ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಆಂಟಿ ಮನೆಗೆ ಹೋದ ಯುವಕ ;ಮುಂದೆ ಆಗಿದ್ದು ಎಂತ ಅನಾಹುತ ನೋಡಿ

ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಆಂಟಿ ಮನೆಗೆ ಹೋದ ಯುವಕ ;ಮುಂದೆ ಆಗಿದ್ದು ಎಂತ ಅನಾಹುತ ನೋಡಿ

ಈಗಿನ ಕಾಲದಲ್ಲಿ ಯುವಕರು ಡೇಟಿಂಗ್‌ ಆ್ಯಪ್‌ ನಲ್ಲಿ ಹುಡುಗಿಯರಿಗಾಗಿ ಹುಡುಕುತ್ತ ಇರುತ್ತಾರೆ . ಆದರೆ ಅವರಿಗೆ ತಾವು ಎಂತಹ ಅಪಾಯಕ್ಕೆ ಸಿಕ್ಕಿ ಹಾಕಿ ಕೊಳ್ಳುತ್ತೇವೆ ಎನ್ನುವ ಅರಿವು ಇರುವುದಿಲ್ಲ . ಅದೇ ರೀತಿ ಒಬ್ಬ ಯುವಕ ಡೇಟಿಂಗ್ ಆ್ಯಪ್‌ ನಲ್ಲಿ  ಪರಿಚಯವಾದ ಆಂಟಿ ಮನೆಗೆ ಹೋಗಿದ್ದಾನೆ ನಂತರ ಏನ್ ಆಯಿತು ನೋಡಣ್ಣ ಬನ್ನಿ 

ಕೆಲ ದಿನಗಳ ಹಿಂದೆ ಡೇಟಿಂಗ್‌ ಆ್ಯಪ್‌ ಮೂಲಕ ಸಂತ್ರಸ್ತನಿಗೆ ಆರೋಪಿ ಮೆಹರಾ ಹೆಸರಿನ ಮಹಿಳೆ ಪರಿಚಯವಾಗಿತ್ತು‌. ಪರಿಚಯದ ನಂತರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿದ್ದು, ಬಳಿಕ  ಚಾಟಿಂಗ್‌, ಕಾಲಿಂಗ್ ಅಂತಾ ಶುರುವಾಗಿದೆ. ಬಳಿಕ ಸಂತ್ರಸ್ತನನ್ನು ಸಂಪರ್ಕಿಸಿದ ಮಹಿಳೆ ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ. ಇದನ್ನು ನಂಬಿದ ಸಂತ್ರಸ್ತ ಸಹ ಆರೋಪಿ ಜತೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾನೆ.    

ಆಗ ಆತನಿಂದ ಫೋಟೋ ಪಡೆದ ಆರೋಪಿತೆ ತನ್ನ ಮನೆಯ ವಿಳಾಸ ಲೋಕೇಷನ್‌ ಶೇರ್‌ ಮಾಡಿದ್ದಾಳೆ. ಅಂತೆಯೇ ಜೆ.ಪಿ.ನಗರ 5ನೇ ಹಂತದಲ್ಲಿರುವ ಮಹಿಳೆಯ ನಿವಾಸಕ್ಕೆ ಸಂತ್ರಸ್ತ ತೆರಳಿದ್ದಾನೆ. ಈ ವೇಳೆ ಏಕಾಏಕಿ ಆ ಮನೆಗೆ ನುಗ್ಗಿದ ಮೂವರು ಅಪರಿಚಿತರು ಸಂತ್ರಸ್ತನನ್ನು ಬೆಡ್‌ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. 
ಇದೇ ಸಂದರ್ಭದಲ್ಲಿ ನಿನ್ನನ್ನು ಸುಮ್ಮನೆ ಬಿಡಬೇಕಾದರೆ 3 ಲಕ್ಷ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯಭೀತನಾದ ವ್ಯಕ್ತಿಗೆ ದಿಕ್ಕುತೋಚದಂತಾಗಿದೆ. ಕೊನೆಗೆ ಸಂತ್ರಸ್ತನ ಅಕೌಂಟ್​ನಲ್ಲಿದ್ದ 21 ಸಾವಿರ ರೂಪಾಯಿಯನ್ನು ಫೋನ್‌ ಪೇ ಮಾಡಿಸಿಕೊಂಡ ಆರೋಪಿಗಳು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ.