ಬಬಲಾದಿ ಅಜ್ಜ ನುಡಿದ ಈ ವರ್ಷದ ಭೀಕರ ಭವಿಷ್ಯವಾಣಿ ಏನು ಗೊತ್ತಾ..?

By Infoflick Correspondent

Updated:Thursday, March 24, 2022, 20:10[IST]

ಬಬಲಾದಿ ಅಜ್ಜ ನುಡಿದ ಈ ವರ್ಷದ   ಭೀಕರ ಭವಿಷ್ಯವಾಣಿ ಏನು ಗೊತ್ತಾ..?

ಜಯಪುರದ ಬಬಲೇಶ್ವರ ಜಿಲ್ಲೆಯಲ್ಲಿ ಬಬಲಾದಿ ಎಂಬ ಮಠವೊಂದಿದೆ. ಈ ಮಠದಲ್ಲಿ ಮುನ್ನೂರು ವರ್ಷಗಳ ಹಿಂದೆ ಸಿದ್ಧಿ ಪುರುಷ ಸದಾಶಿವ ಅಜ್ಜ ಎಂಬುವರು ಬಬಲಾದಿಯಲ್ಲಿ ನೆಲೆ ನಿಂತಿದ್ದರು. ಇಲ್ಲಿ ಪವಾಡಗಳನ್ನು ಮಾಡುತ್ತಿದ್ದರು. ಇವರ ಪವಾಡಗಳನ್ನು ಕಂಡ ಜನರು ಬೆರಗಾಗಿದ್ದರು. ಇನ್ನು ಅಜ್ಜ ಶಿವರಾತ್ರಿಯಂದು ನುಡಿಯುವ ವರ್ಷದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲವಂತೆ. ಅಜ್ಜನವರು ಕಾಲಜ್ಞಾನವನ್ನು ನುಡಿದಿದ್ದರು. ಇದನ್ನು ಚಿಕ್ಕಪ್ಪಯ್ಯ ಮುಂಡಗಿ ಎಂಬುವರು ಸುಮಾರು ಹನ್ನೆರಡು ಪುಟಗಳಲ್ಲಿ ಬರೆದಿಟ್ಟಿದ್ದರು. ಪ್ರತಿ ವರ್ಷ ಈ ಭವಿಷ್ಯವನ್ನು ಸಿದ್ದು ಮುತ್ಯಾ ಓದುತ್ತಾರೆ. 

ಅಜ್ಜ ನುಡಿದಂತೆ ಅದಾಗಲೇ ಹಲವು ಭವಿಷ್ಯಗಳು ನಿಜವಾಗಿವೆ. ಪ್ರಧಾನಿ ನರೇಂದ್ರ ಮೋದಿ, ಡಿಜೆ ಕೆಜೆ ಹಳ್ಳಿ ಪ್ರಕರಣ, ಮಂಗಳೂರು ಗಲಭೆ, ಕೊರೊನಾ, ಯುದ್ಧ ಹೀಗೆ ಪ್ರತಿಯೊಂದರ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಈ ಶಿವರಾತ್ರಿಯಲ್ಲಿ ಭೂಕಂಪವಾಗುವ ಬಗ್ಗೆ ಅಜ್ಜ ಭವಿಷ್ಯ ನುಡಿದಿದ್ದರು. ಅದರಂತೆ ಬಬಲಾದಿ ಮಠದಿಂದ ಸ್ವಲ್ಪ ದೂರದಲ್ಲೇ ಭೂ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ. ಮನೆಯಲ್ಲಿ ಪಾತ್ರೆ ಪಗಡೆಗಳೆಲ್ಲಾ ಬೀಳಲು ಶುರು ಮಾಡಿದಾಗ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.  

ಅಷ್ಟೇ ಅಲ್ಲದೇ ಈ ವರ್ಷ ಸುನಾಮಿ ಎದ್ದು ಹಲವರು ಜೀವ ಕಳೆದುಕೊಳ್ಳುತ್ತಾರೆ ಎಂದೂ ಕೂಡ ಭವಿಷ್ಯ ನುಡಿದಿದ್ದಾರೆ. ಅದರಂತೆ ಈ ಬೇಸಿಗೆ ಕಾಲದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇನ್ನು ಗಂಡಸರು ಸಾಯುವ ಮೂಲಕ ಹೆಣ್ಣು ಮಕ್ಕಳು ಕಣ್ಣೀರಿಡುವ ಪರೀಸ್ಥಿತಿ ಎದುರಾಗುತ್ತದೆ ಎಂದು ಎಚ್ಚಿರಿಕೆಯನ್ನೂ ನೀಡಿದ್ದಾರೆ. ಯುದ್ಧದಿಂದ ಉಕ್ರೇನ್ ನಲ್ಲಿ ಗಂಡಸರು ಹೆಣ್ಣು ಮಕ್ಕಳನ್ನು ಕಳಿಸಿ ಯುದ್ಧಕ್ಕೆ ನಿಂತರು. ಇದರಿಂದ ಅದೆಷ್ಟೋ ಜನರು ಕಣ್ಣೀರಿಡುವಂತಾಯ್ತು. ಇನ್ನು ಮುಂದಿನ ದಿನಗಳಲ್ಲಿ ದೇಶದಲ್ಲಿ ಅಸೂಯೆ, ಅಶಾಂತಿ ಹೆಚ್ಚಾಗಲಿದೆ. ಇದರಿಂದ ಜನ ಕಷ್ಟ-ನಷ್ಟಗಳನ್ನು ಎದುರಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.