ಜನತಾ ಕರ್ಫ್ಯೂ ಮುಂದುವರಿಸುತ್ತಾ ಸರ್ಕಾರ: ಸಚಿವ ಆರ್.ಅಶೋಕ್ ಕಟ್ರು ಮಹತ್ವದ ಸುಳಿವು..

Updated: Thursday, April 29, 2021, 13:01 [IST]

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾದರಿಯೇ ಕಠಿಣ ಕರ್ಫ್ಯೂ ಜಾರಿ ಮಾಡಲಾಗಿದೆ.  ನಿನ್ನೆಯಿಂದ ಜನತಾ ಕರ್ಫ್ಯೂ ಆರಂಭವಾಗಿದ್ರೂ ಜನರು ಮಾತ್ರ ಕೇರ್ ಮಾಡದೇ ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್ ಜನತಾ ಕರ್ಫ್ಯೂ ಮುಂದುವರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಚೈನ್ ಲಿಂಕ್ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರವೂ ಇದೇ ರೀತಿ ಮುಂದುವರೆಸಲು ಸಿದ್ಧ ಇದೆ. ಆದರೆ ಜನರು ಜವಾಬ್ದಾರಿಯಿಂದ ನಡೆಯಬೇಕು ಕರ್ಫ್ಯೂ ಇಲ್ಲದೆ ಇದ್ದರೂ , ಕೆಲಸ ಇದ್ದರೆ ಮಾತ್ರ ಓಡಾಡಬೇಕು ಎಂದು ಹೇಳಿದರು.   

ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನಬಾರದು.ಜನರ ಜವಾಬ್ದಾರಿಯೂ ಇದೆ. ಸುಖಾಸುಮ್ಮನೆ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡರು.

ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ 10 ರವರೆಗೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ಅಂಗಡಿ – ಮುಂಗಟ್ಟುಗಳನ್ನು ತೆರೆಯಲಾಗಿತ್ತು. ೧೦ರ ನಂತರ ಮದ್ಯದ ಅಂಗಡಿಗಳು ಸೇರಿದಂತೆ, ಎಲ್ಲಾ ಅಗತ್ಯ ಸೇವೆಗಳ ಅಂಗಡಿಗಳಿಗೆ ಬೀಗ ಹಾಕಲಾಗಿದೆ.
ಸಾರಿಗೆ ಬಸ್ ಸೇರಿದಂತೆ, ವಾಹನ ಸಂಚಾರವೂ ಬಂದ್ ಆಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ತುರ್ತು ವಾಹನ ಹಾಗೂ ಸರಕು ಸಾಗಣೆ ವಾಹನಗಳ ಓಡಾಟ, ಪೆಟ್ರೋಲ್ ಬಂಕ್ ಹೊರತುಪಡಿಸಿದರೆ, ರಾಜ್ಯದ ಎಲ್ಲೆಡೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.ರಾಜಧಾನಿ ಬೆಂಗಳೂರು ಸೇರಿದಂತೆ, ಎಲ್ಲೆಡೆ ಕೊರೊನಾ ತಡೆಯ ಕರ್ಫ್ಯೂ ಜಾರಿಯಾಗಿದ್ದು, ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜನರ ಓಡಾಟವೂ ವಿರಳವಾಗಿದೆ.

ಎಲ್ಲಾ ಜಿಲ್ಲಾ ಗಡಿಗಳಲ್ಲೂ ಪೊಲೀಸರು ಚೆಕ್ಪೋಸ್ಟ್ ಸ್ಥಾಪಿಸಿ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸಿದ್ದಾರೆ. ತುರ್ತು ಹಾಗೂ ಅಗತ್ಯ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಇಡೀ ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ನಿರ್ಮಾಣ ಕಾಮಗಾರಿ ಮತ್ತು ಕೃಷಿ ಚಟುವಟಿಕೆಗಳು ಮಾಮೂಲಿನಂತೆ ನಡೆದಿವೆ. ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ.

ಕೊರೊನಾ ಕರ್ಫ್ಯೂ ಕಾರಣ ರಾಜ್ಯಧಾನಿ ಬೆಂಗಳೂರಿನಲ್ಲಿ ಅಘೋಷಿತ ಬಂದ್ನ ವಾತಾವರಣ ಇದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿವೆ.ಸಾರಿಗೆ ಬಸ್, ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ, ಮೆಟ್ರೋ ರೈಲು ಓಡಾಟವೂ ಬಂದ್ ಆಗಿದೆ.

ನಗರದಲ್ಲಿ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಿಗೆ ಬ್ಯಾರಿಕೇಡ್ಗಳನ್ನು ಹಾಕಿ ಬಂದ್ ಮಾಡಲಾಗಿದ್ದು, ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಪಿಎಂಸಿ ಸೇರಿದಂತೆ ಎಲ್ಲ ಮಾರುಕಟ್ಟೆಗಳು ಬಂದ್ ಆಗಿವೆ. ರಸ್ತೆಗಳಲ್ಲೂ ವಾಹನಗಳ ಓಡಾಟ ವಿರಳವಾಗಿದೆ.