ಹುಡುಗಿಯನ್ನು ಹುಡುಗಿಯೇ ಮದುವೆಯಾದ ಈ ಜೋಡಿ ಕಥೆಯೇನು ಗೊತ್ತಾ..?

By Infoflick Correspondent

Updated:Friday, September 9, 2022, 10:09[IST]

ಹುಡುಗಿಯನ್ನು ಹುಡುಗಿಯೇ ಮದುವೆಯಾದ ಈ ಜೋಡಿ ಕಥೆಯೇನು ಗೊತ್ತಾ..?

ಇತ್ತೀಚೆಗೆ ಮದುವೆಯ ಕಾನ್ಸೆಪ್ಟ್‌ ಬದಲಾಗಿ ಬಿಟ್ಟಿದೆ. ಈಗ ಮದುವೆಯಾಗುವವರು ಯಾರ ಒಪ್ಪಿಗೆಯನ್ನೂ ಪಡೆಯುವುದಿಲ್ಲ. ತಮ್ಮ ಬದುಕು. ತಮ್ಮಿಷ್ಟ ಎಂದು ಜೀವಿಸುತ್ತಿದ್ದಾರೆ. ವಯಸ್ಸಾದವರು ಇನ್ನೂ ಹದಿಹರಯದವರನ್ನು ಮದುವೆಯಾಗುತ್ತಾರೆ. ಕೆಲವರು ಚಿಕ್ಕವಯಸ್ಸಿನಲ್ಲೇ ಪ್ರೀತಿಸಿ ಮದುವೆಯಾಗುತ್ತಾರೆ. ಕೆಲ ಮದುವೆಗಳು ಬಲವಂತವಾಗಿದ್ದರೆ, ಮತ್ತೆ ಕೆಲವು ಇಷ್ಟಪಟ್ಟಿದ್ದಾಗಿರುತ್ತದೆ. ಮದುವೆಯೆಂದರೆ ಹುಡುಗ ಮತ್ತು ಹುಡುಗಿ ಮದುವೆಯಾಗುವುದು. 

ಇದು ಯುಗ ಯುಗಗಳಿಂದ ಲೂ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಈಗಿನ ಟ್ರೆಂಡ್ ಸಿಕ್ಕಾಪಟ್ಟೆ ನದಲಾಗಿದೆ. ಹುಡುಗಿ ಹುಡುಗಿಯನ್ನು, ಹುಡುಗ ಹುಡುಗನನ್ನು ಕೂಡ ಮದುವೆಯಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಸ್ವಯಂ ವಿವಾಹ ಕೂಡ ಮಾಡಿಕೊಳ್ಳುತ್ತಾರೆ. ಇದೀಗ ಹಾಗೆಯೇ ತಮಿಳುನಾಡು ಹಾಗೂ ಬಾಂಗ್ಲಾದೇಶದ ಇಬ್ಬರು ಯುವತಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆ ನಡೆದಿರುವುದು ತಮಿಳುನಾಡಿನಲ್ಲಿ.    

ತಮಿಳು ಯುವತಿ ಸುಭಿಕ್ಷಾ ಸುಬ್ರಹ್ಮಣಿ ಹಾಗೂ ಬಾಂಗ್ಲಾದೇಶದ ಟೀನಾ ದಾಸ್  ಬ್ರಾಹ್ಮಣರ ಸಾಂಪ್ರದಾಯದಂತೆ ವಿವಾಹವಾಗಿದ್ದಾರೆ. ಕಳೆದ ವಾರ ಗಣೇಶ ಹಬ್ಬದಂದು ಮದುವೆಯಾಗಿದ್ದು, ಸುಭಿಕ್ಷಾ ಡೆಲಾಯ್ಟ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಟೀನಾ ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿದ್ದಾರೆ. ಟೀನಾ ಲೆಸ್ಬಿಯನ್‌ ಆಗಿದ್ದು, ಮೊದಲು ಮದುವೆಯಾಗಿದ್ದರಂತೆ. ನಂತರ ಆತನಿಗೆ ಡಿವೋರ್ಸ್‌ ಕೊಟ್ಟರು. ಬಳಿಕ ಸುಭಿಕ್ಷಾರನ್ನು ಮದುವೆಯಾಗುವ ನಿರ್ಧಾರ ಮಾಡಿದರು. ಸುಭೀಕ್ಷಾ ಅವರ ಮದುವೆಗೆ ಮೊದಲು ಯಾರೂ ಒಪ್ಪಿರಲಿಲ್ಲ. ನಂತರ ಸಮಾಜಕ್ಕೆ ಹೆದರುವ ಬದಲು, ನಮ್ಮ ಮಗಳ ಸಂತೋಷ ಮುಖ್ಯ ಎಂದು ತಿಳಿದರು. ಹಾಗಾಗಿ ಸುಭೀಕ್ಷಾ ಅವರ ಇಷ್ಟದಂತೆ ಮದುವೆ ಮಾಡಲು ಮುಂದಾದರು. ಸುಭೀಕ್ಷಾ ಮನೆಯಲ್ಲಿ ಒಪ್ಪಿಗೆ ಮೇರೆಗೆ ಅವರ ಸಂಪ್ರದಾಯದಂತೆಯೇ ಮದುವೆಯನ್ನು ಮಾಡಿಕೊಡಲಾಯ್ತು. ಈಗ ಇಬ್ಬರೂ ಕೆನಡಾದಲ್ಲಿ ನೆಲೆಸಲು ಮುಂದಾಗಿದ್ದಾರೆ.