ಮನೆಯೊಂದಕ್ಕೆ ಎಂಟ್ರಿ ಕೊಟ್ಟ ಖದೀಮರು ಮಾಡಿದ್ಯೇನೂ ..! ಯಾರೇ ಆಗಲಿ ಬಾಗಿಲು ತೆರೆಯುವ ಮುನ್ನ ಈ ಸ್ಟೋರಿ ನೋಡಿ

By Infoflick Correspondent

Updated:Friday, September 23, 2022, 08:09[IST]

ಮನೆಯೊಂದಕ್ಕೆ ಎಂಟ್ರಿ ಕೊಟ್ಟ ಖದೀಮರು  ಮಾಡಿದ್ಯೇನೂ ..! ಯಾರೇ ಆಗಲಿ ಬಾಗಿಲು ತೆರೆಯುವ ಮುನ್ನ ಈ ಸ್ಟೋರಿ ನೋಡಿ

ಹೌದು, ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಹೆಚ್ಚಾಗಿ ಕಳ್ಳರು, ಖದಿಮರು ಹೆಚ್ಚಾಗುತ್ತಿದ್ದಾರೆ. ಜೊತೆಗೆ ಮಕ್ಕಳ ಕಳ್ಳರು ಕೂಡ ಬಂದಿದ್ದಾರೆ ಎಂದು ಕೆಲವು ಕಡೆ ವರದಿಯಾಗಿದೆ. ಹೀಗಿರುವಾಗ ಅಪರಿಚಿತರು ಯಾರೇ ನಿಮ್ಮ ಮನೆಯ ಸುತ್ತ ಓಡಾಟ ನಡೆಸಿದರೂ, ಅವರ ಮೇಲೆ ಪೊಲೀಸರಿಗೆ ತಕ್ಷಣವೇ ದೂರ ನೀಡಿ. ಹೌದು ಮಕ್ಕಳ ಸಂರಕ್ಷಣೆಗಾಗಿ ಈ ರೀತಿ ಮಾತುಗಳು ಕೇಳಿ ಬರುತ್ತಿವೆ. ಹೌದು ಇಂದು ಬೆಳಗ್ಗೆ ಅಮಾನುಷ ಘಟನೆಯೊಂದು ಸಹ ನಡೆದಿದ್ದು ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಎಂಬ ಊರಿನಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಕುರಿತಾದ ಮಾಹಿತಿ ದೊರೆತ ಪ್ರಕಾರ ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ 8.45 ಕ್ಕೆ ಒಂದು ಗುಂಪು ನಂಜನಗೂಡಿನ ದೇವಿರಮ್ಮನಹಳ್ಳಿಯಲ್ಲಿ ಇರುವ ಒಂದು ಮನೆಗೆ ಭೇಟಿ ನೀಡಿದೆ.

ಹೊರಗಡೆ ನಿಂತುಕೊಂಡು ಕೊರಿಯರ್ ಕೊಡುವ ನೆಪದಲ್ಲಿ ಆ ಮನೆಯ ಬೆಲ್ಲನ್ನು ಬಾರಿಸಿದ್ದಾರೆ. ನಂತರ ಮನೆ ಬಾಗಿಲ ತೆರೆಯುವಂತೆ ಸೂಚನೆ ನೀಡಿದ್ದಾರೆ. ಆಗ ಯಾರೋ ಬಿಡು  ಎಂದು ಬಾಗಿಲು ತೆರೆದ ಯುವತಿಗೆ ಇದ್ದಕ್ಕಿದ್ದಂತೆ ದೊಡ್ಡ ಶಾಕ್ ಎದುರಾಗಿದೆ. ಹೌದು ಆಕೆ ಪೇಚಿಗೆ ಸಿಲುಕಿದ್ದಾರೆ. ಹೌದು, ಯುವತಿಯನ್ನು ನೋಡುತ್ತಿದ್ದಂತೆ ಆ ಗುಂಪೊಂದು ಅವರನ್ನು ಹಿಡಿದುಕೊಂಡು, ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಒಂದನ್ನ ಹಾಕಿ ಒಂದು ರೂಮಿನಲ್ಲಿ ಬಿಟ್ಟಿದ್ದಾರೆ.  ನಂತರ ಬೀರು ಇರುವ ಕೋಣೆ ಹುಡುಕಿ ಅವರ ಮನೆಯಲ್ಲಿ ಇದ್ದ ಎಲ್ಲಾ ಬಂಗಾರ ಚಿನ್ನದ ಒಡವೆಗಳನ್ನ ಹಾಗೂ ದುಡ್ಡನ್ನು ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆದಿರುವುದು ಇಂದು ಬೆಳಗ್ಗೆ ಅಕ್ಕಪಕ್ಕ ಮನೆಗಳು ಇದ್ದರೂ ಈ ರೀತಿ ಕಳ್ಳತನದ ಘಟನೆ ನಡೆದದ್ದನ್ನ ನೋಡಿ ಅಕ್ಕಪಕ್ಕದ ಮನೆಯವರು ಶಾಕ್ ಆಗಿದ್ದಾರಂತೆ.  

ಹೌದು ಈ ಘಟನೆ ನಡೆದ ಬಳಿಕ ಮಹಿಳೆ ಪತಿಗೆ ನಡೆದ ವಿಚಾರವನ್ನು ತಿಳಿಸಿ, ಆನಂತರ ಇಬ್ಬರು ಸೇರಿ ಪೊಲೀಸ್ ಠಾಣೆಗೆ ದೂರು ನೀಡಿ ಬಂದಿದ್ದಾರೆ. ಹೌದು ನೀವು ಕೂಡ ನಿಮ್ಮ ಅಕ್ಕಪಕ್ಕದಲ್ಲಿ ಯಾರೇ ಅನುಮಾನಪಾದ ವ್ಯಕ್ತಿಗಳು ಕಂಡು ಬಂದರೆ ಅಥವಾ ಅಪರಿಚಿತರು ಯಾರಾದರೂ ನಿಮ್ಮ ಮನೆಯ ಬಾಗಿಲನ್ನು ತೆರೆಯುವಂತೆ ಬಾಗಿಲು ಲ್ ಬೆಲ್ ತಟ್ಟಿದರೆ ತೆರೆಯಬೇಡಿ, ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅಪರಿಚಿತ ವ್ಯಕ್ತಿ ಬಂದರೆ ಬಾಗಿಲನ್ನು ತೆರೆಯಬೇಡಿ ಎಂದು ಮುನ್ಸೂಚನೆ ನೀಡಿ, ಇಲ್ಲವಾದಲ್ಲಿ ಈ ರೀತಿ ಕಷ್ಟ ಪಟ್ಟು ದುಡಿದ ಹಣ ಬಂಗಾರ ಖದೀಮರ ಪಾಲಾಗುತ್ತದೆ. ಈ ಮಾಹಿತಿಯ ಶೇರ್ ಮಾಡಿ, ದೂರು ದಾಖಲಿಸಿಕೊಂಡು ಪೊಲೀಸರು ಮನೆಗೆ ನುಗ್ಗಿ ಕಳ್ಳತನ ಮಾಡಿದ ಆ ಖದೀಮರ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.