ಕರಗ ಉತ್ಸವದಲ್ಲಿ ನಡೀತು ನಡೆಯಬಾರದ್ದು, ಸ್ಟೇಜ್ ಮೇಲೆ ಬೆಡ್ ರೂಮ್ ರೊಮ್ಯಾನ್ಸ್ ಮಾಡಿದ ತಾತ.. ಥೂ…

By Infoflick Correspondent

Updated:Thursday, April 7, 2022, 15:05[IST]

ಕರಗ ಉತ್ಸವದಲ್ಲಿ ನಡೀತು ನಡೆಯಬಾರದ್ದು, ಸ್ಟೇಜ್ ಮೇಲೆ ಬೆಡ್ ರೂಮ್ ರೊಮ್ಯಾನ್ಸ್ ಮಾಡಿದ ತಾತ.. ಥೂ…

 

ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿ ಎಲ್ಲಾ ಹಬ್ಬ, ಉತ್ಸವಗಳಿಗೆ ಬ್ರೇಕ್ ಹಾಕಿತ್ತು. ಆದರೆ ಈ ವರ್ಷ ರಾಜ್ಯಾದ್ಯಂತ ಉತ್ಸವಗಳು ನಡೆಯುತ್ತಿವೆ. ಜನರು ಸಡಗರ ಸಂಭ್ರಮದಿಂದ ಎಲ್ಲಾ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇದು ಜಾತ್ರೆ ನಡೆಯುವ ಸಮಯ. ಈ ಜಾತ್ರೆ, ಉತ್ಸವಗಳಿರುವಾಗ ಆರ್ಕೆಸ್ಟ್ರಾ ನಡೆಸುವುದು ಸಾಮಾನ್ಯ. ಇಲ್ಲೊಂದು ಕರಗ ಉತ್ಸವದಲ್ಲಿ ನಡೆದ ಆರ್ಕೆಸ್ಟ್ರಾದಲ್ಲಿ ಅಚಾತುರ್ಯ ಒಂದು ನಡೆದು ಬಿಟ್ಟಿದೆ. 

ಹಣ್ಣು ಹಣ್ಣು ಮುದುಕ 20 ವರ್ಷದ ಹುಡುಗಿಯರೊಂದಿಗೆ ಆರ್ಕೆಸ್ಟ್ರಾದಲ್ಲಿ ಬೆಡ್ ರೂಮ್ ನ ರೊಮ್ಯಾನ್ಸ್ ಮಾಡಿದ್ದಾರೆ. ಇದು ಪಡ್ಡೆ ಹುಡುಗರನ್ನ ರೋಮಾಂಚನ ಗೊಳಿಸಿದ್ರೂ, ದೈವ ಭಕ್ತರ ಕಣ್ಣು ಕೆಂಪಗಾಗಿಸಿದೆ. ಸಾವಿರಾರು ಜನ ನೆರೆದಿದ್ದರೂ ಲೆಕ್ಕಿಸದ ತಾತ ಮಾಡಿರುವ ರೊಮ್ಯಾನ್ಸ್ ಗೆ ವಿರೋಧ ವ್ಯಕ್ತವಾಗಿದೆ. ದೇಗುಲದ ಎದುರಿಗೇ ಎಲ್ಲಾ ತಿಳಿದಿರುವ ಮುದುಕಪ್ಪನೇ ಹೀಗೆ ಮಾಡಿರುವುದಕ್ಕೆ ಜನರು ಆಕ್ರೋಶಗೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ಏನು ನಡೆಯಿತು.? ಯಾವ ಊರು.? ಏನು ಜಾತ್ರೆ .? ಎಂದು ನೋಡೋಣ ಬನ್ನಿ..

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಎದುರಿಗೆ ಆರ್ಕೆಸ್ಟ್ರಾವನ್ನು ನಡೆಸಲಾಗಿತ್ತು. ಇಲ್ಲಿ ಮೂರು ವರ್ಷಗಳ ನಂತರ ಕರಗ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. 80ರ ಹರೆಯದ ತಾತನಿಗೆ ಈಗಾಗಲೇ ಕೂತರೆ ಏಳೋಕಾಗಲ್ಲ, ಎದ್ದರೆ ನಡೆದಾಡೋಕೆ ಕಷ್ಟ. ಏನು ತಿಂದರೂ ಅರಗಿಸಿಕೊಳ್ಳಲಾಗದ ಸ್ಥಿತಿ. ಹಾಗಿದ್ದರೂ ಈ ತಾತ ಹೆಂಗಳೆಯರ ಜೊತೆ ಸೇರಿ ಆರ್ಕೆಸ್ಟ್ರಾದ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಬೆಡ್ ರೂಮ್ ದೃಶ್ಯಗಳನ್ನು ಮರು ಸೃಷ್ಟಿಸಿದ್ದಲ್ಲದೇ, ಮುದುಕ ಮುತ್ತು ಕೊಟ್ಟು ಅಲ್ಲಿ ನೆರೆದಿದ್ದ ಜನರಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದಾರೆ. ಮುದುಕನ ೀ ನಡೆಯನ್ನು ಹಲವರು ವಿರೋಧಿಸಿದ್ದಾರೆ. (video credit : tv 9 kannada )