ನಾಲ್ಕು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ಬೆಲೆ..! ಇಷ್ಟು ಕಡಿಮೆ ಆಗಿದೆಯಾ..?

Updated: Friday, February 12, 2021, 11:59 [IST]

ಇವತ್ತಿನ ಚಿನ್ನದ ಬೆಲೆ ಬೆಂಗಳೂರಿನಲ್ಲಿ  ೨೨ ಕ್ಯಾರಟ್  ೧೦ ಗ್ರಾಂ ಗೆ  Rs. 44,550  ಮಾತು ಅಪರಂಜಿ ಚಿನ್ನದ ಬೆಲೆ ೧೦ ಗ್ರಾಮ್ಗೆ Rs. 48,600   ಹಾಗು ಬೆಳ್ಳಿಯ ಬೆಲೆ ಒಂದು ಕೆಜಿ ಗೆ Rs.68,೮೦೦ ಇದೆ .ಮತ್ತಷ್ಟು ಬೆಲೆ ಹೆಚ್ಚಾಗುವ ಮುನ್ನ ಇಂದೇ ಖರೀದಿಸಿ 

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಸತತ ನಾಲ್ಕು ದಿನಗಳ ಏರಿಕೆಯ ನಂತರ ಗುರುವಾರ ಇಳಿಕೆ ಕಂಡಿದೆ. ನಾಲ್ಕು ದಿನಗಳ ಏರಿಕೆ ಬಳಿಕ, 10 ಗ್ರಾಂಗೆ 0.32% ರಷ್ಟು ಕುಸಿದಿದ್ದು, 47,857 ರೂಪಾಯಿಗೆ ಬಂದು ನಿಂತಿದೆ, ಹಾಗೆ ಇದು ಎಂಸಿಎಕ್ಸ್‌ ನಲ್ಲಿಯ ಚಿನ್ನದ ಭವಿಷ್ಯವಾಗಿದೆ.

ಹಾಗೇನೇ ಅತ್ತ ಬೆಳ್ಳಿ ಭವಿಷ್ಯವು ಕೂಡ ಪ್ರತಿ ಕೆಜಿಗೆ ಶೇಕಡಾ 1ರಷ್ಟು ಇಳಿದಿದ್ದು, 68,275 ರೂಪಾಯಿಗೆ ಬಂದಿದೆ. ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ, ಔನ್ಸ್‌ಗೆ  0.2% ರಷ್ಟು ಇಳಿಕೆ ಕಂಡಿದ್ದು, ಒಟ್ಟು 1,838.41 ಡಾಲರ್‌ಗೆ ತಲುಪಿದೆ ಎಂದು ಕೇಳಿಬಂದಿದೆ.

ಬೇರೆ ಬೇರೆ ಅಮೂಲ್ಯ ಲೋಹಗಳ ತರ, ಸ್ಪಾಟ್ ಸಿಲ್ವರ್ ಕೂಡ ಶೇಕಡಾ 0.4ರಷ್ಟು ಇಳಿಕೆ ಕಂಡಿದ್ದು, ಒಟ್ಟು 26.89 ಡಾಲರ್‌ಗೆ ಬಂದು ನಿಂತಿದೆ. ಹಾಗೆ ಪಲ್ಲಾಡಿಯಮ್ ಸಹ 0.2% ರಷ್ಟು ಇಳಿಮುಖವಾಗಿದ್ದು 2,351.24 ಡಾಲರ್‌ಗೆ ಬಂದಿದೆ.  

Advertisement

ಅಮೆರಿಕಾದ ನೂತನ ಅಧ್ಯಕ್ಷರಾಗಿರುವ, ಜೋ ಬೈಡೆನ್ ಆರ್ಥಿಕ ಪರಿಹಾರ ಪ್ಯಾಕೇಜಿನ ಘೋಷಣೆಯು ಅತ್ತ ವಿಳಂಬವಾಗುವುದರ ಜೊತೆಗೆ ಹೂಡಿಕೆ ಹಾಕುವವರ ನಿರೀಕ್ಷೆಗಳು ಸಹ ಹೆಚ್ಚಾಗಿವೆಯಂತೆ.

ರಾಯಿಟರ್ಸ್ ವರದಿ ಮಾಡಿದ ಹಾಗೆ, ಜನವರಿಯಲ್ಲಿ ನಮ್ಮ ಭಾರತದಲ್ಲಿ ಚಿನ್ನದ ಆಮದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 72% ರಷ್ಟು ಏರಿಕೆ ಆಗಿದೆ ಎಂದು ಆಭರಣ ವ್ಯಾಪಾರಿಗಳು ಹಾಗೂ ಚಿಲ್ಲರೆ ಖರೀದಿದಾರರು ದಾಖಲೆಯ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ....