Covid 19 : ಕೋವಿಡ್ ಲಸಿಕೆ ಕಡ್ಡಾಯವಲ್ಲ !! ಸುಪ್ರೀಂ ಕೋರ್ಟ್ ಏಕೆ ಈ ತೀರ್ಪು ನೀಡಿದೆ ?

By Infoflick Correspondent

Updated:Tuesday, May 3, 2022, 10:00[IST]

Covid 19 : ಕೋವಿಡ್ ಲಸಿಕೆ ಕಡ್ಡಾಯವಲ್ಲ !! ಸುಪ್ರೀಂ ಕೋರ್ಟ್ ಏಕೆ ಈ ತೀರ್ಪು ನೀಡಿದೆ ?

ಕೋವಿಡ್ ಲಸಿಕೆ ಕುರಿತಂತೆ ಸುಪ್ರೀಂ ಕೋರ್ಟ್  ಮಹತ್ವದ ತೀರ್ಪೊಂದನ್ನು ನೀಡಿದೆ. ಕೋವಿಡ್ ಲಸಿಕೆ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ, ಹಾಲಿ ಇರುವ ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಅಸಮಂಜಸವೆಂದು ಹೇಳಲಾಗುವುದಿಲ್ಲ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯ ಇದೇ ವೇಳೆ ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಒತ್ತಾಯಿಸಬಾರದು ಎಂದೂ ಹೇಳಿದೆ.   

ಸಂವಿಧಾನದ ಅಡಿಯಲ್ಲಿ ದೈಹಿಕ ಸ್ವಾಯತ್ತತೆ ಮತ್ತು ಸಮಗ್ರತೆಯನ್ನು ರಕ್ಷಿಸಲಾಗಿದ್ದು, ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಹಾಕದ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವ ಕೆಲವು ರಾಜ್ಯ ಸರ್ಕಾರಗಳು, ಸಂಸ್ಥೆಗಳು ವಿಧಿಸಿರುವ ಷರತ್ತುಗಳು ಪ್ರಮಾಣಾನುಗುಣವಾಗಿಲ್ಲ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಲ್ಲಿ ನಿರ್ಬಂಧ ಹಿಂಪಡೆಯಬೇಕು. ಯಾವುದೇ ವ್ಯಕ್ತಿಗೆ ಬಲವಂತವಾಗಿ ಲಸಿಕೆ ಹಾಕಿಸಲು ಸಾಧ್ಯವಿಲ್ಲ. ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಕೂಡ ಮಾಡಬಾರದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 

ಮಾರಕ ಕೋವಿಡ್-19 ನಾಲ್ಕನೇ ಅಲೆ ಭೀತಿ ನಡುವೆಯೇ ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಒತ್ತಾಯಿಸಬಾರದು ಮತ್ತು ಲಸಿಕೆಯ ಅಡ್ಡಪರಿಣಾಮಗಳನ್ನು ಸಾರ್ವಜನಿಕಗೊಳಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಒಳಿತಿಗಾಗಿ ಸರ್ಕಾರವು ನೀತಿಯನ್ನು ರೂಪಿಸಬಹುದು ಮತ್ತು ಕೆಲವು ಷರತ್ತುಗಳನ್ನು ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ. 

ದೈಹಿಕ ಸ್ವಾತಂತ್ರ್ಯ  ಸಾಂವಿಧಾನಿಕ ಹಕ್ಕು. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ" ಅಂತ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. "ರಾಜ್ಯ ಅಥವಾ ಕೇಂದ್ರ ಸರ್ಕಾರ, ವಿವಿಧ ಸಂಸ್ಥೆಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ" ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.