿದರೂ ಮೇಘನಾ ಹಾಗೂ ಆತನೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅದು ದಿನ ದಿನಕ್ಕೂ ಹೆಚ್ಚಾಗಿ ಕಡೆಗೆ ಒಟ್ಟಿಗೆ ಇರಲಾರದೇ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರೂ ಡಿವೋರ್ಸ್ ಪಡೆದು ದೂರಾದರು. ಇತ್ತ ಮದುವೆಯಾಗಲು ಹುಡುಗಿಯನ್ನು ಹುಡುಕಿ ಹುಡುಕಿ ಶಂಕರಣ್ಣ ಸೋತು ಸುಮ್ಮನಾಗಿದ್ದ. ಕೊನೆಗೆ ಮೇಘನಾ ಸಿಕ್ಕಿದ್ದಾಳೆ. ಹೀಗಾಗಿ ಯುವತಿ ಎರಡನೇ ಮದುವೆಗೆ ಒಪ್ಪಿದ್ದಾಳೆ. ಕೊನೆಗೆ ದೇವಸ್ಥಾನವೊಂದರಲ್ಲಿ ಇಬ್ಬರ ಮದುವೆಯಾಗಿದೆ ಎಂದು ಹೇಳಲಾಗಿತ್ತು. ಇನ್ನು ಕೆಲ ಟ್ರೋಲ್ಪೇಜ್ಗಳಲ್ಲಿ ಶಂಕರಣ್ಣ ಬಳಿ ಕೋಟಿ ಕೋಟಿ ಹಣವಿದೆ. ಶಂಕರಣ್ಣನನ್ನು ಮದುವೆಯಾದರೆ ಆ ಹಣವೆಲ್ಲಾ ತನ್ನದಾಗುತ್ತೆ ಅನ್ನೋ ಆಸೆಯಲ್ಲಿ ಮೇಘನಾ ಮದುವೆಯಾಗಿದ್ದಾಳೆ ಎಂದೆಲ್ಲಾ ಹೇಳುತ್ತಿದ್ದರು.
ಆದರೆ, ಅಸಲಿಯತ್ತೇ ಬೇರೆ ಇದೆ. ಅದೇನೆಂದರೆ, ಶಂಕರಣ್ಣ ಅವರ ಸಹೋದರಿಯ ಮನಸ್ಥಿತಿ ಅಷ್ಟು ಸರಿ ಇರಲಿಲ್ಲ. ಅವರಿಗಾಗಿ ಶಂಕರಣ್ಣ ಆಸ್ಪತ್ರೆಗಳು ಎಲ್ಲಾ ಸುತ್ತಿದರೂ ಪ್ರಯೋಜನವಾಗಲಿಲ್ಲ. ಅವರ ಮದುವೆ ಮಾಡಲು ಶಂಕರಣ್ಣ ಹರಸಾಹಸ ಪಟ್ರು. ಆದರೆ, ಯಾವುದೂ ಉಪಯೋಗಕ್ಕೆ ಬರಲಿಲ್ಲ. ಅಷ್ಟರಲ್ಲಾಗಲೇ ಶಂಕರಣ್ಣ ಅವರ ಮದುವೆಯ ವಯಸ್ಸು ಮೀರಿತ್ತು. ಇನ್ನು ಕೆಲ ವರ್ಷಗಳಿಂದ ಎಲ್ಲಿ ಹುಡುಗಿ ನೋಡಿದರೂ ಯಾರೂ ಶಂಕರಣ್ಣನಿಗೆ ಹೆಣ್ಣು ಕೊಡಲಿಲ್ಲ. ಆದರೆ ದೇವಸ್ಥಾನವೊಂದರಲ್ಲಿ ಮೇಘನಾ ರನ್ನು ನೋಡಿ ಮಾತನಾಡಿ, ಮದುವೆ ಪ್ರಸ್ತಾಪ ಮಾಡಿದ್ದರು. ಮೇಘನಾ ಒಪ್ಪಿದರು. ಹಾಗಾಗಿ ಮದುವೆಯಾಯಿತು. ಈ ವಿಚಾರ ತಿಳಿಯದೇ ಟ್ರೋಲ್ ಪೇಜ್ ಗಳು ಹೇಗೆಂದರೆ ಹಾಗೆ ಇವರಿಬ್ಬರ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನಾಡುತ್ತಿದ್ದಾರೆ.
(ಸುದ್ದಿ ಹಾಗು ವಿಡಿಯೋ ಕೃಪೆ : ಬಿ ಟಿ ವಿ ನ್ಯೂಸ್ )