ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದ 25ರ ಹರೆಯದ ಯುವತಿ 45 ರ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದು ಯಾಕೆ ಗೊತ್ತಾ..?
Updated:Tuesday, October 19, 2021, 18:14[IST]

ಅದೊಂದು ಕಾಲವಿತ್ತು ಮದುವೆ ಅಂದರೆ ಹೆಣ್ಣುಮಕ್ಕಳಿಗೆ ಅದೇನೋ ಸಂಭ್ರಮ. ಹುಟ್ಟಿದ ಮನೆ ತೊರೆದು ಶಾಶ್ವಾತವಾಗಿ ಉಳಿಯುವಂತಹ ಗಂಡನ ಮನೆಗೆ ಹೋಗುವ ಸಂಭ್ರಮ. ಹೊಸ ಪರಿಚಯದೊಂದಿಗೆ ಹೊಸ ಬದುಕನ್ನು ಆರಂಭಿ ತವಕ. ಹೊಸ ಸಂಬಂಧಗಳೊಂದಿಗೆ ಬೆರೆತು ತನ್ನದೇ ಒಂದು ನೆಲೆಯನ್ನು ಕಂಡುಕೊಳ್ಳುವ ಸಮಯ. ಅಂತಹ ಮದುವೆಗೆ ಈಗ ಬೆಲೆಯೇ ಇಲ್ಲ. ಪ್ರೀತಿ-ಪ್ರೇಮ ಅನ್ನೋ ಹೆಸರಲ್ಲಿ ಇವತ್ತು ಒಬ್ಬರು, ನಾಳೆ ಒಬ್ಬರು ಅಂತ ಮದುವೆಯಾಗುತ್ತಾರೆ. ಬದುಕಿಗೆ ಬೆಲೆಯೇ ಇಲ್ಲದಂತಾಗಿದೆ.
ಇನ್ನು ಕೆಲವರು ವಯಸ್ಸಿನ ಅಂತರವನ್ನೂ ಮರೆತು ಮದುವೆಯಾಗುತ್ತಾರೆ. ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ತಂದೆ ವಯಸ್ಸಿನವರನ್ನು ಮದುವೆಯಾಗುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಇತ್ತೀಚೆಗಷ್ಟೇ 25ರ ಹರೆಯದ ಹುಡುಗಿ ಒಬ್ಬಳು 45 ರ ಹರೆಯದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇವರಿಬ್ಬರ ಮದುವೆಯ ಫೋಟೋ ಹಾಗೂ ವೀಡಿಯೋ ಟ್ರೋಲ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಹಿರಿಯರು ಈ ಫೋಟೋ ನೋಡಿ ಅದೇನು ಕಾಲ ಬಂತೋ ಎಂದು ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ, ಈ ಮದುವೆ ನಡೆದಿರುವುದು ತುಮಕೂರಿನಲ್ಲಿ. ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ 45 ರ ಹರೆಯದ ಶಂಕರಣ್ಣ ಹಾಗೂ ಸಂತೆಮಾವೊತ್ತೂರು ಗ್ರಾಮದ 25 ವರ್ಷದ ಯುವತಿ ಮೇಘನಾ ಮದುವೆಯಾಗಿದ್ದಾರೆ. ಮೇಘನಾ ಗೆ ಈಗಾಗಲೇ ಮದುವೆಯಾಗಿದ್ದು, ಆಕೆಯ ಪತ್ನಿಯೊಂದಿಗಿನ ಜೀವನ ಸರಿ ಹೋಗಿಲ್ಲ. ಅಳೆದು-ತೂಗಿ ಹೇಗೋ ಒದ್ದಾಡಿದರೂ ಮೇಘನಾ ಹಾಗೂ ಆತನೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅದು ದಿನ ದಿನಕ್ಕೂ ಹೆಚ್ಚಾಗಿ ಕಡೆಗೆ ಒಟ್ಟಿಗೆ ಇರಲಾರದೇ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರೂ ಡಿವೋರ್ಸ್ ಪಡೆದು ದೂರಾದರು.