ಹೊಸ ವರ್ಷಕ್ಕೆ ಜಿಗಿಯುತ್ತಾ ಬಂಗಾರದ ಬೆಲೆ !! ತಜ್ಞರ ಮಾತಿದು ನೋಡಿ !!

Updated: Monday, December 28, 2020, 11:50 [IST]

ಅನಿಶ್ಚಿತತೆಯ ಹೊತ್ತಿನಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. 2020ರಲ್ಲಿ ಬೃಹತ್‌ ಮಟ್ಟಕ್ಕೆ ಏರಿದ್ದ ಚಿನ್ನದ ದರ 2021ರಲ್ಲಿ ಇನ್ನಷ್ಟು ಏರಲಿದೆ, 10 ಗ್ರಾಮ್‌ಗೆ 63,000 ರೂ. ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಹೊಸ ವರ್ಷದಲ್ಲಿ ಡಾಲರ್‌ ಮೌಲ್ಯವು ಇನ್ನಷ್ಟು ಕುಸಿಯಲಿದ್ದು, ಚಿನ್ನಕ್ಕೆ ಬೇಡಿಕೆ ಹೆಚ್ಚುವ ಅವಕಾಶಗಳಿವೆ. 2020ರ ಆರಂಭದಲ್ಲಿ ಕೋವಿಡ್‌ ಹೊಡೆತಕ್ಕೆ ಆರ್ಥಿಕತೆಗೆ ಹೊಡೆತ ಬಿದ್ದಿತ್ತು. ಆರ್ಥಿಕ ಮತ್ತು ಸಾಮಾಜಿಕ ತಲ್ಲಣಗಳಿಂದಾಗಿ ಷೇರುಪೇಟೆ ಕುಸಿದಿತ್ತು. ಷೇರುಪೇಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಚಿನ್ನದತ್ತ ಹೂಡಿಕೆದಾರರು ಗಮನ ನೆಟ್ಟಿದ್ದರು.

 

Advertisement

ಆಗಸ್ಟ್‌ ನಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಮ್‌ಗೆ ಸಾರ್ವಕಾಲಿಕ ಗರಿಷ್ಠ ದರವಾದ 56,191 ರೂ.ಗೆ ಜಿಗಿದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್‌ಗೆ 2,075 ಡಾಲರ್‌ಗೆ ಏರಿತ್ತು. 2020ರ ವರ್ಷದ ಆರಂಭದಲ್ಲಿ ಚಿನ್ನದ ದರವು 39,100 ರೂ. ಇತ್ತು. ಔನ್ಸ್‌ಗೆ 1,517 ಡಾಲರ್‌ ಇತ್ತು. ಕೋವಿಡ್‌ ಬಿಕ್ಕಟ್ಟಿನ ಹೊತ್ತಿನಲ್ಲಿ 38,400 ರೂ.ಗೆ ಕುಸಿಯಿತು. ಬಳಿಕ ನಿಧಾನವಾಗಿ ಏರುತ್ತಾ, ಒಂದು ಹಂತದಲ್ಲಿ ಸಾರ್ವಕಾಲಿಕ 56,191 ರೂ.ಗೆ ತಲುಪಿತ್ತು. ಕೋವಿಡ್‌ಗೆ ಲಸಿಕೆ ಬಂದರೂ ಚಿನ್ನದ ಬೇಡಿಕೆಯು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಕಾಮೆಟ್ರೆಂಡ್ಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸರ್ವೀಸ್‌ ಸಿಇಒ ಜ್ಞಾನಶೇಖರ್‌ ರಾಜನ್‌ ಹೇಳಿದ್ದಾರೆ.   

Advertisement

''ಭಾರತ ಮತ್ತು ಚೀನಾದಲ್ಲಿ ಮುಂದಿನ ವರ್ಷವೂ ಭೌತಿಕ ರೂಪದ ಚಿನ್ನಕ್ಕೆ ಬೇಡಿಕೆ ಇರಲಿದೆ. ನಮ್ಮ ಅಂದಾಜಿನ ಪ್ರಕಾರ 60,000 ರೂ.ಗಾದರೂ ಮುಟ್ಟಲಿದೆ. ರೂಪಾಯಿ ಸ್ಥಿರವಾಗಿರಲಿದೆ,'' ಎಂದು ಅವರು ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಸೆಕ್ಯೂ ರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ಸಹ ಈ ಅಂಶವನ್ನೇ ಹೇಳಿದ್ದಾರೆ. ''ಆರ್ಥಿಕತೆ ಉತ್ತೇಜಿಸುವ ಕ್ರಮಗಳಿಂದ ಆರ್ಥಿಕ ಚಟುವಟಿ ಕೆಗಳು ಮತ್ತು ಕಾರ್ಮಿಕ ಮಾರುಕಟ್ಟೆಯು ಬೆಳವಣಿಗೆ ಕಾಣಲಿದೆ. ಈ ಅಂಶಗಳು ಚಿನ್ನದ ದರವನ್ನು ಮೇಲ್ಮಟ್ಟದಲ್ಲೇ ಇಡಲಿವೆ,'' ಎಂದು ತಪನ್‌ ಪಟೇಲ್‌ ಅಭಿಪ್ರಾಯಪಟ್ಟಿದ್ದಾರೆ.