ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧುವಿನ ತಾಯಿಯನ್ನು ನೋಡಿದ... ಕಾರಣ ಗೊತ್ತಾದ್ರೆ ನಿಜಕ್ಕೂ ತಲೆತಿರುಗುತ್ತದೆ..!!

By Infoflick Correspondent

Updated:Monday, September 6, 2021, 10:43[IST]

ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧುವಿನ ತಾಯಿಯನ್ನು ನೋಡಿದ...  ಕಾರಣ ಗೊತ್ತಾದ್ರೆ ನಿಜಕ್ಕೂ ತಲೆತಿರುಗುತ್ತದೆ..!!

ಮದುವೆ ಮಂಟಪದಿಂದ ವರ ಓಡಿ ಹೋಗುವುದು, ವರದಕ್ಷಿಣೆ, ಉಡುಗೊರೆ ಸಾಲದೆಂದು 
ತಾಳಿ ಕಟ್ಟಲು ನಿರಾಕರಿಸುವುದು, ವಧು ಪ್ರಿಯಕರನೊಂದಿಗೆ ಪರಾರಿಯಾಗುವುದು, ಮೊದಲ ಪತ್ನಿ ಬಂದು ಮದುವೆ ತಡೆಯುವುದು, ಊಟೋಪಚಾರ ಸರಿ ಇಲ್ಲವೆಂದು ಮದುವೆ ಮುರಿಯುವುದು ಹೀಗೆ ನಾನಾ ಸುದ್ದಿಗಳನ್ನು ಕೇಳುತ್ತಿರುವುದು ಸಾಮಾನ್ಯ. 

ಆದರೆ ಮಹಾರಾಷ್ಟçದ ಗೋಪಿಗಂಜ್‌ನಲ್ಲಿ ಹುಡುಗಿಗೆ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರ ದಿಗಿಲು ಬಿದ್ದು ಕೂತಲ್ಲಿಂದ ಎದ್ದಿದ್ದಾನೆ. ಇದಕ್ಕೆ ಪ್ರೀತಿ, ಪ್ರೇಮ, ಹುಡುಗಿಯ ರೂಪ ಕಾರಣವಲ್ಲ. ವರನು ವಧುವಿನ ತಾಯಿಯನ್ನು ನೋಡಿ ಈ ಮದುವೆಯೇ ಬೇಡ ಎಂದು ಜಾಗ ಖಾಲಿ ಮಾಡಿದ್ದಾನೆ. ಇಷ್ಟಕ್ಕೂ ವಧುವಿನ ತಾಯಿಗೂ ವರ ತನ್ನ ವಧುವಿಗೆ ತಾಳಿ ಕಟ್ಟುವುದನ್ನು ಬಿಟ್ಟು ಹೋಗುವುದಕ್ಕು ಕಾರಣವೇನು ಎಂದು ತಲೆ ಕೆಡಿಸಿಕೊಳ್ತಿದ್ದೀರ...? ಮದುವೆ ಎಂಬುದು ಜನ್ಮಾಂತರದ ಬಂಧನ ಎಂದೇ ನಂಬಿಕೊAಡ ಹುಡುಗ ಮತ್ತು ಹುಡುಗಿ ಕುಟುಂಬದವರು ಬಹಳ ಶ್ರೀಮಂತರೇ ಆಗಿದ್ದಾರೆ. ಶುಭದಿನ, ಶುಭ ಗಳಿಗೆಯನ್ನು ಗೊತ್ತು ಮಾಡಿಕೊಂಡೇ ಮದುವೆ ಸಿದ್ಧತೆ ನಡೆಸಿದ್ದಾರೆ. ಆದರೆ ಮದುವೆ ಮಂಟಪದಲ್ಲಿ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ.

