ಅಬ್ಬಾ ಒಂದೆ ದಿನಕ್ಕೆ ಇಷ್ಟು ಸಂಬಳ ಪಡೆಯುತ್ತಾರ ಪಬ್ಲಿಕ್ ಟಿವಿ ದಿವ್ಯ ಜ್ಯೋತಿ..! ಅದೇಷ್ಟು ಗೊತ್ತಾ..?

Updated: Wednesday, February 17, 2021, 11:34 [IST]

ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ಮತ್ತು ಬೇರೆ ರಾಜ್ಯದ ವಿಷಯಗಳನ್ನ ನಮ್ಮ ದೇಶದ ವಿಷಯವನ್ನ ಹಾಗೇನೇ ಹೊರದೇಶದ ವಿಷಯಗಳನ್ನು ಕ್ಷಣಾರ್ಧದಲ್ಲೇ ಎಲ್ಲರಿಗೂ ಮುಟ್ಟಿಸುವ ಕಾರ್ಯವನ್ನು ಈ ನ್ಯೂಸ್ ಚಾನೆಲ್ಗಳು ಮಾಡುತ್ತವೆ. ಅದೇ ರೀತಿಯ ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ದಿಗ್ವಿಜಯ, ಟಿವಿ9 ಹೀಗೆ ಇನ್ನಿತರ ನ್ಯೂಸ್ ಚಾನೆಲ್ ವಿಷಯಗಳನ್ನು ತಿಳಿಸುವ ಕೆಲಸ ಮಾಡುತ್ತವೆ. ಅಂತಹದೇ ಒಂದು ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ಎಲ್ಲರಿಗೂ ಈಗಾಗಲೇ ಚೆನ್ನಾಗಿ ಗೊತ್ತಿದೆ.

ಈ ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ದಿವ್ಯಜ್ಯೋತಿ ಅವರು ಕೂಡ ತುಂಬಾ ಫೇಮಸ್. ಹಾಗೇನೇ ಇವರಿಗೆ ಡಿಂಪಲ್ ದಿವ್ಯ ಎಂದು ಕೂಡ ಕರೆಯುತ್ತಾರೆ ಅಷ್ಟು ಜನಪ್ರಿಯತೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದ ಟ್ರೊಲ್ ಪೇಜ್ ಅಡ್ಮಿನ್ಗಳು ಈಕೆಯನ್ನು ತುಂಬಾ ಟ್ರೋಲ್ ಮಾಡುತ್ತ, ಜೊತೆಗೆ ದಿವ್ಯ ಜ್ಯೋತಿ ಅವರನ್ನು ಹೆಚ್ಚು ಜನಪ್ರಿಯತೆ ಹೊಂದುವಂತೆ ಮಾಡಿ ಫೇಮಸ್ ಮಾಡಿಬಿಟ್ಟಿದ್ದಾರೆ. ದಿವ್ಯಾರವರ ಮುದ್ದು ಮುಖ, ಮಾತಿನ ಶೈಲಿ ಎಲ್ಲರಿಗೂ ಇಷ್ಟವಾಗುತ್ತೆ.

ಮೊದಲಿಗೆ ದಿವ್ಯ ಜ್ಯೋತಿಯವರು ಉದಯ ಮ್ಯೂಸಿಕ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು, ಬಳಿಕ ಪಬ್ಲಿಕ್ ಮ್ಯೂಸಿಕ್ ನಲ್ಲಿ ಕೆಲಸ ಮಾಡಿದರು. ಹಾಗೇನೇ ರಂಗಣ್ಣ ಅವರು ಕೂಡ ಈ ಪಬ್ಲಿಕ್ ಟಿವಿ ಚಾನೆಲ್ ಬೆಳೆಸೋದಕ್ಕೆ ತುಂಬಾನೆ ಶ್ರಮವಹಿಸಿದ್ದಾರೆ. ಹೌದು ಈ ರಂಗಣ್ಣವರ ಜೊತೆ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ದಿವ್ಯ ಜ್ಯೋತಿ ನೇರನುಡಿ ಮತ್ತು ಕನ್ನಡ ನೀಳವಾಗಿ ಮಾತನಾಡುತ್ತಾ ಎಲ್ಲರ ಮನಗೆದ್ದಿದ್ದಾರೆ. ಹಾಗೆ ದಿವ್ಯಜ್ಯೋತಿ ಅವರು ಒಂದು ದಿನಕ್ಕೆ 4 ರಿಂದ 6 ಸಾವಿರ ಹಣವನ್ನು ಈ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡಲು ಪಡೆಯುತ್ತಿದ್ದಾರಂತೆ.

ದಿನಕ್ಕೆ 12 ಗಂಟೆ ಕೆಲಸ ಮಾಡುತ್ತಾ ಸದ್ಯ ದಿವ್ಯರವರು ಲೈಫ್ ನಲ್ಲಿ ಸೆಟಲ್ ಆಗಿದ್ದಾರಂತೆ. ಜೊತೆಗೆ ರಂಗಣ್ಣ ಮತ್ತು ಇವರ ಬಿಗ್ ಬುಲೆಟಿನ್ ಷೋ ನೋಡುವುದೇ ಒಂದು ಚಂದ, ಇವರಿಬ್ಬರ ಮಾತಿನ ಚಕಮಕಿ ಎಲ್ಲರಿಗೂ ತುಂಬಾ ಇಷ್ಟ. ಹೌದು ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಈ ಕಾಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ, ಮತ್ತು ತಪ್ಪದೇ ಶೇರ್ ಕೂಡ ಮಾಡಿ, ಧನ್ಯವಾದಗಳು....