ಧೈರ್ಯ ಬಂದಿದೆಯೆಂದು ದೂರು ನೀಡಲು ಮುಂದೆ ಬಂದ ಸಿಡಿ ಲೇಡಿ..! ವಿಡಿಯೋದಲ್ಲಿ ಹೇಳಿದ್ದೇನು.?

Updated: Friday, March 26, 2021, 12:46 [IST]

ಮಾಜಿ ಸಚಿವ ಆಗಿರುವ ರಮೇಶ್​ ಜಾರಕಿಹೊಳಿ ತನಗೆ ಕೆಲಸ ಕೊಡಿಸುವುದಾಗಿ ಹೇಳಿ, ನಂಬಿಸಿ ವಂಚನೆಯನ್ನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಸಿಡಿ ಯುವತಿ ಇದೀಗ ಮತ್ತೊಂದು ವಿಡಿಯೋ ಮೂಲಕ ಕೆಲ ಹೇಳಿಕೆ ಕೊಟ್ಟು, ತಮ್ಮ 3 ನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ... ''ನನಗೆ 24 ದಿನಗಳಿಂದ ಜೀವಭಯ ಇತ್ತು.   

ಈಗ ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಎಲ್ಲರ ಬೆಂಬಲವಿದೆ ಅಂತ ಧೈರ್ಯ ಬಂದಿದೆ. ಹೀಗಾಗಿ ನಾನು ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲಿದ್ದೇನೆ'' ಎಂದು ಸಿಡಿ ಯುವತಿ ಹೇಳಿದ್ದಾರೆ ಎಂದು ಮಾಧ್ಯಮ ಒಂದರ ಮೂಲಕ ಕೇಳಿ ಬಂದಿದೆ. ವಕೀಲ ಜಗದೀಶ್​ ಅವರ ಮೂಲಕ ಇಂದು ಮಧ್ಯಾಹ್ನ 2 ಗಂಟೆ ಮೂವತ್ತು ನಿಮಿಷಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ... "ಕರ್ನಾಟಕ ಜನತೆ ಹಾಗೂ ತಂದೆ-ತಾಯಿಯ ಆಶಿರ್ವಾದದಿಂದ, ಎಲ್ಲಾ ಪಕ್ಷದ ನಾಯಕರಿಂದ ಹಾಗೂ ಎಲ್ಲಾ ಸಂಘಟನೆಯವರು ಬೆಂಬಲ ನೀಡಿರುವುದರಿಂದ ನನಗೆ ಧೈರ್ಯ ಬಂದಿದೆ.   

ಕಳೆದ 24 ದಿನಗಳಿಂದ ನಾನು ಜೀವಭಯದಲ್ಲಿದ್ದೆ, ಭಯಭಯದಿಂದ ಬದುಕುತ್ತಿದ್ದೆ. ನನಗೆ ಇವತ್ತು ಎಲ್ಲೋ ಒಂದು ಧೈರ್ಯ ಬಂದಿದೆ. ನನ್ನ ಎಲ್ಲಾ ಬೆಂಲಿಸುತ್ತೀರಾ ಎನ್ನುವ ಒಂದೇ ಒಂದು ಕಾರಣಕ್ಕೆ, ನಾನು ಇವತ್ತು ನನ್ನ ಲಾಯರ್​ ಜಗದೀಶ್​ ಮೂಲಕ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ" ಎಂದು ಸಂತ್ರಸ್ತೆ ಹೇಳಿದ್ದಾರಂತೆ...