ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ ; ಈಗಲೇ ಖರೀದಿಸಿ ಎಷ್ಟು ಕಡಿಮೆಯಾಗಿದೆ ಗೊತ್ತಾ ?

Updated: Monday, March 8, 2021, 09:22 [IST]

ಹೌದು ದಿನದಿಂದ ದಿನಕ್ಕೆ ಚಿನ್ನದ ಬೆಲೆ ಇಳಿಯುತ್ತಲೇ ಇದೆ. ಆದರೆ ಇದು ಹೀಗೆ ಇಳಿಕೆ ಆಗುತ್ತೆ ಅಂತ ಹೇಳುವದಕ್ಕೆ ಬರುವದಿಲ್ಲ . ಏಕೆಂದ್ರೆ ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ನಿರ್ಧಾರವಾಗುತೆ . ಅದಕ್ಕಾಗೇ ಈಗ ಚಿನ್ನದ ಬೆಲೆ ಬಹಳಷ್ಟು ಇಳಿಕೆಯಾಗಿರುವಾಗಲೇ ಚಿನ್ನ ಖರೀದಿ ಮಾಡುವದು ಅತುತ್ತಮ . ಇಂದಿನ  ಚಿನ್ನದ ಬೆಲೆ 22 ಕ್ಯಾರಟ್  ಒಂದು ಗ್ರಾಂ ಗೆ   4145/- ಇದೆ . ಮತ್ತು 10 ಗ್ರಾಂ ಗೆ 41450/- ಇದೆ . ಮತ್ತು ಅಪರಂಜಿ ಚಿನ್ನದ ಬೆಲೆ    24 ಕ್ಯಾರಟ್      ಒಂದು ಗ್ರಾಂ ಗೆ 4522/- ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 45220/- ಇದೆ .     

Feb 24, 2021  ರಂದು ೨೨ಕ್ಯಾರಟ್  ಚಿನ್ನದ ಬೆಲೆ  ₹43750   ಇತ್ತು   ಅಂದರೆ  13 ದಿನದಲ್ಲಿ ಸುಮಾರು  ಪ್ರತಿ ಹತ್ತು ಗ್ರಾಂ ಗೆ 22 ಕ್ಯಾರಟ್  ಚಿನ್ನದ ಬೆಲೆ  2300  ನಷ್ಟು ಕಡಿಮೆಯಾಗಿದೆ..

ಕಳೆದ ವರ್ಷ 2020 ರ ಆಗಸ್ಟ್‌ನಲ್ಲಿ ಚಿನ್ನದ ಬೆಲೆಯು  ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಪ್ರತಿ 10 ಗ್ರಾಂ  ಅಪರಂಜಿ ಚಿನ್ನದ ಬೆಲೆ 56,200 ರೂಪಾಯಿಗೆ ಬಂದು ನಿಂತಿತ್ತು. ಆದರೆ ಇದೀಗ 11,000 ರೂಪಾಯಿಗೆ ಭರ್ಜರಿಯಾಗಿ ಇಳಿಕೆಯಾಗಿರುವ ಚಿನ್ನದ ಬೆಲೆ ಈಗ ಒಟ್ಟು 45,220 ರೂಪಾಯಿಗೆ ಬಂದು ನಿಂತಿದೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.. ಮತ್ತು ಅದೇ ರೀತಿ ೨೨ ಕ್ಯಾರಟ್ ಚಿನ್ನದ ಬೆಲೆ   ಕಳೆದ ವರ್ಷ 2020 ರ ಆಗಸ್ಟ್‌ನಲ್ಲಿ 49600 ಇತ್ತು ಈಗ ಇಂದಿನ ಚಿನ್ನದ ಚಿನ್ನದ ಬೆಲೆ 41450  ಇಳಿದಿದೆ ಅಂದ್ರೆ ಸುಮಾರು 8150  ಬೆಲೆ ಇಳಿದಿದೆ.    

ಈಗಾಗಲೆ ಜನರು ಚಿನ್ನದ ಅಂಗಡಿಗಳಲ್ಲಿ ಚಿನ್ನ ಕೊಳ್ಳಲು ಕ್ಯೂ ನಿಂತಿದ್ದಾರೆ . ಕಾಲಿಡಲು ಜಾಗವಿಲ್ಲದಸ್ಟು ಜನರು ತುಂಬಿ ತುಳುಕಾಡುತ್ತಿದ್ದರೆ . ಇನ್ನು ತಡವೇಕೆ ಚಿನ್ನ ಕೊಳ್ಳಲು ಇಂದೇ ಚಿನ್ನದ ಅಂಗಡಿಗೆ ಭೇಟಿ ಕೊಡಿ .

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ, ಚಿನ್ನದ ಬೆಲೆ ಹೆಚ್ಚು ಏರಿಳಿತ ಕಾಣುತ್ತಿದ್ದು ಇದಕ್ಕೆ ಕಾರಣ, ಷೇರು ಮಾರುಕಟ್ಟೆ ಅಸ್ಥಿರತೆಯಂತೆ. ಹಾಗೂ ಡಾಲರ್ ಮೌಲ್ಯದಲ್ಲಿ ಸಹ ಏರಿಳಿತ ಆಗುತ್ತಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುವ ಬೆಲೆಯ ಅಸ್ಥಿರತೆಗಳು ಭಾರತ ದೇಶದಲ್ಲಿಯ ಚಿನ್ನದ ಮಾರುಕಟ್ಟೆಯ ಮೇಲೂ ಸಹ ಪ್ರಭಾವ ಬೀಳುತ್ತಿದೆ. ಹಾಗಾಗಿ ಚಿನ್ನ ಈ ವಾರವೂ ಇಳಿಮುಖವಾಗಿಯೇ ಬೆಲೆ ಮುಂದುವರಿಯಬಹುದು ಎಂದು ಹೇಳುತ್ತಿದ್ದಾರೆ ಮಾರುಕಟ್ಟೆ ತಜ್ಞರು...