ಸ್ಪಂದನ ಹೆಸರನ್ನ ಬಳಸಿದ್ದ ನವೀನ್ ಕೃಷ್ಣ..! ಅದನ್ನ ಮೊದಲು ತೆಗೆಯಿರಿ ಎಂದಿದ್ದರಂತೆ ರಾಘು..! ಕಾರಣ

ಸ್ಪಂದನ ಹೆಸರನ್ನ ಬಳಸಿದ್ದ ನವೀನ್ ಕೃಷ್ಣ..! ಅದನ್ನ ಮೊದಲು ತೆಗೆಯಿರಿ ಎಂದಿದ್ದರಂತೆ ರಾಘು..! ಕಾರಣ

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳು ದಿನದಿಂದ ದಿನಕ್ಕೆ ಕಾಣುತ್ತಿವೆ.. ಸಿನಿಮಾಗಳು ಹೆಚ್ಚು ಹೆಚ್ಚು ಹೊರಗಡೆ ಬರುತ್ತಿವೆ. ಇದರ ನಡುವೆ ನಟ ವಿಜಯ್ ಅವರ ಕುಟುಂಬ ಇನ್ನೂ ಕೂಡ ಸ್ಪಂದನ ಅವರ ಅಗಲಿಕೆಯಿಂದ ಹೊರಬಂದಿಲ್ಲ. ಹೊರಬರಲು ಸಹ ಅಸಾಧ್ಯ ಎಂದು ಹೇಳಬಹುದು, ಕಾರಣ ಅಷ್ಟು ಚಿಕ್ಕ ವಯಸ್ಸಿಗೇ ಸ್ಪಂದನಾರ ಅಗಲಿಕೆ ಆಗಿದೆ. ಇಂದಿಗೂ ಸ್ಪಂದನ ಅವರನ್ನು ನೆನೆಯುತ್ತ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಸ್ಪಂದನ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವಿಷಯಗಳು ಹೊರ ಬರುತ್ತಿವೆ.. 

ಅಷ್ಟರಮಟ್ಟಿಗೆ ಸ್ಪಂದನ ಅವರನ್ನ ನಟ ರಾಘು ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಪಂದನ ಅವರ ಕುರಿತಾಗಿ ಒಂದೊಂದೇ ವಿಚಾರಗಳು ವಿಜಯ್ ಅವರಿಂದ ಹಾಗೂ  ಸ್ಪಂದನ ಗೆಳಯ ಗೆಳತಿಯರ ಹಾಗೂ ಅವರ ಆಪ್ತರ ಬಳಗದಿಂದ ಹೊರ ಬರುತ್ತಿವೆ. ಕಿಸ್ಮತ್ ಸಿನಿಮಾದಲ್ಲಿ ಸ್ಪಂದನ ಅವರ ಹೆಸರನ್ನು ಬಳಕೆ ಮಾಡದಂತೆ ಅಂದು ವಿಜಯ ರಾಘವೇಂದ್ರ ಸಿನಿಮಾದ ನಾಯಕ ನಟರಾದ ಹಾಗೂ ಕಿಸ್ಮತ್ ಚಿತ್ರದ ಸಂಭಾಷಣೆಗಾರರಾದ ನವೀನ್ ಕೃಷ್ಣ ಅವರಿಗೆ ತಾಕಿತು ಮಾಡಿದ್ದರಂತೆ. ಸ್ಯಾಂಡಲ್ವುಡ್ನ ಇನ್ನೋರ್ವ ನಟ ಭೂಮಿಗೆ ಬಂದ ದೇವರು ಖ್ಯಾತಿಯ ನವೀನ್ ಕೃಷ್ಣ ಕಿಸ್ಮತ್ ಚಿತ್ರದಲ್ಲಿ ನಾಯಕ ಆಗಿದ್ದರು. ಈ ಸಿನಿಮಾವನ್ನ ಸ್ಪಂದನ ಅವರು ನಿರ್ಮಾಣ ಮಾಡಿದ್ದರು.  ಈ ಸಿನಿಮಾದಲ್ಲಿ ಒಂದು ಡೈಲಾಗ್ ಬಂದಿತ್ತು. ಅದಕ್ಕಿಂತ ಮುಂಚೆ ಈ ಸಿನಿಮಾದ ನಾಯಕಿಗೆ ಸ್ಪಂದನ ಎಂದು ಮೊದಲು ಹೆಸರಿಟ್ಟಿದ್ದರು, ಆದರೆ ಅದೊಂದು ಡೈಲಾಗ್ ಕೇಳಿ ರಾಘು ಸ್ಪಂದನ ಹೆಸರನ್ನು ನಾಯಕಿಗೆ ಇಡಬೇಡಿ ಎಂದು ನನಗೆ ಹೇಳಿದ್ದರು ಎಂದು ಈಗ ನವೀನ್ ಕೃಷ್ಣ ಹೇಳಿಕೊಂಡಿದ್ದಾರೆ.   

