ರಮೇಶ್ ಜಾರಕಿಹೊಳಿ ಕೊರಳಿಗೆ ಸುತ್ತಿಕೊಂಡ ಯುವತಿ ಆಗಾಗ ವಿಧಾನಸೌಧಕ್ಕೆ ಹೋಗಿ ಬರುತ್ತದ್ದದ್ದು ನಿಜಾನಾ..? ಸಿಬ್ಬಂದಿ ಏನು ಹೇಳುತ್ತಾರೆ ನೋಡಿ

Updated: Thursday, March 4, 2021, 16:25 [IST]

ರಮೇಶ್ ಜಾರಕಿಹೊಳಿ ಗೆ ರಾಸಲೀಲೆ ಸಂಬಂಧ ಯುವತಿ ಆಗಾಗ ವಿಧಾನ ಸೌಧಕ್ಕೆ ಬಂದು ಹೋಗುತ್ತಿದ್ದಳು ಎಂಬ ಮಾಹಿತಿ ದೊರೆತಿದೆ. ವಿಧಾನಸೌಧದಲ್ಲಿದ್ದ ರಮೇಶ್ ಜಾರಕಿಹೊಳಿ ಅವರ ಕಚೇರಿಗೆ ಆ ಯುವತಿ ಆಗಾಗ ಬಂದು ಹೋಗುತ್ತಿದ್ದಳು. ಯುವತಿ ರಮೇಶ್ ಜಾರಕಿಹೊಳಿಗೆ ಮದಲೇ ಪರಿಚಿತಳಾಗಿದ್ದವಳೂ ಎಂದು ವಿಧಾನಸೌಧದ ಸಿಬ್ಬಂದಿಯೊಬ್ಬರು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಜಲಸಂಪನ್ಮೂಲ ಸಚಿವ ಖಾತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಕಾರಣವಾದ, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸೆಕ್ಸ್ ಸಿಡಿ ಪ್ರಕರಣದ ಪ್ರಮುಖ ಕೇಂದ್ರಬಿಂದು  

ವಿಡಿಯೊದಲ್ಲಿರುವ ನಿಗೂಢ ಯುವತಿ ಕಳೆದ ಏಳೆಂಟು ತಿಂಗಳಿನಿಂದ ವಿಧಾನ ಸೌಧಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಳು ಎಂಬ ಮಾಹಿತಿ ಸಿಕ್ಕಿದೆ. ಒಮ್ಮೆ ಇದೇ ಯುವತಿ ವಿಧಾನಸೌಧದಲ್ಲಿ ಜಾರಕಿಹೊಳಿ ಕಚೇರಿ ಬಳಿ ಮೂವರು ಪುರುಷರೊಂದಿಗೆ ಬಂದು ತನ್ನ ಸಹೋದ್ಯೋಗಿಗಳೆಂದು ಪರಿಚಯ ಮಾಡಿಕೊಟ್ಟಿದ್ದಳು ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ. ಇದೀಗ ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಸಿಬ್ಬಂದಿ ಹೇಳುವ ಪ್ರಕಾರ ಯುವತಿ ವಿಧಾನಸೌಧಕ್ಕೆ ಬಂದಾಗ ಮೂವರು ಹುಡುಗರನ್ನು ಸಹ ಕರೆತಂದಿದ್ದಳು ಎಂದು ಹೇಳಿದ್ದಾರೆ  

 ಅಲ್ಲದೇ ಈ ಸಿಬ್ಬಂದಿಯೊಡನೆ ಆ ಯುವತಿ ಮಾತನಾಡಿದ್ದು, ಸಾಕ್ಷ್ಯಾ ಚಿತ್ರ ನಿರ್ಮಾಣದ ಸಹಾಯ ಕೇಳಿ ರಮೇಶ್ ಜಾರಕಿಹೊಳಿ ಬಳಿ ಬಂದಿರುವುದಾಗಿ ತಿಳಿಸಿದ್ದಳಂತೆ. ತಮ್ಮೂರಿನ ಡ್ಯಾಂಗಳ ಚಿತ್ರೀಕರಣಕ್ಕೆ ಡ್ರೋನ್ ಬಳಕೆ ಮಾಡಲು ಪರ್ಮಿಷನ್ ಕೊಡಿ ಎಂದು ಕೇಳಿದ್ದಳಂತೆ. ಅಲ್ಲದೇ ಈ ಯುವತಿ ವಿಧಾನಸೌಧವಲ್ಲದೇ, ಬೆಂಗಳೂರಿನ ಹೊರಗಡೆಯೂ ಹಲವು ಬಾರಿ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿರುವುದನ್ನು ನೋಡಿದ್ದೇಣೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. 

ಜೊತೆಗೆ ರಮೇಶ್ ಜಾರಕಿಹೊಳಿ ಅವರು ಕೂಡ ಈ ಯುವತಿಯನ್ನು ಹಲವು ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟಿದ್ದರು. ಆಕೆಯ ಕೆಲಸಕ್ಕೆ ಬೇಕಾದ ಸಹಾಯ ಮಾಡುವಂತೆ ಸೂಚಿಸಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಯುವತಿ ಬಡವಳಾಗಿದ್ದು, ಕೆಲಸ ಕೇಳಿಕೊಂಡು ಹೋಗಿದ್ದಕ್ಕೆ ರಮೇಶ್ ಜಾರಕಿಹೊಳಿ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂಬುದು ಸುಳ್ಳು ಎಂದು ಸಿಬ್ಬಂದಿ ಹೇಳಿದ್ದಾರೆ.