ಶಿವನ ದೇಗುಲದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದ ಅದ್ಧೂರಿ ಮದುವೆ ಸಮಾರಂಭದಲ್ಲಿ ಹುಡುಗ ತಾಳಿ ಕಟ್ಟುವ ಮೊದಲಿನ ಎಲ್ಲ ಶಾಸ್ತ್ರ, ಸಂಪ್ರದಾಯಗಳನ್ನು ಪಾಲಿಸಿದ್ದಾನೆ. ತಾಳಿ ಕಟ್ಟಲು ಸಿದ್ಧವಾಗಿದ್ದಾತ ಕೊನೆ ಕ್ಷಣದಲ್ಲಿ ವಧುವಿನ ತಾಯಿಯನ್ನು ನೋಡಿದ್ದಾನೆ. ತಕ್ಷಣ ನನಗೆ ಈ ಮದುವೆ ಬೇಡ ಎಂದು ಗಲಾಟೆ ಆರಂಭಿಸಿದ್ದಾನೆ. ತಾನು ಈ ವಿಚಾರದಲ್ಲಿ ಯಾರ ಮಾತು ಕೇಳಲಾರೆ ಎಂಬAತೆ ಅಲ್ಲಿಂದ ಹೊರಟು ಹೋಗಲು ಮುಂದಾಗಿದ್ದಾನೆ.  

ಯಾಕೆAದು ವಿಚಾರಿಸಿದಾಗ ವಧುವಿನ ತಾಯಿಗಿರುವ ತೊನ್ನು ರೋಗ ಕಂಡು ವರ ಭಯಭೀತನಾಗಿರುವುದು ತಿಳಿದು ಬಂದಿದೆ.  ಮುಂದೆ ಹುಟ್ಟುವ ಮಕ್ಕಳಿಗೂ ಈ ರೋಗ ಬರುತ್ತದೆ ಎಂದು ಮದುವೆಯನ್ನು ನಿರಾಕರಿಸಿ ಅಲ್ಲಿಂದ ಎದ್ದು ಬಿಟ್ಟಿದ್ದಾನೆ.  ಕೊನೆಗೆ ಸೇರಿದ್ದ ಹಿರಿಯರೆಲ್ಲ ತಿಳಿಹೇಳಿ ಮನವೊಲಿಸಿ ಹುಡುಗಿಗೆ ತಾಳಿ ಕಟ್ಟಿಸಿದ್ದಾರೆ. ಅಂತೂ ಇಂತೂ ಸೇರಿದ್ದವರ ಬಲವಂತಕ್ಕೆ ತಾಳಿ ಬಿಗಿದಿದ್ದಾನೆ, ಮುಂದೇನು ಗೊತ್ತಿಲ್ಲ.

ತೊನ್ನು ರೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಇನ್ನೂ ಅಜ್ಞಾನ ಆತಂಕ ಎಷ್ಟಿದೆ ಎಂಬುದನ್ನು ಈ ಘಟನೆ ವಿವರಿಸುತ್ತದೆ. ತೊನ್ನು ರೋಗ ವಂಶ ಪಾರಂಪರಿಕವಾಗಿ ಬರುವುದಿಲ್ಲ, ಅದು ಸೋಂಕು ರೋಗ ಅಲ್ಲ, ದೇವರ ಶಾಪವೂ ಅಲ್ಲಿ. ರ‍್ಮದಲ್ಲಿರುವ ಮೆಲನಿನ್ ಅಂಶದ ಕೊರತೆಯಿಂದ ಬಾಧಿಸುವ ಬಣ್ಣದ ವ್ಯತ್ಯಾಸ ಎಂಬುದನ್ನು ನಾವಿನ್ನೂ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಈ ಕಾರಣಕ್ಕೆ ಅದೆಷ್ಟೋ ಮದುವೆಗಳು ಮುರಿದು ಬೀಳುತ್ತಿರುವುದು ಸುದ್ದಿಯಾಗುತ್ತಿಲ್ಲ. 

ಇತ್ತೀಚೆಗೆ ಮದುವೆ ಮಂಟಪದಲ್ಲಿ ನಾನಾ ಕಾರಣಗಳಿಗೆ ವರ ವಧುವನ್ನು ನಿರಾಕರಿಸುವಂತೆಯೇ ವಧು ಕೂಡ ವರನನ್ನು ನಿರಾಕರಿಸುವ ಪ್ರಸಂಗಗಳು ವರದಿಯಾಗುತ್ತಿವೆ. ಇತ್ತೀಚೆಗಷ್ಟೇ ಕುಡಿದು ಹಸೆಮಣೆಯಲ್ಲಿ  ಕುಳಿತಿದ್ದ ಹುಡುಗನನ್ನು ಹುಡುಗಿ ತಾನು ಮದುವೆಯಾಗಲಾರೆ ಎಂದು ನಿರಾಕರಿಸಿರುವುದು ವರದಿಯಾಗಿತ್ತು.