ಬೆಂಗಳೂರುನಲ್ಲಿ ಕೊರೋನಾ ಮಹಾಸ್ಫೋಟ !!

Updated: Friday, April 2, 2021, 20:25 [IST]

ನಿಮಗೆಲ್ಲ ತಿಳಿದಿರುವ ಹಾಗೆ ಇಡೀ ಜಗತ್ತಲ್ಲಿಕೊರೋನಾ ಎರಡನೆಯ ಅಲೆ ಶುರುವಾಗಿದೆ. ಮತ್ತು ನಮ್ಮ ಭಾರತದಲ್ಲಿ ಹೆಚ್ಚಿದೆ. ಆದರೆ ಸ್ವಲ್ಪ ದಿನಗಳ ಹಿಂದೆ ಕೊರೋನ ಸಕ್ರಿಯ ಗಳು ಕಮ್ಮಿ ಆಗಿತ್ತು ಆದರೆ ಈಗ ಮತ್ತೆ ಸ್ಫೋಟಗೊಂಡಿದೆ. 

ಇಂದು ಬರೋಬರಿ ಬೆಂಗಳೂರಿನಲ್ಲಿ 3,500 ಕೇಸುದಾಖಲಾಗಿದೆ. ಇದು ಆತಂಕ ಪಡುವ ವಿಷಯ ಏಕೆಂದರೆ ಈ ಸಂಖ್ಯೆಗಳು ಹೆಚ್ಚಾಗಲು ಜಾಸ್ತಿ ದಿನಗಳು ಬೇಕಾಗಿಲ್ಲ ಮತ್ತು ಇಡೀ ರಾಜ್ಯದಲ್ಲಿ ಇಂದು 4,995  ಕೊರೋನಾ  ಪಾಸಿಟಿವ್ ವರದಿಯಾಗಿದೆ.  ರಾಜ್ಯದಲ್ಲಿ ಕೊರೊನಾ ಆರ್ಭಟ ತೀವ್ರಗೊಳ್ಳುತ್ತಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 4991 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 26 ಜನರು ಕೊರೊನಾದಿಂದ ಅಸುನೀಗಿದ್ದಾರೆ.