ಕನ್ನಡಿಗರ ಆರಾಧ್ಯದೈವ ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ ಹ್ಯಾರಿಸ್..! ವಿಡಿಯೋ ನೋಡಿ

Updated: Wednesday, February 17, 2021, 19:35 [IST]

ಹೌದು ಈಗಷ್ಟೇ ಮಾಧ್ಯಮ ಮೂಲಕ ತಿಳಿದುಬಂದಿರುವ ಹಾಗೆ ಶಾಂತಿನಗರದ ಶಾಸಕ ಎನ್ ಎ ಹ್ಯಾರಿಸ್ ನಮ್ಮ ಕನ್ನಡದ ಕಣ್ಮಣಿ ಆರಾಧ್ಯದೈವ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಮತ್ತು ಅವರ ಪ್ರತಿಮೆ ಬಗ್ಗೆ ಕೇವಲವಾಗಿ ಮಾತನಾಡಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಹೌದು ಹ್ಯಾರಿಸ್ ಹೇಳಿದ ಹಾಗೆ ಡಾಕ್ಟರ್ ರಾಜ್ ಕುಮಾರ್ ಪ್ರತಿಮೆ ಯಾಕೆ ಇಡಬೇಕು ಇವರಿಗೆ ಪ್ರೊಟೆಕ್ಷನ್ ಬೇಕು ಎಂದರೆ, ಇವರ ಪ್ರತಿಮೆಯನ್ನು ಇವರ ಮನೆಯಲ್ಲಿ ಇಟ್ಟುಕೊಳ್ಳಲಿ, ಪ್ರತಿಮೆಯನ್ನು ಯಾಕೆ ಇಟ್ಟಿದ್ದೀರಾ ಎನ್ನುವ ಮಟ್ಟಕ್ಕೆ ಈ ಮನುಷ್ಯ ಪ್ರಶ್ನೆ ಮಾಡಿ ಮಾತನಾಡಿದ್ದಾರೆ ಎಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.   

Advertisement

ಹಾಗೆ ಇವರ ವಿಡಿಯೋವನ್ನು ಲೇಖನದ ಕೊನೆಯಲ್ಲಿ ನೀವು ಒಂದು ಬಾರಿ ನೋಡಿಬಿಡಿ. ಎಷ್ಟು ದೈರ್ಯವಿದ್ದರೆ ಈತ ಹೀಗೆ ಮಾತಾಡುತ್ತಾನೆ, ವಿಡಿಯೋ ನೋಡುತ್ತಿದ್ದರೆ ಕನ್ನಡಿಗರಿಗೆ ಎಲ್ಲಿಲ್ಲದ ಸಿಟ್ಟು ಬರುವಂತಿದೆ. ಮತ್ತು ಇವರ ಪ್ರತಿಮೆಗೆ ಕವರ್ ಏಕೆ ಬೇಕು ಎಂದು ಹ್ಯಾರಿಸ್ ಮಾತಾಡಿದ್ದು ಈತನ ವಿಡಿಯೋ ಇದೀಗ ಆಕ್ರೋಶಕ್ಕೆ ಒಳಗಾಗಿದೆ. ಹ್ಯಾರಿಸ್ ಹೇಳುತ್ತಿದ್ದ ರೀತಿ ನೋಡಿ ನಮ್ಮ  ಕೆಲ ಜನರು, ಈ ಹ್ಯಾರಿಸ್ ತಮಿಳಿಗರನ್ನು ತಮ್ಮ ಕಡೆಗೆ ಒಲೆಸಿಕೊಳ್ಳುವ ಹಂತದಲ್ಲಿ ಈ ರೀತಿ ಕನ್ನಡದ ಕಣ್ಮಣಿ ಡಾಕ್ಟರ್ ರಾಜಕುಮಾರ್ ಅವರಿಗೆ ಮತ್ತು ಅವರ ಪ್ರತಿಮೆಗೆ ಅವಮಾನ ಮಾಡಿ ಮಾತಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.    

Advertisement

 

ಹಾಗಾಗಿ ಇನ್ನೂ ಏನೆನೆಲ್ಲ ಈ ಹ್ಯಾರಿಸ್ ರಾಜ್ ಕುಮಾರ್ ಅವರ ಬಗ್ಗೆ ಹೇಳಿದ ಎಂದು ಈ ವಿಡಿಯೋವನ್ನ ನೋಡಿ, ಬಳಿಕ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ, ಹಾಗೆ ಈತ ಈ ರೀತಿ ಡಾಕ್ಟರ್ ರಾಜ್ ಕುಮಾರ್ ಅವ್ರ ಬಗ್ಗೆ ಮತ್ತು ಅವ್ರ ಪ್ರತಿಮೆ ಬಗ್ಗೆ ಮಾತಾಡಿದ್ದು ತಪ್ಪು ಎಂದು ಎಲ್ಲರೆದುರು ಕ್ಷಮೆ ಕೇಳುವವರೆಗೂ ಈ ವೀಡಿಯೊವನ್ನು ಶೇರ್ ಮಾಡಿ ವೈರಲ್ ಮಾಡಿ ಧನ್ಯವಾದಗಳು...