ಕೊರೊನಾ ಮಹಾಮಾರಿಗೆ ನಿರೂಪಕ ಅರುಣ್ ಬಡಿಗೇರ್ ತಂದೆ-ತಾಯಿ ಬಲಿ..

Updated: Friday, April 30, 2021, 15:39 [IST]

ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ತಂದೆ-ತಾಯಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. 
ಏಪ್ರಿಲ್ 27 ರಂದು ಅರುಣ್ ಬಡಿಗೇರ್ ಅವರ ತಾಯಿ 57 ವರ್ಷದ ಕಸ್ತೂರಮ್ಮ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 2.30ಕ್ಕೆ ನಿಧನರಾಗಿದ್ದರು. ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಕಸ್ತೂರಮ್ಮ ಅಗಲಿದ್ದರು. 

ಇನ್ನು ಅರುಣ್ ತಂದೆ ಚಂದ್ರಶೇಖರ್ ಬಡಿಗೇರ್ ಅವರ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರ ತಂದೆಯೂ ಮೃತಪಟ್ಟಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಬಡಿಗೇರ್, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 

ಇನ್ನು ಅರುಣ್ ಬಡಿಗೇರ್, ಅವರ ಸಹೋದರ, ಸಹೋದರಿ ಎಲ್ಲರಿಗೂ ಕೂಡ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಒಂದೇ ವಾರದಲ್ಲಿ ಅರುಣ್ ಬಡಿಏರ್ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. 

 

ಇತ್ತ ಇದೇ ತಿಂಗಳ 25ಕ್ಕೆ ಅರುಣ್ ಸಹೋದರಿಯ ಮದುವೆ ನಿಶ್ಚಿತವಾಗಿತ್ತು. ಆದರೆ, ಕೊರೊನಾ ಪಾಸಿಟಿವ್ ಮಂದಿದ್ದರಿಂದ ಮದುವೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.