ಚಂದ್ರಶೇಖರ ಗುರೂಜಿಯವರ ಮರಣೋತ್ತರ ಪರೀಕ್ಷೆಯಲ್ಲಿ ಹಲವಾರು ವಿಷಯಗಳು ಬಹಿರಂಗ

By Infoflick Correspondent

Updated:Wednesday, July 6, 2022, 22:39[IST]

ಚಂದ್ರಶೇಖರ ಗುರೂಜಿಯವರ ಮರಣೋತ್ತರ ಪರೀಕ್ಷೆಯಲ್ಲಿ ಹಲವಾರು ವಿಷಯಗಳು ಬಹಿರಂಗ

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರ ಹತ್ಯೆಯಾಗಿದ್ದು,ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುರೂಜಿಯವರ ಮರಣೋತ್ತರ ಪರೀಕ್ಷೆಯಲ್ಲಿ ಹಲವಾರು ವಿಷಯಗಳು ಬಹಿರಂಗವಾಗಿದೆ. 

ಚಂದ್ರಶೇಖರ ಗುರೂಜಿ ಅವರಿಗೆ ಹಂತಕರು ಕುತ್ತಿಗೆ ಬಳಿ ಎರಡು ಬಾರಿ 12 ಇಂಚಿನಷ್ಟು ಕೊಯ್ದಿದ್ದು, ಚಾಕು 2-3 ಇಂಚಿನಷ್ಟು ಒಳಗೆ ಹೋಗಿ ಗಾಯವುಂಟಾಗಿದ್ದು, ಇರಿದ ಜಾಗದಲ್ಲೇ 2-3 ಬಾರಿ ಇರಿದಿದ್ದಾರೆ.ವಿಧಿ ವಿಜ್ಞಾನ ವಿಭಾಗದ ಡಾ. ಸುನಿಲ ಬಿರಾದಾರ ಮರಣೋತ್ತರ ಪರೀಕ್ಷೆ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ್ದು, ಒಟ್ಟು 42 ಕಡೆಗಳಲ್ಲಿ ಇರಿದ ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. 

ಶವ ಪರೀಕ್ಷೆಗೂ ಮುನ್ನ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ತೆರಳಿದರು. ವಿದ್ಯಾನಗರ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಪೋಸ್ಟ್ ಮಾರ್ಟಮ್ ಪ್ರಕ್ರಿಯೆಯ ಮೇಲುಸ್ತುವಾರಿ‌ ವಹಿಸಿದ್ದರು.   

ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳಾ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದರು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂದ ಪುತ್ರಿ ಸ್ವಾತಿ & ಪತ್ನಿ ಅಂಕಿತಾ ಕಣ್ಣೀರಿಟ್ಟರು. ಇದೇ ವೇಳೆ ಗುರೂಜಿ ಸಹೋದರಿ ಶಾಂತ ಅಸ್ವಸ್ಥರಾದರು.ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ.