ಪತಿಯ ಕಿರುಕುಳಕ್ಕೆ ಬೇಸತ್ತು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಯುವತಿ..!

Updated: Friday, April 2, 2021, 19:17 [IST]

ಹೌದು ಸ್ನೇಹಿತರೆ ಹೀಗೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ನಿನ್ನೆಯಷ್ಟೇ ತುಂಬಲಾರದ ನಷ್ಟ ಕುಟುಂಬಕ್ಕೆ ಆಗಿದ್ದು, ಮಗಳನ್ನು ಕಳೆದುಕೊಂಡ ತಂದೆ ತನ್ನ ಅಳಿಯ ಹಾಗೂ ಆತನ ತಮ್ಮ, ಅಕ್ಕನ ವಿರುದ್ಧ ದೂರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ.? ಮುಂದೆ ಓದಿ. ಹೌದು ತಂದೆ ಮುಸ್ಲಿಂ ಆಗಿದ್ದು ತನ್ನ 23 ವರ್ಷದ ಮಗಳನ್ನು 2019ರಲ್ಲಿ ಮುಸ್ಲಿಂ ಯುವಕನಿಗೆ ಮದುವೆ ಮಾಡಿಕೊಡ್ತಾರೆ, ಬಳಿಕ ಅಳಿಯ ದುಡಿಯದೆ ಯಾವ ಕೆಲಸಕ್ಕೆ ಹೋಗದೆ, ಆತನ ತಮ್ಮ ಹಾಗೂ ಅಕ್ಕನ ಮಾತನ್ನು ಕೇಳಿಕೊಂಡು ಮದುವೆಯಯಾದ ತನ್ನ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ.  

ಆರಂಭದಲ್ಲಿ ಯುವಕ, ಹೆಂಡತಿ ಎದುರು ನಾನು ಸಾಲ ಮಾಡಿರುವುದಾಗಿ ಹೇಳಿ, ತಂದೆ-ತಾಯಿ ಕಷ್ಟಪಟ್ಟು ಮಗಳಿಗೆ ಕೊಟ್ಟಿದ್ದ ಆಭರಣವನ್ನ ಹಾಗೂ ದುಡ್ಡನ್ನು ಮಾರಿಕೊಂಡು ಸಾಲ ತೀರಿಸಿಕೊಂಡಿದ್ದೆನೆ ಎಂದು ಹೇಳಿದ್ದನಂತೆ. ಇದಾದ ಮೇಲೆ ತನ್ನ ತಮ್ಮ ಹಾಗೂ ಅಕ್ಕನ ಜೊತೆ ಸೇರಿ,ಹೆಂಡಿತಿಗೆ ನೀನು ಚೆನ್ನಾಗಿಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ, ಎಂದು ನಿಂದಿಸಿ ಪ್ರತಿದಿನವೂ ಕಿರುಕುಳ ನೀಡುತ್ತಿದ್ದರಂತೆ, ಹಿಂಸಿಸಿ ಯುವತಿಗೆ ಪ್ರತಿದಿನ ಹೊಡೆಯುತ್ತಿದ್ದಂತೆ, ಇದನ್ನೆಲ್ಲಾ ಯುವತಿ ತಂದೆ ತಾಯಿ ಬಳಿ ಹೇಳಿದಾಗ ದುಡ್ಡಿಗಾಗಿ ಇರಬೇಕೆಂದು ಕೈಲಾದಷ್ಟು ಹಣ ಕೂಡ, ಯುವತಿಯ ತಂದೆ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.   

ಹಾಗೆ ಮಗಳ ಗಂಡ ಮನೆ ಬದಲಿಸುತ್ತೇನೆ ಎಂದಾಗ ಬಾಡಿಗೆ ಮನೆಯನ್ನು ಕೂಡ ಕೊಡಿಸಿದ್ದರಂತೆ, ಆ ಮನೆ ಸರಿ ಹೋಗಲಿಲ್ಲವೆಂದು ಅಳಿಯ ಮತ್ತೆ ಹೇಳಿದಾಗ, ಯುವತಿಯ ತಂದೆ ಶಿವಾಜಿನಗರದಲ್ಲಿ ಮತ್ತೊಂದು ಬಾಡಿಗೆಮನೆ ಕೊಡಿಸಿ 2 ತಿಂಗಳಿಗಾಗುವಷ್ಟು ರೇಷನ್ ಕೊಡಿಸಿ ಬಂದಿದ್ದರಂತೆ. ಇಷ್ಟಾದರೂ ಸಹ ಯುವತಿಯ ಒಳ್ಳೆಯತನಕ್ಕೆ, ಮತ್ತು ಯುವತಿ ತಂದೆ ಒಳ್ಳೆಯತನಕ್ಕೆ ಬೆಲೆಯನ್ನೇ ಯುವಕ ಕೊಡಲಿಲ್ಲ ಎನ್ನಲಾಗಿದೆ. ಇದಾದ ಬಳಿಕ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಅಳಿಯನ ತಮ್ಮ ಹಾಗೂ ಅಕ್ಕ, ಯುವತಿಯ ವಿರುದ್ಧ ಎತ್ತು ಕಟ್ಟಿ ಮಾತನಾಡಿ ಹೊಡಿಸಿ ಹೋಗುತ್ತಿದ್ದರು ಎನ್ನಲಾಗಿದೆ. 