ಅಸಲಿಗೆ ಯಾಕೆ ಸ್ಪಂದನಾರ ಹೆಸರನ್ನು ಇಡಬಾರದು ಎಂದು ರಾಘು ಅಂದು ಹೇಳಿದರು ಗೊತ್ತ..? ಮುಂದೆ ಓದಿ..'ಎನ್ ಬೇಬಿ ನಿನ್ನ ಹೆಸರು ಏನು ಎಂಬುದಾಗಿ ಸಿನಿಮಾದ ಡೈಲಾಗ್ ಒಂದು ಈ ಕಿಸ್ಮತ್ ಚಿತ್ರದಲ್ಲಿ ಇತ್ತಂತೆ. ಈ ಡೈಲಾಗ್ ಮೂಲಕ ನವೀನ್ ಕೃಷ್ಣ ಅವರು ನಾಯಕಿಗೆ ಕೇಳಿರುತ್ತಾರೆ. ಆಗ ನಾಯಕಿ ಸ್ಪಂದನ ಎಂದು ಹೇಳುತ್ತಾರೆ. ಆಗ ನವೀನ್ ಕೃಷ್ಣ ಸ್ಪಂದನ ಎನ್ನುವ ನಿನ್ನ ಹೆಸರಿನಲ್ಲಿಯೆ ಸ್ಪ ಇದೆ ಎಂದು ಹೇಳಿದಾಗ ಅಲ್ಲೇ ಇದ್ದ ನಟ ರಾಘು ಅವರು ಇದನ್ನ ಕೇಳಿಸಿಕೊಂಡು ಸ್ಪಂದನ ಹೆಸರನ್ನು ನಿಮ್ಮ ಸಿನಿಮಾ ನಟಿಗೆ ಇಡಬೇಡಿ, ಇದನ್ನು ಕೇಳಿಸಿಕೊಂಡರೆ ನನ್ನ ಹೆಂಡತಿ ಬೇಜಾರು ಮಾಡಿಕೊಳ್ಳುತ್ತಾಳೆ ಹಾಗಾಗಿ ಹೆಸರನ್ನು ಬದಲಾಯಿಸಿ ಬಿಡಿ ಎಂದು ಹೇಳಿದ್ದರಂತೆ. 

ಅಷ್ಟರ ಮಟ್ಟಿಗೆ ಸ್ಪಂದನ ಅವರನ್ನು ನಟ ವಿಜಯ ರಾಘವೇಂದ್ರ ಅವರು ಹಚ್ಚಿಕೊಂಡಿದ್ದರು. ಇದೀಗ ಸ್ಪಂದನ ಅವರ ಅಗಲಿಕೆ ಕುರಿತಾಗಿ ನವೀನ್ ಕೃಷ್ಣ ಅವರು ಸುದ್ದಿ ಮಾಧ್ಯಮದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಹಾಗೆ ರಾಘು ಮಗನ ಬಗ್ಗೆ ರಾಘು ಅವರ ಬಗ್ಗೆ ಇನ್ನೂ ಏನೇನೆಲ್ಲ ಹೇಳಿದರು ಗೊತ್ತಾ..? ಇಲ್ಲಿದೆ ಆ ನೋಡಿ ವಿಡಿಯೋ, ಮತ್ತು ವಿಡಿಯೋ ನೋಡಿದ ಬಳಿಕ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು... ( video credit : taja kannada suddi )