ಪ್ರೀತಿಸಿ ಮದುವೆಯಾದ ಜೋಡಿ ಬಾಳಲ್ಲಿ ವಿಧಿಯಾಟ: ಡಿ ಬಾಸ್ ಬಗ್ಗೆ ದಿವ್ಯಶ್ರೀ ಹೇಳಿದ್ದೇನು..?

By Infoflick Correspondent

Updated:Saturday, March 26, 2022, 14:33[IST]

ಪ್ರೀತಿಸಿ ಮದುವೆಯಾದ ಜೋಡಿ ಬಾಳಲ್ಲಿ ವಿಧಿಯಾಟ: ಡಿ ಬಾಸ್ ಬಗ್ಗೆ ದಿವ್ಯಶ್ರೀ ಹೇಳಿದ್ದೇನು..?

ಪ್ರತಿಯೊಬ್ಬರ ಬಾಳಲ್ಲೂ ವಿಧಿ ಆಟವಾಡುತ್ತಿರುತ್ತದೆ. ನಾವೊಂದು ಬಯಸಿದರೆ ಆ ವಿಧಿಯೇ ಬೇರೆಯಾಗಿರುತ್ತದೆ. ಈ ಮಾತುಗಳಿಗೆ ಸತ್ಯ ನಿದರ್ಶನ ಎಂದರೆ ದಿವ್ಯಶ್ರೀ ಹಾಗೂ ವಿನಯ್ ಕುಮಾರ್ ದಂಪತಿ. ಇವರಿಬ್ಬರು ಎದುರು ಮನೆಯಲ್ಲೇ ಇದ್ದುಕೊಂಡು ಪ್ರೀತಿಸಿ, ಮನೆಯವರನ್ನೆಲ್ಲರನ್ನೂ ಒಪ್ಪಿಸಿ ಮದುವೆಯಾದವರು. ಕೊಳ್ಳೆಗಾಲದ ಉಗನಿಯ ಪಾಳ್ಯದ ಈ ಜೋಡಿ ಖುಷಿ ಖುಷಿಯಾಗಿ ಜೀವನ ನಡೆಸುತ್ತಿತ್ತು. ಆದರೆ, ಇವರು ಮದುವೆಯಾಗಿ ಕೇವಲ ಒಂದೇ ವರ್ಷದಲ್ಲೇ ವಿಧಿಯಾಟವಾಡಿತ್ತು. 

ಅದೊಂದು ದಿನ ಅಮ್ಮನ ಮನೆಗೆ ಎಂದು ವಿನಯ್ ಹಾಗೂ ದಿವ್ಯಶ್ರೀ ಹೊರಟಿದ್ದರು. ಇದ್ದಕ್ಕಿದ್ದಂತೆ ಎದುರು ಬಂದ ಗಾಡಿ ಇವರ ಬೈಕ್ ಗೆ ಗುದ್ದಿತ್ತು. ದಿವ್ಯಶ್ರೀ ಎದ್ದು ನೋಡಿದಾಗ ಆಕೆ ಚಾನೆಲ್ ನಲ್ಲಿ ಬಿದ್ದಿದ್ದಳು ಓಡಿ ಬಂದು ಪತಿಯನ್ನು ಹುಡುಕಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇದನ್ನು ಕಂಡು ಕಂಗಾಲಾದ ದಿವ್ಯಶ್ರೀ ಕೂಡಲೇ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ಪೆಟ್ಟು ಬಿದ್ದ ಕಾರಣ ತೀವ್ರವಾಗಿ ರಕ್ತ ಸ್ರಾವವಾಗಿತ್ತು. ಕೂಡಲೇ ದೊಡ್ಡ ಆಸ್ಪತ್ರೆಗೆ ಹೋಗಬೇಕಾಗಿ ಬಂತು. .

ಆಗ ವಿನಯ್ ಕುಮಾರ್ ಅವರನ್ನು ಡಿಆರ್ ಎಂ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಸರ್ಜರಿ ಮಾಡಿಸಲು ಮುಂದಾದರು ಆಗ ಹಣವಿಲ್ಲದೇ ದಿವ್ಯಶ್ರೀ ಮತ್ತೆ ಕಂಗಾಲಾದರು. ಆದರೆ ಆಸ್ಪತ್ರೆಯ ಡಾ.ಮಂಜುನಾಥ್ ಚಿಕ್ಕ ವಯಸ್ಸಿನ ಹುಡುಗ ಜೀವವಿದೆ. ಕೂಡಲೇ ಸರ್ಜರಿ ಮಾಡೋಣ ಎಂದು ಸರ್ಜರಿ ಮಾಡಿದ್ದಾರೆ. ಈ ಸಹಾಯವನ್ನು ನಾನೆಂದಿಗೂ ಮರೆಯೊಲ್ಲ ಎಂದು ದಿವ್ಯಶ್ರೀ ಹೇಳಿಕೊಂಡಿದ್ದಾರೆ. ಇನ್ನು ವಿನಯ್ ಕುಮಾರ್ ಗೆ ಅದಾಗಲೇ ಎರಡು ಸರ್ಜರಿಯಾಗಿದ್ದು, ಇನ್ನೂ ಕೈ ಆಪರೇಷನ್ ಕೂಡ ಆಗಬೇಕಿದೆ.   

ಆದರೆ ಕಳೆದೊಂದು ವರ್ಷದಿಂದ ಪತಿ ಸೇವೆ ಮಾಡುತ್ತಿದ್ದಾರೆ. ಆದರೆ ಈಗ ಮಾತ್ರೆಗಳಿಗೆ, ಅನ್ನಕ್ಕೂ ಹಣವಿಲ್ಲದಂತಹ ಸ್ಥಿತಿ ತಲುಪಿದ್ದಾರೆ. ಎಲ್ಲಾ ಕಡೆಯೂ ಸಾಲ ಮಾಡಿಕೊಂಡು ಒದ್ದಾಡುತ್ತಿದ್ದಾರೆ. ಇದೀಗ ದಿವ್ಯಶ್ರೀ ಅವರು ಡಿ ಬಾಸ್ ಗೆ ಮನವಿಯೊಂದನ್ನು ಮಾಡಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ. ತಾರಕ್ ಸಿನಿಮಾದಲ್ಲಿ ನೀವು ಆ ಹುಡುಗಿಗೆ ಸೇವೆ ಮಾಡಿದಂತೆ ನಾನು ನಿತ್ಯ ನನ್ನ ಪತಿಗೆ ಸೇವೆ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಈಗ ತೀರಾ ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದಾರೆ. ( video credit : good news kannada )