ಕಳೆದ ತಿಂಗಳು 27ನೇ ತಾರೀಕು, ಯುವಕ ನೀನು ಚೆನ್ನಾಗಿಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ, ಎಂದು ತನ್ನ ಪತ್ನಿಗೆ ಹೊಡೆದು ಹಿಂಸಿಸಿ, ಮನೆಯಿಂದ ಆಚೆ ಹಾಕಿ, ನಿಮ್ಮ ತಂದೆ ಮನೆಗೆ ಹೋಗು, ಎಲ್ಲಾದರೂ ಹೋಗಿ ಸಾಯಿ ಎಂದು ಹೇಳಿದ್ದನಂತೆ. ಮನನೊಂದ ಯುವತಿ ತಂದೆ-ತಾಯಿ ಮನೆಗೆ ಬಂದು ನಡೆದ ವಿಷಯವನ್ನೆಲ್ಲ ಹೇಳಿದಳಂತೆ. ಹಬ್ಬ ಹೋಗಲಿ ಆಮೇಲೆ ನೋಡೋಣ ಎಂದು ತಂದೆ-ತಾಯಿ ಸುಮ್ಮನಿದ್ದರು ಎನ್ನಲಾಗಿದೆ. ಮಾರ್ಚ್ 30ನೇ ತಾರೀಕು ರಾತ್ರಿ ವೇಳೆ ತುಂಬಾ ಲೇಟಾಗಿ ಮಲಗಿದ್ದ ಮಗಳು, 31 ನೇ ತಾರೀಖು ಬೆಳಗ್ಗೆ 12 ಗಂಟೆಯಾದರೂ ಬಾಗಿಲು ತೆಗೆದ ಕಾರಣ, ತಂದೆ-ತಾಯಿ ಭಯಬಿದ್ದು ಬಾಗಿಲು ತೆಗೆದು ನೋಡಿದಾಗ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಮಗಳು ಮೃತಪಟ್ಟಿದ್ದಳಂತೆ. ಈ ನೋವಿನ ಸಂಗತಿಯನ್ನು ದೂರಿನ ಮೂಲಕ ತಿಳಿಸಿ, ತನ್ನ ಮಗಳಿಗೆ ಹಿಂಸೆ ಕೊಟ್ಟು, ಹೊಡೆದು ಬಡಿದು ಅವಳ ಸಾವಿಗೆ ಕಾರಣರಾದ ತನ್ನ ಅಳಿಯ ಹಾಗೂ ಅವನ ತಮ್ಮ ಹಾಗೂ ಅವರ ಅಕ್ಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.   

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ಎರಡು ದೂರಿನ ಫೋಟೋಗಳನ್ನು ನೋಡಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಮೆಂಟ್ ಮಾಡಿ ತಿಳಿಸಿ. ಮತ್ತು ಯಾರು ಈ ರೀತಿ ಮಾಡದಿರಿ ಸ್ನೇಹಿತರೆ, ಹೆಣ್ಣು ಹೆತ್ತ ತಂದೆ ತಾಯಿಗೆ, ಹೆಣ್ಣು ಮಗಳೇ ಸರ್ವಸ್ವ ಎಲ್ಲಾ ಆಗಿರುತ್ತಾಳೆ. ಗಂಡನ ಮನೆಯಲ್ಲಿ ಖುಷಿಯಾಗಿರಲಿ ಎಂದು ಏನೆಲ್ಲಾ ಕಷ್ಟಪಡುತ್ತಾರೆ, ಅಂತ ತಂದೆ ತಾಯಿ ನಂಬಿಕೆಗೆ, ಅವರ ಪ್ರೀತಿ-ವಿಶ್ವಾಸಕ್ಕೆ ಬೆಂಕಿ ಹಾಕಬೇಡಿ ಸ್ನೇಹಿತರೆ. ಮಾಹಿತಿ ಓದಿದ ಬಳಿಕ ಎಲ್ಲರೂ ಶೇರ್ ಮಾಡಿ, ಈ ರೀತಿ ನೋವು ಕೊಟ್ಟ ಇವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...