ಕೊರೊನಾ ಭವಿಷ್ಯ ನುಡಿದಿದ್ದ ಬಾಲ ಗುರೂಜಿ ಅಭಿಗ್ಯ ಈಗ 2022 ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ ?
Updated:Saturday, March 12, 2022, 14:14[IST]

ಕೊರೊನಾ (Carona) ಬಗ್ಗೆ ಎರಡು- ಮೂರು ತಿಂಗಳ ಮುಂಚೆಯೇ ಬಾಲ ಗುರೂಜಿ ಅಭಿಗ್ಯ ಆನಂದ್ ಭವಿಷ್ಯ ನುಡಿದಿದ್ದರು. ಈತನ ಭವಿಷ್ಯವಾಣಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 2019 ರ ನವೆಂಬರ್ ನಿಂದ ಚೀನಾದಲ್ಲಿ ಆರಂಭವಾದ ಕೊರೊನಾ ಕಾಟ ಇಡೀ ಜಗತ್ತನ್ನೇ ಪೀಡಿಸಿತ್ತು. ಈಗ ವೈರಸ್ ನ ಹಾವಳಿ ತಗ್ಗಿದ್ದು, ಅದರಿಂದ ಉಂಟಾದ ಸಮಸ್ಯೆಗಳು ಸಾಕಷ್ಟಿವೆ.
ಕೋವಿಡ್ ಎಂಬ ಕಣ್ಣಿಗೆ ಕಾಣದ ವೈರಸ್ ಬಗ್ಗೆ ಅಭಿಗ್ಯ ಆನಂದ್ (Abhigya Anand) ಎಂಬ ಮೈಸೂರು ಮೂಲದ ಬಾಲಕ ಸೋಂಕು ಬರುವ ಮುನ್ನವೇ ಭವಿಷ್ಯ ಹೇಳಿದ್ದ. ಹಲವಾರು ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಈ ಬಾಲಕ 2019ರ ಆಗಸ್ಟ್ ನಲ್ಲಿ ಜಗತ್ತಿಗೇ ಆಪತ್ತು ಎದುರಾಗುತ್ತದೆ. ವಿಶ್ವದ ದೇಶಗಳೆಲ್ಲವೂ ದೊಡ್ಡ ಕಂಟಕವನ್ನು ಎದುರಿಸಲಿವೆ ಎಂದು ಭವಿಷ್ಯ ನುಡಿದಿದ್ದ. ಅಲ್ಲದೇ, ಕಳೆದ ವರ್ಷವಷ್ಟೇ ಭಾರತದ ಜನರು ಮೇ29 ರ ತನಕ ಆಹಾರಕ್ಕಾಗಿ ಬಹಳ ಕಷ್ಟಪಡಬೇಕಾಗುತ್ತದೆ. ಸರ್ಕಾರ ಎಷ್ಟೇ ಸವಲತ್ತುಗಳನ್ನ ಕಲ್ಪಿಸಿಕೊಟ್ಟರು ಕೂಡ ಬಡವರಿಗೆ ಆಹಾರವನ್ನ ಕೊಡುವಲ್ಲಿ ಸರ್ಕಾರ ವಿಫಲವಾಗುತ್ತದೆ ಎಂದು ಮತ್ತೆ ಭವಿಷ್ಯವನ್ನ ನುಡಿದಿದ್ದ.
ಅಲ್ಲದೇ, ಮೇ 29 ರ ನಂತರ ಎಲ್ಲವೂ ಸರಿ ಹೋಗುತ್ತದೆ. ವೈರಸ್ ಹರಡುವಿಕೆ ಕಡಿಮೆಯಾಗಿ ಜನರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದು ಭವಿಷ್ಯ ನುಡಿದಿದ್ದ. ಮೇ 29ಕ್ಕೆ ಭಾರತ ಸಂಪೂರ್ಣ ಜನರ ವ್ಯವಹಾರ ಸರಿ ಹೋಗಲಿದೆ ಎಂದು ಹೇಳಿದ್ದ. ಅದರಂತೆ ಕಳೆದ ವರ್ಷ ಮೇ ಆದ ಮೇಲೆ ಕೊರೊನಾ ಆರ್ಭಟ ಕೊಂಚ ಕಡಿಮೆಯಾಗಿತ್ತು. ಈ ಮೂರನೇ ಅಲೆ ಬಂದರೂ ಸದ್ದಿಲ್ಲದಂತಾಗಿದೆ. ಇದೀಗ ಅಭಿಗ್ಯ ಮತ್ತೆ ಭವಿಷ್ಯ ನುಡಿದಿದ್ದು. ಕೊರೊನಾ ಅಂತ್ಯ ಯಾವಾಗ ಎಂದು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಜೂನ್ ಜುಲೈ ತಿಂಗಳಷ್ಟರಲ್ಲಿ ಕೊರೊನಾ ಸಂಪೂರ್ಣ ಅಂತ್ಯ ಕಾಣಲಿದೆ. ಅದಾನಂತರ ನಿರಾಳವಾಗಿರಬಹುದು. ಆದರೆ, ಈಗ ಕಾಳಸರ್ಪ ಯುಗ ಆಗಿರುವುದರಿಂದ ಇನ್ನೂ ಒಂದು ವರ್ಷದ ಕಾಲ ಈ ವೈರಸ್ ನಿಂದ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಗ್ಯ ಭವಿಷ್ಯ ನುಡಿದಿದ್ದಾನೆ.