. ಗೋಲ್ಡ್ ಖರೀದಿಗೆ ಇದೇ ಗೋಲ್ಡನ್ ಟೈಂ: 8 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ದರ!

Updated: Thursday, February 18, 2021, 09:03 [IST]

ನಮಸ್ಕಾರ ಗೆಳೆಯರೇ,  ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡುವ ಬಂಗಾರದ ಬೆಲೆ ಮಾತ್ರ ಬಾರಿ ಕುಸಿತ ಕಂಡಿದೆ. ಹೌದು ಪ್ರಿಯ ಮಿತ್ರರೇ, ಚಿನ್ನದ ಬೆಲೆಯಲ್ಲಿ ಕಳೆದ ಒಂದು ವಾರದಿಂದ ದಾಖಲೆ ಕುಸಿತ ಕಂಡಿದೆ. ಹಾಗೆನೇ ನಮ್ಮ ಕರ್ನಾಟಕದಲ್ಲಿ ಇದೀಗ ಚಿನ್ನದ ಬೆಲೆ ಎಷ್ಟಾಗಿದೆ ಎಂದು ನೋಡೊಣ ಬನ್ನಿ..ಸತತ ಐದು ದಿನಗಳಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ದರವು ಗುರುವಾರ ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಆಮದು ಮೇಲಿನ ಸುಂಕವನ್ನು ಕಡಿಮೆ ಮಾಡುವ ಘೋಷಣೆ, ಅಮೆರಿಕನ್ನರು ತಮ್ಮ ಚಿನ್ನದ ಹೂಡಿಕೆಯ ಒಂದು ಭಾಗವನ್ನು ಬಾಂಡ್‌ಗಳ ಮೇಲೆ ಹೂಡುತ್ತಿರುವ ಪರಿಣಾಮ ಚಿನ್ನದ ದರವು ಗಗನದಿಂದ ಭೂಮಿಗಿಳಿಯುತ್ತಿದೆ!    

Advertisement

ಇಂದಿನ ೧೦ ಗ್ರಾ ಚಿನ್ನದ ಬೆಲೆ 43750/- ಮತ್ತು ಅಪರಂಜಿ ಚಿನ್ನದ ಬೆಲೆ ೧೦ ಗ್ರಾಮ್ಗೆ 47730 /- ಆಗಿದೆ 

ಮೊನ್ನೆ ಮೊನ್ನೆಯಷ್ಟೇ ಒಂದು ಗ್ರಾಂಗೆ ಚಿನ್ನದ ಬೆಲೆ 5,600 ರೂಪಾಯಿ ಗಡಿ ದಾಟಿತ್ತು, ಆದರೆ ಇದೀಗ ಸ್ವಲ್ಪ  ಕುಸಿತ ಕಂಡಿದ್ದು, 1ಗ್ರಾಂ ಗೆ 4400 ರೂಪಾಯಿಯವರೆಗೆ ಬಂದು ತಲುಪಿದೆ. ಹೌದು ಇದೀಗ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲಿ ಜಾಸ್ತಿಯಾಗುತ್ತಿದ್ದು, ಶೇರು ಮಾರುಕಟ್ಟೆಯು ಏರುತ್ತಿರುವ ಕಾರಣಕ್ಕೆ ಚಿನ್ನದ ಬೇಡಿಕೆ ಕಡಿಮೆಯಾಗಿದೆಯಂತೆ...ಇಂದು ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ದರ 4380 ರುಪಾಯಿಗೆ ಬಂದು ನಿಂತಿದೆ. ಹೌದು ಗೆಳೆಯರೇ ದಿನೇ ದಿನೇ 50 ರಿಂದ 100 ರೂಪಾಯಿಯಂತೆ ಚಿನ್ನದ ಬೆಲೆ ಇದೀಗ ಇಳಿಯುತ್ತಲೇ ಇದೆ. ಮತ್ತು ಮುಂದಿನ ಮಾರ್ಚ್ ತಿಂಗಳಲ್ಲಿ 4 ಸಾವರಿಕ್ಕಿಂತ ಕಡಿಮೆಯಾಗುತ್ತದೆ    

Advertisement

ಚಿನ್ನದ ಬೆಲೆ ಎಂದು ಆರ್ಥಿಕ ತಜ್ಞರು ಈಗಾಗ್ಲೇ ಅಭಿಪ್ರಾಯವನ್ನ ತಿಳಿಸಿದ್ದಾರೆ. ಕಡಿಮೆ ಬೆಲೆ ಇದ್ದಾಗ ಚಿನ್ನ ಖರೀದಿಸುವುದು ಎಂದರೆ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಅನುಸಾರ ಒಂದು ಗ್ರಾಮ್ ಚಿನ್ನದ ಬೆಲೆ ಎಷ್ಟಾದಲ್ಲಿ ನಿಮಗೆ ಖುಷಿಯಾಗುತ್ತದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಈ ಮೇಲಿನ ಮಾಹಿತಿಯನ್ನ ತಪ್ಪದೆ ಶೇರ್ ಮಾಡಿ, ಧನ್ಯವಾದಗಳು....