ಮತ್ತೆ ಶುರುವಾಗಲಿದೆ ಕೊರೊನಾ ಕಾಟ: ಬಂದೇ ಬಿಡ್ತು ನಾಲ್ಕನೇ ಅಲೆ

By Infoflick Correspondent

Updated:Thursday, April 21, 2022, 17:18[IST]

ಮತ್ತೆ ಶುರುವಾಗಲಿದೆ ಕೊರೊನಾ ಕಾಟ: ಬಂದೇ ಬಿಡ್ತು ನಾಲ್ಕನೇ ಅಲೆ

ಕೊರೊನಾ ಓಡಿ ಹೋಯ್ತು. ಇನ್ನೇನು ಸಮಸ್ಯೆ ಇಲ್ಲ ಅಂತ ಜನ ಅಂದುಕೊಂಡಿದ್ದಾರೆ. ಆದರೆ ಕೊರೊನಾ ವೈರಸ್ ಪಕ್ಕದಲ್ಲೇ ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಕೊರೋನಾ ಮಹಾಮಾರಿ ಕಳೆದ ಎರಡು ವರ್ಷಗಳ ಕಾಲ ಇಡೀ ಜಗತ್ತಿನ ಓಟಕ್ಕೆ ಬ್ರೇಕ್ ಹಾಕಿತ್ತು. ಜನರನ್ನು ಪರದಾಡಿಸಿ, ನರಳಾಡಿಸಿರುವ ಕೊರೊನಾ ವೈರಸ್ ಈಗ ತಣ್ಣಗಾಗುತ್ತಿದೆ ಉಸ್ಸಪ್ಪ ಎಂದು ಜನ ಈಗ ತಮ್ಮ ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಜಗತ್ತಿಗೆ ಮತ್ತೊಂದು ಆಪತ್ತು ಕಾದಿದೆ ಎಂದರೆ ಸುಳ್ಳಾಗಲಾರದು. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಯಾಕೆಂದರೆ ಈಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕಳೆದ ಎಂಟು ದಿನಗಳಲ್ಲಿ ಡಬಲ್ ಆಗಿದೆ. ನಿತ್ಯ 2000 ಕೊರೊನಾ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತಿವೆ. ಕೊರೊನಾ ಮೂರನೇ ಅಲೆ ಅಷ್ಟೇ ಎಂದುಕೊಮಡವರು ನಾಲ್ಕನೇ ಅಲೆಗೆ ಸಜ್ಜಾಗಬೇಕಿದೆ. 

ಈಗಾಗಲೇ ನೂರಾರು ಜನರನ್ನು ಕಾಡಲು ಶುರುವಿಟ್ಟಿರುವ ಕೊರೊನಾ ಮುಂದಿನ ತಿಂಗಳು ಭಾರತವನ್ನು ತತ್ತರಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಮತ್ತೆ ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ಆರಂಭವಾಗಬಹುದು ಎನ್ನಲಾಗಿದೆ. 

ಇದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರಗಳು ಮತ್ತೆ ಮಾಸ್ಕ್ ಕಡ್ಡಾಯಗೊಳಿಸುತ್ತಿದೆ. ಇನ್ನು ಕರ್ನಾಟದಲ್ಲಿ ಪ್ರಸ್ತುತ 1,487 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 1,418 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 11,860 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಸದ್ಯ ದೇಶದಲ್ಲಿ ಪಾಸಿಟಿವಿಟಿ ದರ 0.31% ರಷ್ಟು ಏರಿಕೆಯಾಗಿದೆ. ಹೀಗಾಗಿ ಜನರು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.