ಸರಕಾರದ ಹೊಸ ಟಫ್ ರೂಲ್ಸ್ ಜಾರಿ..! ಎನಿರುತ್ತೆ ಎನಿರೋಲ್ಲ ಗೊತ್ತಾ...?

Updated: Saturday, April 3, 2021, 10:43 [IST]

ರಾಜ್ಯ ಸರ್ಕಾರ ಇಂದಿನಿಂದ ಕರೋನದ ಹಿನ್ನೆಲೆಯಲ್ಲಿ ಕೆಲವು ಕ್ರಮಗಳನ್ನು ಎಲ್ಲಾ ಜನಸಾಮಾನ್ಯರಿಗೂ ಸೇರಿ ನಿಯಮಗಳನ್ನು ಪಾಲಿಸುವಂತೆ ಕೆಲ ಟಫ್ ರೂಲ್ಸ್ ಗಳನ್ನು ಜಾರಿಮಾಡಿದೆ ಎಂದು ತಿಳಿದುಬಂದಿದೆ. ಹೌದು ಪಬ್ ಗಳಲ್ಲಿ ಜನರಿಗೆ ಕೇವಲ ಶೇಕಡಾ 50 ಪರ್ಸೆಂಟ್ ಮಾತ್ರ ಅವಕಾಶ ನೀಡಿದೆ. ಥಿಯೇಟರುಗಳಲ್ಲಿ ಸಹ ಕೇವಲ 50% ಜನರಿಗೆ ಚಿತ್ರ ವೀಕ್ಷಣೆ ಮಾಡಲು ಹೇಳಿದೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯನ್ನು ಕೂಡ ರಾಜ್ಯ ಸರ್ಕಾರ ಮಾಡಿದೆ.

ಇದೆಲ್ಲಾ ಟಫ್ ರೂಲ್ಸ್ ಗಳನ್ನು ಜಾರಿ ಮಾಡುತ್ತಿರುವ ಸರ್ಕಾರ, ಕರೋನ ವೈರಸ್ ಕೇಸುಗಳು ದಿನೇದಿನೇ ಹೆಚ್ಚುತ್ತಿರುವ ಕಾರಣಕ್ಕಾಗಿ ಜಾರಿ ಮಾಡಿದೆ ಎನ್ನಲಾಗಿದೆ. ಇದನ್ನೆಲ್ಲಾ ನೋಡಿದ ರಾಜ್ಯದ ಜನತೆಗೆ ಕೊರೋನಾ ಅಲೆಯು ಮತ್ತೆ ಎದ್ದು ಬಿಟ್ಟಿತ ಎಂಬುದಾಗಿ ಆತಂಕ ಮಾಡಿಕೊಂಡಿದ್ದಾರೆ. ಇನ್ನೂ ಕೆಲವ್ರು ಸರ್ಕಾರ ಹೇಳಿರುವ ಎಲ್ಲಾ ಕ್ರಮಗಳನ್ನು ಪಾಲಿಸುವ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಮುಖಕ್ಕೆ ಮಾಸ್ಕನ್ನು ಕಡ್ಡಾಯವಾಗಿ ಧರಿಸಿಕೊಂಡು ಓಡಾಡುತ್ತಿದ್ದಾರೆ.   

ಮಾಲ್ ಗಳಲ್ಲಿ ಹೆಚ್ಚು ಜನರು ಇರುವುದನ್ನು ಸಹ ಸರ್ಕಾರ ನಿಷೇಧಿಸಿದೆ. ಹಾಗೆ ಬಾರ್ ಗೆ ಕೇವಲ 50 ಪರ್ಸೆಂಟ್ ಅನುಮತಿ ನೀಡಿದೆ, ಜೊತೆಗೆ ಈ ಎಲ್ಲಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಸರಿಯಾದ ಕ್ರಮವನ್ನು ಅವರ ಮೇಲೆ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. ಈ ಮೇಲಿನ ಎಲ್ಲಾ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಕರೋನಾ ಮತ್ತೆ ಹಬ್ಬುತ್ತಿರುವ ಕಾರಣಕ್ಕಾಗಿ ಆದಷ್ಟು ಎಲ್ಲರೂ ಕೂಡ ಮಾಸ್ಕನ್ನು ಕಡ್ಡಾಯವಾಗಿ ಧರಿಸಿಕೊಂಡೆ ಓಡಾಡಿ ಎಂದು ಈ ಮಾಹಿತಿಯನ್ನು ಶೇರ್ ಮಾಡುತ್ತಾ ಕಮೆಂಟ್ ಮಾಡಿ, ಹಾಗೆ ಎಲ್ಲರಿಗೂ ಜಾಗೃತಿ ಮೂಡಿಸಿ ಧನ್ಯವಾದಗಳು....