ನನ್ನ ಜೊತೆ ನನ್ನ ಮಗು ಲೈಫ್ ಹಾಳು ಮಾಡಿದಿ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ತಾಯಿ..! ಗಂಡ ಮಾಡಿದ್ದೇನು ಗೊತ್ತಾ..?

By Infoflick Correspondent

Updated:Monday, October 25, 2021, 18:10[IST]

ನನ್ನ ಜೊತೆ ನನ್ನ ಮಗು ಲೈಫ್ ಹಾಳು ಮಾಡಿದಿ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ತಾಯಿ..! ಗಂಡ ಮಾಡಿದ್ದೇನು ಗೊತ್ತಾ..?

ಎಲ್ಲರಿಗೂ ಗೊತ್ತಿರುವಂತೆ ಗಂಡ ಹೆಂಡತಿ ಜಗಳದ ನಡುವೆ ಮಗು ಬಡವಾಯಿತು ಎಂಬ ಗಾದೆ ಇದೆ. ಆದರೆ ಇಲ್ಲೊಂದು ಘಟನೆ ಎಲ್ಲರನ್ನ ಬೆಚ್ಚಿ ಬೀಳಿಸಿದ್ದು, ಗಂಡ-ಹೆಂಡತಿಯರ ಜಗಳದ ನಡುವೆ ಮಗುವಿನ ಪ್ರಾಣವೇ ಹೋಗಿದೆ. ಜೊತೆಗೆ ತಾಯಿಯೂ ಕೂಡ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರ್ಗಿ ಜಿಲ್ಲೆ ಶಹಪುರ್ ತಾಲೂಕಿನ ಕಾಗಿಣ ನದಿಯಲ್ಲಿ ಈ ರೀತಿ ದುರ್ಘಟನೆ ನಡೆದಿದ್ದು, ತಾಯಿ-ಮಗು ಸಾವನ್ನಪ್ಪಿದ್ದಾರೆ. ಹೌದು ಶಹಪುರ್ ನಿವಾಸಿ ಶಾಂತಕುಮಾರಿ ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿದ್ದು, ಶಾಂತಕುಮಾರಿ ಅವರನ್ನು ಚಿತಗತಪುರ ತಾಲೂಕಿನ ಮಾಡಬೋಳ ಗ್ರಾಮದ ಸಿದ್ದಲಿಂಗ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.

ನಂತರ ಆರಂಬದಲ್ಲಿ ಇವರಿಬ್ಬರ ಸಾಂಸಾರಿಕ ಜೀವನ ತುಂಬಾನೇ ಅನೋನ್ಯತೆಯಿಂದ ಕೂಡಿತ್ತಂತೆ. ದಂಪತಿಗೆ ಆರು ತಿಂಗಳ ಮುದ್ದಾದ ಮಗು ಕೂಡ ಇತ್ತು. ಹೌದು ಈ ದಂಪತಿಗೆ ಅದೇನಾಯಿತೋ ಗೊತ್ತಿಲ್ಲ, ಕೆಲದಿನಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದ್ದವು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಶಾಂತಕುಮಾರಿ ಅವರು ತವರುಮನೆ ಶಹಪುರಗೆ ಬಂದಿದ್ದರು. ನಂತರ ವಾಟ್ಸಾಪ್ ಸ್ಟೇಟಸ್ ಹಾಕಿ ನನಗೆ ಮತ್ತು ನನ್ನ ಮಗನಿಗೆ ಮೋಸ ಮಾಡಿದಿ ನೀನು ಸಿದ್ದಲಿಂಗ ಎಂದು ಗಂಡನ ವಿರುದ್ಧ ಬರವಣಿಗೆಯ ಮೂಲಕ ವ್ಯಾಟ್ಸಪ್ ಸ್ಟೇಟಸ್ ಮಾಡಿಕೊಂಡಿದ್ದರು ಎಂದು ಕೇಳಿ ಬಂದಿದೆ. 

ಹೌದು ಇದೀಗ ತಾಯಿ ಮಗು ಇಬ್ಬರೂ ನದಿಗೆ ಹಾರಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಪ್ರಕರಣ ಶಹಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಈಗ ತನಿಖೆ ನಡೆಸಿದ್ದಾರೆ. ಜೊತೆಗೆ ತಾಯಿಯ ಶವ ನದಿಯಲ್ಲಿ ಸಿಕ್ಕಿದ್ದು, ಮಗುವಿನ ಶವಕ್ಕಾಗಿ ಹುಡುಕಾಟ ಕಾರ್ಯ ಶೋಧ ನಡೆದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ. ಹೌದು ಈ ಲೇಖನದ ಮೂಲಕ ತಿಳಿದುಕೊಳ್ಳುವುದು ಏನೆಂದರೆ  ಗಂಡ ಹೆಂಡತಿಯೆಂದರೆ ಜಗಳಗಳು ಮಾಮೂಲಿ ಆದ್ರೆ ಭಿನ್ನಾಭಿಪ್ರಾಯ ಮೂಡುವುದಕ್ಕೂ ಮುನ್ನ, ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ವಿಶ್ವಾಸ ಹೆಚ್ಚಿರಬೇಕು ಎಂದು ತಿಳಿಯುತ್ತದೆ. ಇಲ್ಲವಾದಲ್ಲಿ ಈ ರೀತಿ ಘಟನೆಗಳು ನಡೆಯುತ್ತವೆ...