ಪ್ರೇಮಿಗಳ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಪುತ್ರಿ..! ನೀವು ವಿಶ್ ಮಾಡಿ..! ವಿಡಿಯೋ ನೋಡಿ,

Updated: Sunday, February 14, 2021, 11:30 [IST]

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿ ಪುತ್ರಿ ಐಶ್ವರ್ಯ ವ್ಯಾಲೆಂಟೈನ್ಸ್ ದಿನದಂದು ಸಪ್ತಪದಿ ತುಳಿದಿದ್ದಾರೆ.  ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮೊಮ್ಮಗನಾದ ಹಾಗೇನೇ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಹೆಗ್ಡೆಯವರು, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ವೈಟ್‍ಫೀಲ್ಡ್ ಹತ್ತಿರ ಖಾಸಗಿ ಹೋಟೆಲ್ ಒಂದರಲ್ಲಿ ಐಶ್ವರ್ಯ ಹಾಗೂ ಅಮರ್ತ್ಯ ಹೆಗಡೆ ಯವರ ವಿವಾಹ ಜರುಗಿದೆ ಇಂದು ಬೆಳಿಗ್ಗೆ 9 ರಿಂದ 9-45 ರ ಒಳಗಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆಯಾಗಿದೆ.   

Advertisement

ಡಿ.ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಮದುವೆ ಸಮಾರಂಭದಲ್ಲಿ, ಕೆಲ ಗಣ್ಯರು, ಹಾಗೆ ಇವರ ಸಂಬಂಧಿಕರಿಗಷ್ಟೇ ಆಹ್ವಾನ ನೀಡಲಾಗಿದೆ. ಹಾಗೆ ಇವರಿಬ್ಬರ ಮದುವೆ ಅದ್ದೂರಿಯಾಗಿ ನೇರವೇರಿದೆ. ಕನ್ಯಾದಾನದ ಸಂದರ್ಭದಲ್ಲಿ ಡಿಕೆ ಶಿಯವರು ಕಣ್ಣೀರು ಹಾಕಿದ್ದಾರೆ. ಡಿ.ಕೆ.ಶಿ ಮನೆಯಲ್ಲಿ ಈ ಮದುವೆ ಸಂಭ್ರಮ ತುಂಬಾ ಜೋರಾಗಿಯೇ ಸದ್ದು ಮಾಡಿತು.ಹಾಗೇನೇ ನಿನ್ನ ನಡೆದಿರುವ ಮದುವೆ ಕಾರ್ಯಕ್ರಮದಲ್ಲಿ ‘ಅಪ್ಪಾ ಐ ಲವ್ ಯು’ ಹಾಡಿಗೆ ಮಗಳು ಐಶ್ವರ್ಯ ನೃತ್ಯ ಮಾಡುತ್ತಿದ್ದರೆ, ಇತ್ತ ತಂದೆ ಡಿಕೆ ಶಿವಕುಮಾರ್ ಅವರು, ಮಗಳ ನೃತ್ಯ ನೋಡಿಯೇ ಆನಂದಭಾಷ್ಪ ಹಾಕುತ್ತಿದ್ದರು.   

Advertisement

ತಮ್ಮ ಮಗಳ ವಿವಾಹ ಕಾರ್ಯದ ಎಲ್ಲಾ ಸಿದ್ಧತೆಯನ್ನು ಡಿಕೆ ಶಿವಕುಮಾರ್ ಅವರೇ ನೋಡಿಕೊಂಡು, ಎಲ್ಲಾ ಮುಂದೆ ನಿಂತು ಮಾಡಿದ್ದಾರೆ. ಮದುವೆಗೆ ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರು ಸಹ ಭಾಗಿಯಗಿದ್ದರು. ಮತ್ತು ಇದೆ ಫೇ 17 ರಂದು, ಹಲವು ಗಣ್ಯಾತೀಗಣ್ಯರು, ಸೆಲೆಬ್ರಿಟಿಗಳು ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಪ್ರೇಮಿಗಳ ದಿನದಂದು ಅತ್ತ, ಅಮರ್ತ್ಯ ಹೆಗಡೆಯವರನ್ನು ವರಿಸಿರುವುದು ತುಂಬಾ ವಿಶೇಷವಾಗಿದೆ..