ಭರ್ಜರಿ ನಡೆದ ಡಿಕೆಶಿ ಪುತ್ರಿ ರಿಸೆಪ್ಷನ್ ಕಾರ್ಯಕ್ರಮ..! ಯಾರೆಲ್ಲ ಬಂದಿದ್ದರು ಈ ಫೋಟೋಸ್ ಮತ್ತು ವಿಡಿಯೋ ನೋಡಿ..!

Updated: Thursday, February 18, 2021, 11:35 [IST]

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿ ಪುತ್ರಿ ಐಶ್ವರ್ಯ ವ್ಯಾಲೆಂಟೈನ್ಸ್ ದಿನದಂದು ಸಪ್ತಪದಿ ತುಳಿದರು.
ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮೊಮ್ಮಗನಾದ ಹಾಗೇನೇ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಹೆಗ್ಡೆಯವರು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

ಬೆಂಗಳೂರಿನಲ್ಲಿ ವೈಟ್‍ಫೀಲ್ಡ್ ಹತ್ತಿರ ಖಾಸಗಿ ಹೋಟೆಲ್ ಒಂದರಲ್ಲಿ ಐಶ್ವರ್ಯ ಹಾಗೂ ಅಮರ್ತ್ಯ ಹೆಗಡೆಯವರ ವಿವಾಹ ಜರುಗಿತು. ಇದರ ನಡುವೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯರ ಮದುವೆ ಮುಂಚೆ ತೆಗೆದ ಮೆಹಂದಿಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಕಲರ್ಫುಲ್ ಆಗಿ ಕಂಡುಬಂದಿದ್ದು, ವಿಡಿಯೋ ನೋಡಲು ತುಂಬಾ ಸೊಗಸಾಗಿದೆ, ಜೊತೆಗೆ ಅಷ್ಟೇ ಮುದ್ದಾಗಿ ಮೂಡಿಬಂದಿದೆ. ಮತ್ತು ನಿನ್ನೆ ಕೂಡ ಈ ನವ ಜೋಡಿಯ ರಿಸೆಪ್ಷನ್ ಕೂಡ ನಡೆಯಿತು. 

ನಡೆದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಕೂಡ ಆಗಮಿಸಿದ್ದರು. ರಾಹುಲ್ ಗಾಂಧಿ ಕೂಡ ರಿಸೆಪ್ಶನ್ ನಲ್ಲಿ ಕಾಣಿಸಿಕೊಂಡರು. ಇನ್ನೂ ಅನೇಕ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದರು. ಜೊತೆಗೆ ನಮ್ಮ ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಕೂಡ ಡಿಕೆಶಿ ಪುತ್ರಿ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಕಾಣಿಸಿದರು. ಅಷ್ಟೇ ಸೊಗಸಾಗಿ ರಿಸೆಪ್ಶನ್ ಕಾರ್ಯಕ್ರಮ ಜರುಗಿದ್ದು, ಡಿಕೆಶಿ ಮಗಳ ಮದುವೆಯ ರಿಸೆಪ್ಶನ್ ನ ಈ ಫೋಟೋಗಳು ಇದೀಗ ತುಂಬಾ ವೈರಲ್ ಆಗುತ್ತಿವೆ. ಹಾಗಾಗಿ ನೀವು ಕೂಡ ಒಂದು ಬಾರಿ ಫೋಟೋಸ್ ನೋಡಿ, ಬಳಿಕ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ, ಹಾಗೆಯೇ ಈ ಜೋಡಿಗೆ ಶುಭಕೋರಿ ಧನ್ಯವಾದಗಳು...