ಕೊರೊನಾ ಮೂರನೇ ಅಲೆ ಇದೇ ತಿಂಗಳು ಅಪ್ಪಳಿಸಲಿದೆ: ವೈರಸ್‌ ನಿಂದ ಪಾರಾಗಲು ಡಾ.ಆಂಜನಪ್ಪ ಕೊಟ್ಟ ಸೂತ್ರಗಳನ್ನು ತಪ್ಪದೇ ಪಾಲಿಸಿ..

Updated: Thursday, September 16, 2021, 11:50 [IST]

ಕೊರೊನಾ ಮೂರನೇ ಅಲೆ ಇದೇ ತಿಂಗಳು ಅಪ್ಪಳಿಸಲಿದೆ: ವೈರಸ್‌ ನಿಂದ ಪಾರಾಗಲು ಡಾ.ಆಂಜನಪ್ಪ ಕೊಟ್ಟ ಸೂತ್ರಗಳನ್ನು ತಪ್ಪದೇ ಪಾಲಿಸಿ..

ಕೊರೊನಾ ಮೂರನೇ ಅಲೆ ಡೆಲ್ಟಾ ಪ್ಲಸ್‌ ಇದೇ ತಿಂಗಳು ರಾಜ್ಯಕ್ಕೆ ಅಪ್ಪಳಿಸೋದು ಗ್ಯಾರೆಂಟಿ ಎಂದು ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ಡೆಲ್ಟ್‌ ಪ್ಲಸ್‌ ಹಲವರಲ್ಲಿ ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ವ್ಯಾಕ್ಸಿನ್‌ ಹಾಕಿಸಿಕೊಳ್ಳದವರನ್ನು ಡೆಲ್ಟಾ ಪ್ಲಸ್‌ ಹೆಚ್ಚು ಕಾಡಲಿದ್ದು, ಎಚ್ಚರವಾಗಿರಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಮಕ್ಕಳಿಗೆ ಇನ್ನೂ ವ್ಯಾಕ್ಸಿನ್‌ ಸಿಗದ ಕಾರಣ, ಆದಷ್ಟು ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಡಾ. ಆಂಜನಪ್ಪ ಅವರು ಕೆಲ ಸೂತ್ರಗಳನ್ನು ನೀಡಿದ್ದಾರೆ. ಅದು ಏನೇನು ಎಂದು ನೋಡೋಣ ಬನ್ನಿ. 

ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟಲು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ನಮ್ಮಲ್ಲಿ ಇಮ್ಯೂನಿಟಿ ಬೂಸ್ಟ್‌ ಆಗಲು ಏನು ಮಾಡಬೇಕು.? ಹಾಗೊಂದುವೇಳೆ ಕೊರೊನಾ ಪಾಸಿಟಿವ್‌ ಬಂದರೆ ಏನು ಮಾಡಬೇಕು.? ಶುಗರ್‌ ಖಾಯಿಲೆ ಇರುವವರು ಯಾವೆಲ್ಲಾ ಆಹಾರ ಕ್ರಮಗಳನ್ನು ಪಾಲಿಸಬೇಕು.? ಮಕ್ಕಳ ಹಾರೈಕೆ ಹೇಗೆ ಮಾಡಬೇಕು.? ವಯಸ್ಸಾದವರನ್ನು ಹೇಗೆ ನೋಡಿಕೊಳ್ಳಬೇಕು.? ಎಂಬೆಲ್ಲಾ ವಿಚಾರಗಳನ್ನು ಡಾ ಆಂಜನಪ್ಪ ಅವರು, ಬಹಳ ವಿವರಾವಾಗಿ ತಿಳಿಸಿದ್ದಾರೆ. ನೀವು ಈ ಸುದ್ದಿಯನ್ನು ಓದಿ, ಕೊರೊನಾದ ಎಲ್ಲಾ ಅಲೆಗಳಿಂದ ಪಾರಾಗಿ.. 

ಕೊರೊನಾ ಮಹಾಮಾರಿಯ ಮೂರನೇ ಅಲೆ ವಿಶ್ವಾದ್ಯಂತ ವ್ಯಾಪಿಸಿದ್ದು, ನಿಧಾನವಾಗಿ ಹರಡುತ್ತಿದೆ. ಡೆಲ್ಟಾ ರೂಪಾಂತರಿ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಡೆಲ್ಟಾ ರೂಪಾಂತರಿ ಕೊರೊನಾ ಎರಡನೇ ಅಲೆಗೆ ಕಾರಣವಾಗಿತ್ತು. ಇದೀಗ ಡೆಲ್ಟಾ ಪ್ಲಸ್ ಹೊಸ ರೂಪಾಂತರದಿಂದಾಗಿ ಮೂರನೇ ಅಲೆಯಲ್ಲಿ ರೋಗದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಎರಡನೇ ಅಲೆಗಿಂತಲೂ ಮೂರನೇ ಅಲೆ ತೀವ್ರವಾಗಿ ಕಾಡಲಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡೆಲ್ಟಾ ಪ್ಲಸ್ ವೇರಿಯಂಟ್ b1617.2 ಸ್ತ್ರೈನ್ ನ ಮ್ಯೂಟೆಶನ್ ನಿಂದ ತಯಾರಾಗಿದೆ. ಈ ವೈರಸ್ ನ ಸ್ಪೈಕ್ ಪ್ರೋಟೀನ್ ನಲ್ಲಿಯೂ ಕೂಡ ಸ್ವಲ್ಪ ಪ್ರಮಾಣದ ಬದಲಾವಣೆಗಳು ಕಂಡು ಬಂದಿವೆ.

