ಇಂದು ಕರ್ನಾಟಕದಲ್ಲಿ ಕೊರೋನಾ ಮಹಾಸ್ಪೋಟ ಜನರು ಎಚ್ಚೆತ್ತುಕೊಳ್ಳಬೇಕು!!

Updated: Wednesday, March 31, 2021, 19:58 [IST]

ನಿಮಗೆಲ್ಲ ತಿಳಿದಿರುವ ಹಾಗೆ ಇಡೀ ಜಗತ್ತಲ್ಲಿಕೊರೋನಾ ಎರಡನೆಯ ಅಲೆ ಶುರುವಾಗಿದೆ. ಮತ್ತು ನಮ್ಮ ಭಾರತದಲ್ಲಿ ಹೆಚ್ಚಿದೆ. ಆದರೆ ಸ್ವಲ್ಪ ದಿನಗಳ ಹಿಂದೆ ಕೊರೋನ ಸಕ್ರಿಯ ಗಳು ಕಮ್ಮಿ ಆಗಿತ್ತು ಆದರೆ ಈಗ ಮತ್ತೆ ಸ್ಫೋಟಗೊಂಡಿದೆ.

ಇಂದು ಬರೋಬರಿ ಬೆಂಗಳೂರಿನಲ್ಲಿ 2900 ಕೇಸುದಾಖಲಾಗಿದೆ. ಇದು ಆತಂಕ ಪಡುವ ವಿಷಯ ಏಕೆಂದರೆ ಈ ಸಂಖ್ಯೆಗಳು ಹೆಚ್ಚಾಗಲು ಜಾಸ್ತಿ ದಿನಗಳು ಬೇಕಾಗಿಲ್ಲ ಮತ್ತು ಇಡೀ ರಾಜ್ಯದಲ್ಲಿ ಇಂದು 4,225  ಕೊರೋನಾ  ಪಾಸಿಟಿವ್ ವರದಿಯಾಗಿದೆ.  ರಾಜ್ಯದಲ್ಲಿ ಕೊರೊನಾ ಆರ್ಭಟ ತೀವ್ರಗೊಳ್ಳುತ್ತಿದ್ದು, ಬುಧವಾರ ಒಂದೇ ದಿನ ಬರೋಬ್ಬರಿ 4,225 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 26 ಜನರು ಕೊರೊನಾದಿಂದ ಅಸುನೀಗಿದ್ದಾರೆ.

ಈಗಾಗಲೆ ಬಿಬಿಎಂಪಿ ಯವರು ಹೇಳಿದಾಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ವ್ಯಾಕ್ಸಿನೇಷನ್ ಹಂಚಿಕೆಯನ್ನು ಜಾಸ್ತಿ ಮಾಡಬೇಕು. ಇಲ್ಲ ಅಂದರೆ ನಮ್ಮ ಕರ್ನಾಟಕಕ್ಕೆ ಇದು ಹೆಮ್ಮಾರಿಯಾಗೆ  ಕಾಡುವುದು ಕಟ್ಟಿಟ್ಟ ಬುತ್ತಿ.   

ಇದರ ಮಧ್ಯೆ ಬಿಬಿಎಂಪಿ ಮಂಜುನಾಥ ವರನ್ನು ಬಿಬಿಎಂಪಿ ಅಧ್ಯಕ್ಷರಿಂದ ಕೆಳಗಿಳಿಸಿದ್ದಾರೆ. ಅದರ ಸೂಕ್ತ ಕಾರಣ ಇನ್ನು ಕೊಟ್ಟಿಲ್ಲ. ಏಕೆಂದರೆ ಅವರು ಟಫ್ ರೂಲ್ಸ್ ಅನ್ನು ಜಾರಿಮಾಡಲು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು ಅದರ ಕಾರಣದಿಂದಲೇ ವರ್ಗಾವಣೆ ಮಾಡಲು ಸರ್ಕಾರದ ಈ ಕ್ರಮವನ್ನು ತಗೊಂಡಿದ್ಯಾ ಗೊತ್ತಿಲ್ಲ.