Chandra Shekhar Guruji : ಚಂಖದ್ರಶೇಖರ ಗುರೂಜಿ ಕೊಲೆಗೆ ಆ ಹೆಣ್ಣೇ ಕಾರಣ..!!

By Infoflick Correspondent

Updated:Wednesday, July 6, 2022, 15:07[IST]

Chandra Shekhar Guruji : ಚಂಖದ್ರಶೇಖರ ಗುರೂಜಿ ಕೊಲೆಗೆ ಆ ಹೆಣ್ಣೇ ಕಾರಣ..!!

ಮಾನವ ಗುರು ಎಂದೇ ಖ್ಯಾತಿ ಪಡೆದಿದ್ದ ಸರಳ ವಾಸ್ತು ಮುಖ್ಯಸ್ಥ ಚಂದ್ರಶೇಖರ್ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ. ಗುರೂಜಿ ಕೊಲೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹಾಡಗಲೇ ಚಾಕುವಿನಿಂದ ಇರಿದು ಗುರೂಜಿ ಅವರ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ್ಯಂತ ಹಲವರಿಗೆ ವಾಸ್ತು ಶಾಸ್ತ್ರ ಹೇಳಿದ್ದ ಗುರೂಜಿಯ ಹಿನ್ನೆಲೆ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು, ಕೊಲೆಗೆ ಕಾರಣವನ್ನು ಹುಡುಕಲಾಗುತ್ತಿದೆ. 

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಚಂದ್ರಶೇಖರ್ ಗುರುಜಿ ಹಲವು ವರ್ಷಗಳಿಂದ ವಾಸ್ತು ಶಾಸ್ತ್ರ ಹೇಳುತ್ತಿದ್ದರು. ಸಿವಿಲ್ ಎಂಜಿನಿಯರಿಂಗ್ ಓದಿದ್ದ ಚಂದ್ರಶೇಖರ್‌ ಅವರು ಸೇನೆ ಸೇರಬೇಕೆಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಗುರೂಜಿ ಮುಂಬಯಿಗೆ ತೆರಳಿ ಕೆಲಸ ಮಾಡಿ,  ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶೂ ಬಗ್ಗೆ ಅಧ್ಯಯನ ಮಾಡಿದರು. ನಂತರ ಇದರಲ್ಲಿ ಭವಿಷ್ಯ ಕಂಡುಕೊಂಡರು. ಪೆಂಗ್ ಶೂ ಬಗ್ಗೆ ಅಧ್ಯಯನಕ್ಕಾಗಿ ಚಂದ್ರಶೇಖರ್‌ ಸಿಂಗಾಪುರಕ್ಕೆ ತೆರಳಿದ್ದರು. ಸುಮಾರು ಆರು ವರ್ಷಗಳ ಕಾಲ ಅಧ್ಯಯನ ಮಾಡಿ ಭಾರತಕ್ಕೆ ವಾಪಸ್‌ ಆದರು.  

ರಾಜ್ಯದಲ್ಲಿಆಗಮಿಸಿದ ಅವರು ಸರಳವಾಸ್ತು ಸಂಸ್ಥೆಯನ್ನು ಪ್ರಾರಂಭಿಸಿದರು. ಇದರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದರು. ರಾಜಕಾರಣಿಗಳ ಜೊತೆಗೆ ಸಂಪರ್ಕ ಹೊಂದಿದ್ದರು. ಹತ್ಯೆ ಆರೋಪಿಗಳಾದ ಮಹಾಂತೇಶ ಹಾಗೂ ಮಂಜುನಾಥ್‌ ಇಬ್ಬರೂ ಗುರೂಜಿ ಅವರ  ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲೇ ಕೆಲಸ ಮಾಡುತ್ತಿದ್ದ ವನಜಾಕ್ಷಿ ಎಂಬುವರನ್ನು ಮಹಾಂತೇಶ್‌ ಮದುವೆಯಾಗಿದ್ದರು. ಈ ಮೂವರಿಗೂ ಗುರೂಜಿ ಅವರ ವ್ಯವಹಾರಗಳು ಗೊತ್ತಿತ್ತು.  

ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದಳು. ಇವಳ ಹೆಸರಿಗೆ ಗೋಕುಲ ರಸ್ತೆಯಲ್ಲಿದ್ದ ಅಪಾರ್ಟ್‌ಮೆಂಟ್‌ ಸೇರಿದಂತೆ ಕೆಲ ಆಸ್ತಿಗಳನ್ನು ನೋಂದಾಯಿಸಲಾಗಿತ್ತು. ಈ ವ್ಯವಹಾರದ ವಿಚಾರವಾಗಿ ಕಿತ್ತಾಟ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ವನಜಾಕ್ಷಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.