ಮ್ಯುಟೆಂಟ್ಗೊಳ್ಳುವ ವೈರಸ್‌ ಗಳ ಪರಿಣಾಮ ಕೊಂಚ ಹೆಚ್ಚಿರಲಿದೆ. ಅದು ತುಂಬ ಸರಾಗವಾಗಿ ಶ್ವಾಸಕೋಶ, ಹೃದಯ, ಮೆದುಳು, ಕಿಡ್ನಿ ಹಅಗೂ ಲಿವರ್‌ ಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೈರಸ್‌ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಡೆಲ್ಟಾ ಪ್ಲಸ್ ವೈರಾಣುವಿನ ರಿಯಾಕ್ಷನ್ ಕಡಿಮೆ ಇರುತ್ತದೆ. ಆದರೆ, ಲಸಿಕೆ ಹಾಕಿಸಿಕೊಳ್ಳದವರಿಗೆ ಡೆಲ್ಟಾ ಪ್ಲಸ್ ಹೆಚ್ಚಾಗಿ ಕಾಡಲಿದೆ ಎಂದು ಅಧ್ಯಾಯನ ಹೇಳಿದೆ. ಹೀಗಾಗಿ ಮಕ್ಕಳು ಆದಷ್ಟು ಎಚ್ಚರವಾಗಿರಬೇಕು. ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳುವುದೊಂದೆ ಪರಿಹಾರ ಎಂದು ವೈದ್ಯ ಆಂಜನಪ್ಪ ಅವರು ತಿಳಿಸಿದ್ದಾರೆ. 

ಲಸಿಕೆ ಹಾಕಿಸಿಕೊಂಡವರನ್ನು ಡೆಲ್ಟಾ ಪ್ಲಸ್ ವೈರಸ್ ಹೆಚ್ಚಾಗಿ ಕಾಡುವುದಿಲ್ಲ. ವೈರಸ್ ಬಂದು ಹೋಗುತ್ತದೆ ಅಷ್ಟೇ. ಆದರೆ, ಲಸಿಕೆ ಹಾಕಿಸಿಕೊಳ್ಳದವರನ್ನು ಈ ರೂಪಾಂತರಿ ವೈರಸ್ ಕಾಡುತ್ತದೆ. ಇದರಿಂದ ಚೇತರಿಸಿಕೊಳ್ಳುವುದು ಕೂಡ ತುಂಬಾ ಕಷ್ಟ ಎಂದು ಹೇಳಿದ್ದಾರೆ. ಅದರಲ್ಲೂ ಯುವಜನರನ್ನು ಈ ರೂಪಾಂತರಿ ವೈರಸ್ ಕಾಡುತ್ತದೆ. ಇದರಿಂದ ಯುವಜನತೆ ಆಸ್ಪತ್ರೆ ಸೇರಬೇಕಾಗಿ ಬರುತ್ತದೆ ಎಂದು ಹೇಳಿದ್ದಾರೆ. ಇನ್ನು ಡೆಲ್ಟಾ ಪ್ಲಸ್ ವೈರಸ್ ಎಲ್ಲರನ್ನೂ ಕಾಡುತ್ತದೆ ಎಂಬ ಭಯವಿದ್ದರೂ ಕೂಡ ಸಾರ್ವಜನಿಕರು ಮಾತ್ರ ಕ್ಯಾರೆ ಎನ್ನದೆ, ಪ್ರವಾಸಗಳನ್ನು ಕೈಗೊಂಡಿದ್ದಾರೆ. ವೀಕೆಂಡ್ ಟ್ರಿಪ್, ಧಾರ್ಮಿಕ ಸ್ಥಳಗಳು, ಬೀಚ್, ಟ್ರಕಿಂಗ್ ಎಂದೆಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೇ, ಮದುವೆ ಸಮಾರಂಭಗಳಿಗೂ ಹೋಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜನರು ಮತ್ತೆ ಮಾಸ್ಕ್ ಇಲ್ಲದೇ ಓಡಾಡಲು ಶುರು ಮಾಡಿದ್ದಾರೆ. ಇದರಿಂದ ತುಂಬಾ ದೊಡ್ಡ ದಂಡವನ್ನೇ ತೆತ್ತಬೇಕಆಗಬಹುದು ಎಂದು ಹೇಳಿದ್ದಾರೆ. 

ಇನ್ನು ಶುಗರ್‌ ಪೇಶೆಂಟ್‌ ಗಳು ಕೆಲ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ತರಕಾರಿ-ಸೋಪ್ಪು ಸೇವನೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ. ಮಕ್ಕಳಿರುವವರು ತಪ್ಪದೇ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು ಮಕ್ಕಳಿಗೆ ವೈರಸ್‌ ಹರಡದಂತೆ ನೋಡಿಕೊಳ್ಳಬೇಕು. ಆದಷ್ಟು ಬೆಂದ ಆಹಾರ, ಬಿಸಿ ಬಿಸಿ ಆಹಾರ ಸೇವಿಸಬೇಕು. ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಉತ್ತಮ. ಇಮ್ಯೂನಿಟಿ ಕಡಿಮೆ ಇರುವ ಅಂದರೆ, ವಯ್ಯಸ್ಸಾದ ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂತಹವರು ಕೊರೊನಾ ನಿಯಮವನ್ನು ತಪ್ಪದೇ, ಎಚ್ಚರಿಕರಯಿಂದ ಪಾಲಿಸಬೇಕು ಎಂದು ಡಾ. ಆಂಜನಪ್ಪ ಅವರು ತಿಳಿಸಿದ್ದಾರೆ.  (ವಿಡಿಯೋ ಕೃಪೆ :  ಈ ಸಂಜೆ ನ್ಯೂಸ್    )