ಆಹಾರ ಪ್ರಿಯರಿಗೆ ಬ್ಯಾಡ್‌ ನ್ಯೂಸ್:‌ ಜೇಬಲ್ಲಿ ಕಾಸು ಹೆಚ್ಚಿದ್ದರೆ ಮಾತ್ರ ಹೋಟೆಲ್‌ ಗೆ ಹೋಗಿ..

By Infoflick Correspondent

Updated:Wednesday, April 6, 2022, 13:26[IST]

ಆಹಾರ ಪ್ರಿಯರಿಗೆ ಬ್ಯಾಡ್‌ ನ್ಯೂಸ್:‌ ಜೇಬಲ್ಲಿ ಕಾಸು ಹೆಚ್ಚಿದ್ದರೆ ಮಾತ್ರ ಹೋಟೆಲ್‌ ಗೆ ಹೋಗಿ..

ಇಡೀ ಜಗತ್ತಿಗೆ ಕೊರೊನಾ ವಕ್ಕರಿಸಿದ್ದೇ ಬಂತು. ಈಗ ಏನನ್ನ ಖರೀದಿಸಬೇಕೆಂದರೂ ದುಬಾರಿಯಾಗಿ ಬಿಟ್ಟಿದೆ. ಪೆಟ್ರೋಲ್‌ ಬೆಲ್ಯಲ್ಲಿ ಮೊದಲು ಏರಿಕೆ ಮಾಡಲಾಯ್ತು. ನಂತರ ಅಡುಗೆ ಅನಿಲ, ಹಣ್ಣು-ತರಕಾರಿ ಹೀಗೆ ಪ್ರತಿಯೊಂದರ ಬೆಲೆಯೂ ಈಗ ದುಪ್ಪಟ್ಟಾಗಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಗ್ರಾಹಕರು ಖರ್ಚು ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿರುವಾಗಲೇ ಇದೀಗ ಹೋಟೆಲ್‌ ಗಳಲ್ಲಿನ ತಿಂಡಿ ತಿನಿಸುಗಳ ಮೇಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. 

ತರಕಾರಿ, ಹಣ್ಣು, ಹೂವಿನ ಬೆಲೆ ಗಗನಕ್ಕೇರಿವೆ. ಗ್ರಾಹಕರ ಕೈಗೆಟುಕದಷ್ಟು ಎತ್ತರಕ್ಕೆ ಬೆಲೆ ಏರಿದೆ. ಪೆಟ್ರೋಲ್ ಬೆಲೆಗಿಂತಲೂ ತರಕಾರಿ ಬೆಲೆ ಸೆಂಚುರಿ ಭಾರಿಸಿದೆ. ವಿದ್ಯುತ್, ಅಡುಗೆ ಅನಿಲ, ಅಡುಗೆ ಎಣ್ಣೆ ಹಾಗೂ ಪೆಟ್ರೋಲ್ ದರ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಈಗ ಹೋಟೆಲ್ ತಿಂಡಿ, ತಿನಿಸುಗಳ ದರವನ್ನೂ ಹೆಚ್ಚಿಸಲಾಗಿದೆ. ನಗರದ ಹೋಟೆಲ್ ಗಳು ತಿನಿಸುಗಳ ಮೇಲಿನ ಬೆಲೆಯನ್ನು ಕನಿಷ್ಟ ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಗ್ರಾಹಕರು ಕಂಗಲಾಗಿದ್ದಾರೆ. ಹೀಗೆ ಎಲ್ಲದರ ಬೆಲೆ ಏರಿಕೆಯಾಗುತ್ತಿದ್ದರೆ, ಬರುವ ಸಂಬಳದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ. 

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆಯನ್ನು ನಿನ್ನೆ ನಡೆಸಲಾಗಿದ್ದು, ಆಹಾರ ಪದಾರ್ಥಗಳ ಬೆಲೆ ಶೇ.10ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಮುಂದಿನ ಒಂದು ವಾರದೊಳಗೆ ಹೋಟೆಲ್‌ ಗಳು ಆಹಾರ ಪದಾರ್ಥಗಳ ದರ ಏರಿಕೆ ಮಾಡಲಿವೆ. ಈ ಮೂಲಕ ಕಾಫಿ-ಟೀ, ತಿಂಡಿ, ಊಟದ ಮೇಲಿನ ದರವನ್ನು ಏರಿಸಲಾಗುತ್ತದೆ. ಕಾಫಿ-ಟೀ ಬೆಲೆ 2 ರೂ. ಹೆಚ್ಚಿಸಲಾಗಿದ್ದು, ತಿಂಡಿಗಳಿಗೆ 5 ರೂ. ಹೆಚ್ಚಳ ಮಾಡಲಾಗಿದೆ. ಇನ್ನು ಊಟದ ಬೆಲೆಯಲ್ಲೂ 10 ರಿಂದ 15ರೂ. ಏರಿಸಬಹುದು ಎನ್ನಲಾಗಿದೆ.