ಚಿನ್ನ ಪ್ರಿಯರಿಗೆ ಶಾಕಿಂಗ್ ಸುದ್ದಿ ಇನ್ನು ಮೇಲೆ ಚಿನ್ನ ದುಬಾರಿ ಏಕೆ ನೋಡಿ ?

By Infoflick Correspondent

Updated:Sunday, July 3, 2022, 10:45[IST]

ಚಿನ್ನ ಪ್ರಿಯರಿಗೆ ಶಾಕಿಂಗ್ ಸುದ್ದಿ ಇನ್ನು ಮೇಲೆ ಚಿನ್ನ ದುಬಾರಿ ಏಕೆ ನೋಡಿ ?

ಹಳದಿ ಲೋಹದ ಆಮದು ಸುಂಕ ಏರಿಕೆಯಾಗಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದು ಜೂನ್ 30 ರಿಂದ ಜಾರಿಗೆ ಬಂದಿದೆ.ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ಮಿತಿಗೊಳಿಸುವ ಹಾಗೂ ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಚಿನ್ನ ಆಮದಿನ ಮೇಲಿನ ಸುಂಕವನ್ನು ಶೇಕಡ 15ಕ್ಕೆ ಹೆಚ್ಚಿಸಿದೆ. ಇದು ಶೇ 10.75 ಆಗಿತ್ತು. ಚಿನ್ನದ ಮೇಲೆ ಶೇಕಡ 10.75ರಷ್ಟು ಜಿಎಸ್‌ಟಿ, ತೆರಿಗೆ ಸೇರಿ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಈಗ ಆಮದು ಸುಂಕದಲ್ಲಿ ಶೇಕಡ ಐದರಷ್ಟು ಏರಿಕೆ ಮಾಡಿರುವ ಕಾರಣದಿಂದಾಗಿ ಚಿನ್ನದ ಮೇಲಿನ ಒಟ್ಟು ತೆರಿಗೆಯು ಶೇಕಡ 15.75 ಆಗಲಿದೆ.

ಈ ಹಿಂದೆ ಚಿನ್ನದ ಮೇಲಿನ ಮೂಲ ಆಮದು ಸುಂಕ ಶೇ.7.5 ರಷ್ಟಿತ್ತು. ಅದು ಇದೀಗ ಶೇ. 12.5 ರಷ್ಟಾಗಲಿದೆ. ಶೇ. 2.5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ನೊಂದಿಗೆ ಚಿನ್ನದ ಮೇಲಿನ ಆಮದು ಸುಂಕ ಶೇ. 15 ರಷ್ಟಾಗಲಿದೆ.ಕೊರೋನಾ ಸಾಂಕ್ರಾಮಿಕದ ಬಳಿಕ ಚಿನ್ನಕ್ಕೆ ಬೇಡಿಕೆ ಹೆಚ್ಚಿದ ಪರಿಣಾಮ ಚಿನ್ನದ ಆಮದು ಕೂಡ ಹೆಚ್ಚಿತು. ಹೀಗಾಗಿ ಹೆಚ್ಚುತ್ತಿರುವ ಚಿನ್ನದ ಆಮದಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಚಿನ್ನವನ್ನು ದುಬಾರಿಯಾಗಿಸಿದೆ.

ಭಾರತವು ಹೆಚ್ಚಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದು ರೂಪಾಯಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ರೂಪಾಯಿ ಪ್ರತಿ ದಿನ ಸಾರ್ವಕಾಲಿಕ ಕುಸಿತ ಕಾಣುತ್ತಿದೆ. ಈ ನಿಟ್ಟಿನ್ಲಲಿ ಸರ್ಕಾರವು ಆಮದು, ರಫ್ತು ಸರಿದೂಗಿಸಲು ಈ ಕ್ರಮವನ್ನು ಕೈಗೊಂಡಿದೆ. ಆದರೆ ಸರ್ಕಾರದ ಈ ಕ್ರಮದಿಂದಾಗಿ ದೇಶದಲ್ಲಿ ಚಿನ್ನದ ಬೆಲೆಯು ಏರಿಕೆಯಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ಇಂದು ಜುಲೈ 2 ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹5,220 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹5,225 ರೂಪಾಯಿ ನಿಗದಿಯಾಗಿದೆ.ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹47,900 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹52,250 ರೂಪಾಯಿ ದಾಖಲಾಗಿದೆ.