ಮಳೆಗೆ ತತ್ತರಿಸಿದ ರಾಜಧಾನಿ: ಇನ್ನೂ 3-4 ದಿನ ಎಲ್ಲೂ ಹೋಗ್ಬೇಡಿ..ಎಚ್ಚರ..!!

By Infoflick Correspondent

Updated:Wednesday, May 18, 2022, 20:56[IST]

ಮಳೆಗೆ ತತ್ತರಿಸಿದ ರಾಜಧಾನಿ: ಇನ್ನೂ 3-4 ದಿನ ಎಲ್ಲೂ ಹೋಗ್ಬೇಡಿ..ಎಚ್ಚರ..!!

ಬೆಂಗಳೂರಿನಲ್ಲಿ ಅದಾಗಲೇ ಮಳೆ ಶುರುವಾಗಿದೆ. ಮುಂಗಾರಿಗೂ ಮುನ್ನವೇ ವರುಣಾರ್ಭಟ ಜೋರಾಗಿದೆ. ನಿನ್ನೆ ಮಧ್ಯಾಹ್ನದಿಂದಲೇ ಸುರಿದ ಮಳೆ ಇಂದು ಬೆನಗ್ಗೆ ಬಿಡುವುಕೊಟ್ಟಿತ್ತು. ರಾತ್ರಿಯೆಲ್ಲಾ ಅಬ್ಬರಿಸಿದ ಮಳೆಗೆ ಜನರು ಅಕ್ಷರಶಃ ನಲುಗಿ ಹೋದರು. ನಗರದ ರಸ್ತೆಗಳೆಲ್ಲವೂ ಹೊಳೆಯ ರೂಪ ತಾಳಿದ್ದವು. ಮಳೆ ನೀರಿನ ರಭಸಕ್ಕೆ ವಾಹನಗಳು ಕೊಚ್ಚಿ ಹೋದವು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 

ಇಂದೂ ಕೂಡ ಬೆಳಗ್ಗಿನಿಂದ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಸಂಜೆ ಜೋರಾಗಿದೆ. ಮೋಡ ಆವರಿಸಿಕೊಂಡ ಗಂಟೆಯೊಳಗೆ ಭಾರೀ ಮಳೆ ಸುರಿದಿದೆ. ಸುಮಾರು ಅರ್ಧ ಗಂಟೆ ಸುರಿದ ಮಳೆ ಈಗ ಸ್ವಲ್ಪ ಬ್ರೇಕ್ ಕೊಟ್ಟಿದೆ. ಇನ್ನು ರಾತ್ರಿ ಮಳೆ ಬರುತ್ತದೆ. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರ ನಗರ, ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. 

ಮಳೆ ರಾಯನ ಅಬ್ಬರಕ್ಕೆ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ಮನೆ ಸೇರಬೇಕೆಂದುಕೊಂಡಿದ್ದ ಜನ ಟ್ರಾಫಿಕ್ ಹಾಗೂ ಮಳೆರಾಯನ ಕಾಟಕ್ಕೆ ಸಿಲುಕಿದ್ದಾರೆ. ಬೈಕ್ ಸವಾರರು ಅಲ್ಲಲ್ಲಿ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದು, ಪಾದಚಾರಿಗಳು, ಬಸ್ ಸ್ಟಾಪ್, ಅಂಗಡಿ, ಹೋಟೇಲ್ ಗಳ ಮೊರೆ ಹೋಗಿದ್ದಾರೆ. ಮಳೆಯಾರ್ಭಟದಿಂದ ಶಿವಾಜಿನಗರ ಸೇರಿದಂತೆ ಕೆಲವೆಡೆ ಕರೆಂಟ್ ಕಟ್ ಆಗಿದೆ.  

ಇನ್ನು ಹಲವೆಡೆ ಮಳೆಗೆ ಮರಗಳು ಧರೆಗುರುಳಿ ಬಿದ್ದಿವೆ. ವಿದ್ಯುತ್‌ ಕಂಬಗಳು ಬಿದ್ದಿದ್ದು, , ಕರೆಂಟ್ ಕಟ್ ಆಗಿದೆ. ಇನ್ನೂ ಮೂರು ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎೆದು ಹವಾಮಾನ ಇಲಾಖೆ ತಿಳಿಸಿದೆ. ಇದೇ ರೀತಿ ಮಳೆಯಾಗುತ್ತಿದ್ದರೆ, ಬೆಂಗಳೂರಿನ ತಗ್ಗು ಪ್ರದೇಶಗಳು ಮುಳುಗುವುದರಲ್ಲಿ ಅನುಮಾನವಿಲ್ಲ.