ತಂದೆಯ ಆಸ್ತಿ ಬಿಟ್ಟೆ, ಡಿಕೆಶಿ ಅಳಿಯ ಅಮರ್ತ್ಯರವರ ಆಸ್ತಿ ಎಷ್ಟಿದೆ ಗೊತ್ತಾ..? ಶಾಕ್ ಆಗ್ತೀರಾ ಇಲ್ನೋಡಿ..!

Updated: Thursday, February 18, 2021, 14:38 [IST]

ನಮಸ್ಕಾರ ಗೆಳೆಯರೇ ಇದೀಗ ಎಲ್ಲರಿಗೂ ಗೊತ್ತಿರುವ ಹಾಗೆ ಅಮರ್ತ್ಯ ಹೆಗಡೆ ಅವರ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯರವರ ಮದುವೆ ವರ್ಣರಂಜಿತವಾಗಿ ನಡೆದಿದೆ. ದಂಪತಿಗಳಿಗೆ ಶುಭಾಶಯಗಳ ಮಹಾ ಪೂರವೇ ಈಗ ಹರಿದು ಬಂದಿದೆ. ಸಾಕಷ್ಟು ಗಣ್ಯರು ಮದುವೆಗೆ ಹೋಗಿ ವಧು ವರರಿಗೆ ಶುಭ ಹಾರೈಸಿದ್ದಾರೆ. ಅದ್ದೂರಿಯಾಗಿ ನಡೆದ ಈ ಮದುವೆ ಕಾರ್ಯದಲ್ಲಿ ಶಾಸ್ತ್ರ ಬದ್ದವಾಗಿ ಶಾಸ್ತ್ರೋಸ್ತವಾಗಿ ವಿವಾಹವೂ ಮುಗಿದಿದ್ದು ಇಬ್ಬರು ಸಪ್ತಪದಿ ತುಳಿದಿದ್ದಾರೆ.   

ಇನ್ನು ಈ ನವ ವಧು ವರರ ಮದುವೆಗೆ 800 ಗಣ್ಯರಿಗೆ ಆಹ್ವಾನ ನೀಡಲಾಗಿತ್ತು, ಆಹ್ವಾನ ಪಡೆದ ಬಹುತೇಕ ಜನರು ಗಣ್ಯರು, ಮದುವೆಗೆ ಹೋಗಿದ್ದು, ದಂಪತಿಗಳಿಗೆ ಶುಭಕೋರಿ ಆಶೀರ್ವಾದ ಮಾಡಿ ಹರಸಿ ಬಂದಿದ್ದಾರೆ..  ಇನ್ನು ಈ ಜೋಡಿಯ ಬಗ್ಗೆ ಮಾತನಾಡುವುದಾದರೆ, ಮೂಲತಹ ಉದ್ಯಮಿ ಕುಟುಂಬದ ಕಡೆಯಿಂದ ಬಂದ ಅಮರ್ತ್ಯ ಹೆಗಡೆಯವರು ಹಾಗೂ ಡಿಕೆಶಿ ಪುತ್ರಿ ಐಶ್ವರ್ಯ ಕೂಡ  ವಿವಿಧ ರೀತಿಯ ಉದ್ಯಮಗಳನ್ನು ನೋಡಿಕೊಳ್ಳುತ್ತಿದ್ದು ಈಗಾಗಲೇ ಇಬ್ಬರೂ ಸಹ, ಈ ಉದ್ಯಮಗಳನ್ನ ನೋಡಿಕೊಳ್ಳುವುದರಲ್ಲಿ ಒಂದು ಮಟ್ಟಿಗೆ ಯಶಸ್ಸು ಪಡೆದಿದ್ದಾರೆ ಎಂದು ತಿಳಿದುಬಂದಿದೆ.  

ಇನ್ನು ಡಿಕೆಶಿ ಪುತ್ರಿ ಐಶ್ವರ್ಯ ರವರ ಆಸ್ತಿ ನೂರು ಕೋಟಿಗೂ ಹೆಚ್ಚಿದೆ ಎಂಬ ಮಾಹಿತಿ ಈಗಾಗ್ಲೇ ನಿಮಗೂ ಗೊತ್ತಿದೆ. ಆದ್ರೆ ಅತ್ತ ತಂದೆ ಸಿದ್ದಾರ್ಥ್ ಅವರ ಹೆಸರಿನಲ್ಲಿ ಇರುವ ಮೊತ್ತ ಬಿಟ್ಟು, ಅಮರ್ತ್ಯ ಅವರ ನೆಟ್ ವರ್ಥ್ ನೋಡಿದ್ರೆ, ಒಟ್ಟು ಬರೊಬ್ಬರಿ 300 ಕೋಟಿ ಆಸ್ತಿಯನ್ನು ಅಮರ್ತ್ಯರವರು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ಅಮರ್ತ್ಯರವರ ತಂದೆಯಾದ ಸಿದ್ಧಾರ್ತ್ ಅವರ ಒಟ್ಟು ಆಸ್ತಿ ಹತ್ತು ಸಾವಿರ ಕೋಟಿಗೂ ಹೆಚ್ಚಿಗಿದೆ ಎಂಬ ಮಾಹಿತಿ ಕೇಳಿಬಂದಿದೆ...